ಬೆಂಗಳೂರು: ಮೈಲಸಂದ್ರದಲ್ಲಿರುವ ರಾಮ್‌ದೇವ್ ಜ್ಯುವೆಲ್ಲರ್ ಆ್ಯಂಡ್ ಬ್ರೋಕರ್ಸ್ ಅಂಗಡಿಗೆ ನುಗ್ಗಿ ಮಾಲೀಕನನ್ನು ದರೋಡೆ ಮಾಡಿ ಪರಾರಿಯಾಗಿದ್ದ ನಾಲ್ವರನ್ನು ಸಿನಿಮೀಯ ಶೈಲಿಯಲ್ಲಿ ಎಲೆ ಕ್ಟ್ರಾನಿಕ್ ಸಿಟಿ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ.
ರಾಜಸ್ಥಾನದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ವಾಹನ ದಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು 3 ಕಿ.ಮೀ. ವರೆಗೆ ಚೇಸ್ ಮಾಡಿ ಬಂಧಿಸಲಾಗಿದೆ. ರಾಜಸ್ಥಾನ ಮೂಲದ ದೇವಾರಾಮ್, ರಾಹುಲ್ ಸೋಲಂಕಿ, ಅನಿಲ್, ರಾಮ್‌ಸಿಂಗ್ ಬಂಧಿತರು.
ತಲೆಮರೆಸಿಕೊಂಡಿರುವ ಮತ್ತೂಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಂಧಿತರಿಂದ 2 ಪಿಸ್ತೂಲ್, 3 ಸಜೀವ ಗುಂಡುಗಳು, ಸ್ಥಳದಲ್ಲಿ ಫೈಯರಿಂಗ್ ಆಗಿರುವ 3 ಖಾಲಿ ಕೋಕ ಜಪ್ತಿ ಮಾಡಲಾಗಿದೆ. ಭವರ್‌ಲಾಲ್ ಮೈಲಸಂದ್ರದಲ್ಲಿ ರಾಮ್‌ದೇವ್ ಜ್ಯುವೆಲ್ಲರ್ ಅಂಗಡಿ ಹೊಂದಿದ್ದರು. ಜು.4ರಂದು ಬೆಳಗ್ಗೆ 7.15ಕ್ಕೆ ಇವರ ಅಳಿಯ ಧರ್ಮೆಂದ್ರ ಲತನ್‌ಲಾಲ್ ಅಂಗಡಿಯನ್ನು ತೆರೆಯುತ್ತಿದ್ದಾಗ ಗ್ರಾಹಕರ ಸೋಗಿನಲ್ಲಿ ಆರೋಪಿಗಳು ಇವರ ಅಂಗಡಿಗೆ ಆಗಮಿಸಿದ್ದರು. ಕತ್ತಿನ ಬೆಳ್ಳಿ ಸರ ತೋರಿಸುವಂತೆ ಸೂಚಿಸಿದ್ದರು. ಧರ್ಮೇಂದ್ರ ಜ್ಯುವೆಲರ್ ಒಳ ಹೋಗುತ್ತಿ ದ್ದಂತೆ ತಮ್ಮ ಬಳಿಯಿದ್ದ ಪಿಸ್ತೂಲ್ ಅನ್ನು ನೌಕರನಿಗೆ ತೋರಿಸಿ, ಹೆದರಿಸಿ ಆತನನ್ನು ಲಾಕರ್ ಇರುವ ರೂಂಗೆ ತಳ್ಳಿಕೊಂಡು ಹೋಗಿ ಕೈ-ಕಾಲುಗಳನ್ನು ಕಟ್ಟಿದ್ದರು. ನಂತರ ಜ್ಯುವೆಲ್ಲರ್ ನ ಲಾಕರ್ ನಲ್ಲಿ ಇಟ್ಟಿದ್ದ 1.58 ಕೋಟಿ ರೂ. ಮೌಲ್ಯದ ಚಿನ್ನಾಭರಣ, 80 ಸಾವಿರ ರೂ. ನಗದು, ಅಂಗಡಿಯಲ್ಲಿ ಅಳವಡಿಸಿದ್ದ ಡಿವಿಆರ್ ಅನ್ನು ದೋಚಿದ್ದರು.
