Advertisement

ಚಿನ್ನಕ್ಕೆ ಹೆಚ್ಚಿದ ಹೊಳಪು: ದಿಲ್ಲಿಯಲ್ಲಿ 10 ಗ್ರಾಂಗೆ 30,050 ರೂ.

07:00 AM Aug 18, 2017 | Team Udayavani |

ಹೊಸದಿಲ್ಲಿ: ಜಾಗತಿಕ ಟ್ರೆಂಡ್‌ ಮತ್ತು ಸ್ಥಳೀಯವಾಗಿ ಬೇಡಿಕೆ ಹೆಚ್ಚಳ ಚಿನ್ನಕ್ಕೆ ಇನ್ನಷ್ಟು ಹೊಳಪು ನೀಡಿದೆ. ಹೀಗಾಗಿ, ಹಬ್ಬ ಹರಿದಿನ ಗಳಿವೆ ಎಂದು ಚಿನ್ನ ಖರೀದಿಸುವು ದಿದ್ದರೆ ಆದಷ್ಟು ದೂರ ಉಳಿಯು ವುದು ಒಳಿತು. ಏಕೆಂದರೆ, ಗುರುವಾರ ಒಂದೇ ದಿನ ಚಿನ್ನದ ದರ 300 ರೂ.ಗಳಷ್ಟು ಏರಿಕೆ ಕಂಡಿದ್ದು, ದಿಲ್ಲಿಯಲ್ಲಿ 10 ಗ್ರಾಂಗೆ ರೂ. 30,050ಕ್ಕೆ ತಲುಪಿದೆ.

Advertisement

ಇನ್ನೊಂದೆಡೆ, ಬೆಳ್ಳಿಗೆ 900 ರೂ.ಗಳಷ್ಟು ಏರಿಕೆಯಾಗಿದ್ದು, ಕೆಜಿ ಬೆಳ್ಳಿ ದರ ರೂ. 40,200 ಆಗಿದೆ. ಅಮೆರಿಕದಲ್ಲಿ ಸಾಲದ ಮೇಲಿನ ಬಡ್ಡಿ ದರ ಯಥಾ ಸ್ಥಿತಿ ಕಾಯ್ದುಕೊಳ್ಳುವ ಕುರಿತು ನಿರ್ಧಾರವಾದ ಬೆನ್ನಲ್ಲೇ ಚಿನಿವಾರ ಪೇಟೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚಿನ ಹಣ ಹೂಡಿದರು. ಜಾಗತಿಕ ಮಟ್ಟದಲ್ಲೂ ಪ್ರಮುಖ ಕರೆನ್ಸಿಗಳ ಮುಂದೆ ಡಾಲರ್‌ ಕುಸಿತ ದಾಖಲಿ ಸಿತು. ಇದು ಕೂಡ ಚಿನ್ನದ ದರ ಏರಿಕೆಗೆ ಕಾರಣವಾಯಿತು. ಮುಂಬಯಿಯಲ್ಲಿ ಸ್ಟಾ éಂಡರ್ಡ್‌ ಚಿನ್ನದ ದರ 305 ರೂ. ಏರಿಕೆಯಾಗಿ, 10 ಗ್ರಾಂಗೆ ರೂ. 28,960 ಆದರೆ, ಶುದ್ಧ ಚಿನ್ನ ದರ ರೂ. 29,110ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next