Advertisement

ಏಷ್ಯನ್‌ ಯೂತ್‌ ಬಾಕ್ಸಿಂಗ್‌: ಭಾರತ ವನಿತೆಯರಿಗೆ 3 ಚಿನ್ನ

06:00 AM Apr 28, 2018 | Team Udayavani |

ಬ್ಯಾಂಕಾಕ್‌: ವಿಶ್ವ ಚಾಂಪಿಯನ್‌ ನೀತು ಗಂಗಾಸ್‌ ಅವರು ಏಷ್ಯನ್‌ ಯೂತ್‌ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಭಾರತದ ಚಿನ್ನದ ಬೇಟೆಯ ಬಾಗಿಲು ತೆರೆದಿದ್ದಾರೆ. ಭಾರತೀಯ ವನಿತಾ ಬಾಕ್ಸರ್‌ಗಳ ಉತ್ತಮ ನಿರ್ವಹಣೆಯಿಂದ ಭಾರತ ಮೊದಲ ದಿನ ಮೂರು ಚಿನ್ನದ ಪದಕ ಗೆದ್ದುಕೊಂಡಿದೆ.

Advertisement

ಒಲಿಂಪಿಕ್ಸ್‌ಗೆ ಅರ್ಹತಾ ಕೂಟ 48 ಕೆ.ಜಿ. ವಿಭಾಗದಲ್ಲಿ ನೀತು ಸ್ಥಳೀಯ ಫೇವರಿಟ್‌ ನಿಲಾದ ಮೀಕೂನ್‌ ಅವರನ್ನು ಕೆಡಹಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟರು. ಆಬಳಿಕ ಮನೀಷಾ (64 ಕೆ.ಜಿ.) ಮತ್ತು ಲಲಿತಾ (69 ಕೆ.ಜಿ.) ವಿಭಾಗದಲ್ಲಿ ಅಗ್ರಸ್ಥಾನ ಪಡೆದರು. ಈ ಸ್ಪರ್ಧೆ ಮುಂದಿನ ಅಕ್ಟೋಬರ್‌ನಲ್ಲಿ ಆರ್ಜೆಂಟೀನಾದಲ್ಲಿ ನಡೆಯುವ ಯೂತ್‌ ಒಲಿಂಪಿಕ್ಸ್‌ಗೆ ಅರ್ಹತಾ ಕೂಟವೂ ಆಗಿದೆ.

60 ಕೆ.ಜಿ.ಯಲ್ಲಿ ಅಂಕಿತ್‌ ಖಟಾನ, 51 ಕೆ.ಜಿ.ಯಲ್ಲಿ ಅನಾಮಿಕಾ ಮತ್ತು 81 ಕೆ.ಜಿ. ವಿಭಾಗದಲ್ಲಿ ಸಾಕ್ಷಿ ಬೆಳ್ಳಿಯ ಪದಕ ಪಡೆದಿದ್ದಾರೆ. ಅಂಕಿತ್‌ ಫೈನಲ್‌ನಲ್ಲಿ ಥಾಲಂಡಿನ ಅತಿಚಾಯ್‌ ಪೋಮ್‌ಸ್ಯಾಪ್‌ ಅವರ ಕೈಯಲ್ಲಿ ಶರಣಾದರು. ಯೂತ್‌ ಒಲಿಂಪಿಕ್ಸ್‌ಗಿರುವ ಅರ್ಹತೆ ಯಂತೆ ಭಾರತೀಯ ಪುರುಷರು ಆಯ್ಕೆ ಯಾಗಿಲ್ಲ. ಆದರೆ ಅನಾಮಿಕಾ ಮತ್ತು ಆಸ್ತಾ  ಆಯ್ಕೆಯಾಗಿದ್ದಾರೆ. ಅವರು ಸ್ಪರ್ಧಿಸುತ್ತಿರುವ ಭಾರ ಮಿತಿ ವಿಭಾಗವು ಯೂತ್‌ ಒಲಿಂಪಿಕ್ಸ್‌ ನಲ್ಲಿ ಇರುವ ಕಾರಣ ಆಯ್ಕೆಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next