ಕೃತ್ಯ ಇದೇ ಮೊದಲಲ್ಲ: ರಾಜಸ್ಥಾನ ಮೂಲದ ಬಂಧಿತ ನಾಲ್ವರು ಹಾಗೂ ಮತ್ತೋರ್ವ ಆರೋಪಿಯು ಕುಖ್ಯಾತ ದರೋಡೆಕೋರನಾಗಿದ್ದು, ವಿವಿ ಧೆಡೆ ಮನೆಗೆ ಕನ್ನ, ಸುಲಿಗೆ, ದರೋಡೆ ಮಾಡುತ್ತಿ ದ್ದರು. ದೇವಾರಾಮ್ ಹುಳಿಮಾವಿನಲ್ಲಿ ಈ ಹಿಂದೆ ಎಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡಿದ್ದ. ಇದರಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿಗಳು ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಕೃತ್ಯ ಎಸಗಿದ್ದರು. ಕೃತ್ಯ ಎಸ ಗುವ 15 ದಿನ ಮುನ್ನ ರಾಜಸ್ಥಾನದಿಂದ ಬೆಂಗಳೂ ರಿಗೆ ಬಂದು ಸಂಬಂಧಿಕರ ಮನೆಯಲ್ಲಿ ಉಳಿದು ಕೊಂಡಿದ್ದರು. ಬೆಂಗಳೂರಿನ ವಿವಿಧೆಡೆ ಸುತ್ತಾಡಿ ದರೋಡೆಗೆ ಸಂಚು ರೂಪಿಸುತ್ತಿದ್ದರು ಎಂದು ತಿಳಿದು ಬಂದಿದೆ.
ರಾಜಸ್ಥಾನದಲ್ಲಿ ಕಾರ್ಯಾಚರಣೆ ಹೇಗಿತ್ತು?: ಪ್ರಕರಣ ದಾಖಲಿಸಿಕೊಂಡ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ರಾಜಸ್ಥಾನದ ಪೊಲೀಸರನ್ನು ಸಂಪರ್ಕಿಸಿ ಪ್ರಕರಣದ ವಿವರ ನೀಡಿದ್ದರು. ಕರ್ನಾಟಕ ಮೂಲದ ರಾಜಸ್ಥಾನ ಐಪಿಎಸ್ ಅಧಿಕಾರಿ ಎಂ.ಎನ್.ದಿನೇಶ್ ಸಹಕಾರದೊಂದಿಗೆ ಆರೊಪಿಗಳಿ ಗಾಗಿ ಪತ್ತೆ ಕಾರ್ಯ ನಡೆಸಿದ್ದರು. ಆ ವೇಳೆ ಚಿತ್ತೂರ್‌ಘರ್ ಜಿಲ್ಲೆಯ, ಬೇಗೂಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಗಳು ಇರುವ ಸುಳಿವು ಸಿಕ್ಕಿತ್ತು. ಇನ್ನೇನು ಆರೋಪಿಗಳನ್ನು ಬಂಧಿಸಬೇಕು ಎನ್ನುವಷ್ಟರಲ್ಲಿ ಪೊಲೀಸರ ಮೇಲೆಯೇ ಆರೋಪಿಗಳು ತಮ್ಮ ಬಳಿಯಿದ್ದ ಪಿಸ್ತೂಲ್‌ನಿಂದ ಗುಂಡಿನ ದಾಳಿ ನಡೆಸಿ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಕರ್ನಾಟಕ ಪೊಲೀಸರು, ಸಿನಿಮೀಯ ಶೈಲಿಯಲ್ಲಿ 3 ಕಿ.ಮೀ.ವರೆಗೆ ಆರೋಪಿಗಳ ವಾಹನವನ್ನು ತಮ್ಮ ಜೀಪ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದರು. ನಂತರ ಆರೋಪಿಗಳ ವಾಹನವನ್ನು ತಡೆದು ನಾಲ್ವರನ್ನು ಬಂಧಿಸಿದ್ದರು