Advertisement

ಚಿನ್ನ ಕಳ್ಳ ಸಾಗಣೆ: ಸಿಂಗಾಪುರ ಏರ್‌ ಲೈನ್ಸ್‌ ಸಿಬಂದಿ ಅರೆಸ್ಟ್‌

04:13 PM Jan 24, 2018 | udayavani editorial |

ಹೊಸದಿಲ್ಲಿ : ಸುಮಾರು 31 ಲಕ್ಷ ರೂ. ಮೌಲ್ಯದ ಚಿನ್ನವನ್ನು ದೇಶದೊಳಗೆ ಕಳ್ಳ ಸಾಗಣೆ ಮಾಡಲು ತರಲೆತ್ನಿಸಿದ  ಸಿಂಗಾಪುರ ಏರ್‌ ಲೈನ್ಸ್‌ ನ ಚಾಲಕ ಸಿಬಂದಿಯೋರ್ವರನ್ನು ಕಸ್ಟಮ್ಸ್‌ ಅಧಿಕಾರಿಗಳು ಇಂದು ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು. 

Advertisement

ಸಿಂಗಾಪುರದಿಂದ ಬಂದೊಡನೆಯೇ ಇಲ್ಲಿ ಆರೋಪಿಯನ್ನು ಬಂಧಿಸಲಾಗಿ ಆತನಿಂದ 1.04 ಕಿಲೋ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡರು. ಇದರ ಮಾರುಕಟ್ಟೆ ಮೌಲ್ಯ ಸುಮಾರು 31.25 ಲಕ್ಷ ರೂ. ಎಂದು ಕಸ್ಟಮ್ಸ್‌ ಹೇಳಿಕೆ ತಿಳಿಸಿದೆ. 

ತಾನು ಚಿನ್ನ ಕಳ್ಳಸಾಗಣೆ ಮಾಡಿರುವುದು ಇದು ಎರಡನೇ ಸಲ; ಕಳೆದ ಸಲವೂ ಇಷ್ಟೇ ಪ್ರಮಾಣದ ಚಿನ್ನವನ್ನು ತಂದಿದ್ದೆ  ಎಂದು ಆರೋಪಿಯು ಹೇಳಿರುವುದಾಗಿ ಕಸ್ಟಮ್ಸ್‌ ಅಧಿಕಾರಿ ತಿಳಿಸಿದ್ದಾರೆ.  ಇವುಗಳ ಒಟ್ಟು ಮೌಲ್ಯ 62.5 ಲಕ್ಷ ರೂ.ಗಳೆಂದು ಅವರು ಹೇಳಿದರು. 

ಚಿನ್ನ ಕಳ್ಳಸಾಗಣೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ತನ್ನ ಚಾಲಕ ಸಿಬಂದಿಯ ತನಿಖೆಗೆ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಸಿಂಗಾಪುರ ಏರ್‌ ಲೈನ್ಸ್‌ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next