Advertisement

ಸಿಬಿಐ ಸೋಗಿನಲ್ಲಿ 1 ಕೆ.ಜಿ. ಚಿನ್ನ ದರೋಡೆ

02:03 PM Mar 02, 2022 | Team Udayavani |

ಕೋಲಾರ: ಸಿಬಿಐ ಅಧಿಕಾರಿಗಳೆಂದು ಮನೆಗೆ ನುಗ್ಗಿದ ಐವರು ಮನೆಯಲ್ಲಿದ್ದವರಿಗೆ ಗನ್‌ಪಾಯಿಂಟ್‌ ತೋರಿಸಿ 20 ಲಕ್ಷ ನಗದು ಮತ್ತು1 ಕೆ.ಜಿ. ಚಿನ್ನ ದರೋಡೆ ಮಾಡಿರುವ ಘಟನೆ ಇಲ್ಲಿನ ಸಿ.ಭೈರೇಗೌಡ ನಗರದ ಮನೆಯಲ್ಲಿ ಸೋಮವಾರ ರಾತ್ರಿ ಜರುಗಿದೆ.

Advertisement

ಬೈರೇಗೌಡ ಬಡಾವಣೆಯ ವ್ಯಾಪಾರಿಹಾಗೂ ಫೈನಾನ್ಸ್‌ ವ್ಯವಹಾರ, ಎಪಿಎಂಸಿ ಮಾಜಿಅಧ್ಯಕ್ಷ ರಮೇಶ್‌ ಎಂಬುವರ ಮನೆಗೆ ಐದುಜನರ ಗುಂಪೊಂದು ನಾವು ಸಿಬಿಐ ಅ ಕಾರಿಗಳು,ಐಟಿ ಅಧಿಕಾರಿಗಳು ಎಂದು ಹೇಳಿಕೊಂಡು ಸಂಜೆ 8 ಗಂಟೆ ಸಮಯದಲ್ಲಿ ಮನೆಗೆಬಂದಿದ್ದಾರೆ. ಈ ವೇಳೆ ಆಗಷ್ಟೇ ಮನೆಗೆ ಬಂದಿದ್ದ ರಮೇಶ್‌ ಮನೆಯ ಬಾಗಿಲು ತೆಗೆಯುತ್ತಿದ್ದಂತೆಅವರ ಮೊಬೈಲ್‌ಗ‌ಳನ್ನು ಕಿತ್ತುಕೊಂಡು ಒಳ ನುಗ್ಗಿದ ಐವರ ತಂಡ ತಾವು ಅಧಿಕಾರಿಗಳೆಂದು ಹೇಳಿ ಹೆದರಿಸಿ ಅವರನ್ನು ಕೂರಿಸಿ ಮನೆಯಎಲ್ಲಾ ಲಾಕರ್‌ಗಳ ಬೀಗದ ಕೀಗಳನ್ನು ಪಡೆದುಮನೆಯಲ್ಲಿದ್ದ ಹಣ ಒಡವೆಗಳನ್ನು ತೆಗೆದುಕೊಂಡಿದ್ದಾರೆ. ಈ ವೇಳೆಅನುಮಾನಗೊಂಡ ಪ್ರಶ್ನೆ ಮಾಡಿದ್ದಕ್ಕೆರಿವಾಲ್ವಾರ್‌ ತೋರಿಸಿ ಕೈಕಾಲು ಕಟ್ಟಿ, ಕುತ್ತಿಗೆ ಬಳಿ ಚಾಕು ಇಟ್ಟು ಹೆದರಿಸಿದ್ದಾರೆ.

ಬಳಿಕ ಮನೆಯಲ್ಲಿದ್ದವರ ಕೈಕಾಲು ಕಟ್ಟಿಹಾಕಿದ ಆ ಗ್ಯಾಂಗ್‌ ಮನೆಯಲ್ಲಿದ್ದ ಸುಮಾರು 20 ಲಕ್ಷ ರೂ. ಹಣ ಸೇರಿದಂತೆಮನೆಯಲ್ಲಿದ್ದ ಲಕ್ಷಾಂತರ ರೂ. ಬೆಲೆ ಬಾಳುವವಸ್ತುಗಳು, ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗದ್ದಾರೆ. ಅವರು ಹೊರಡುವವೇಳೆಗೆ ರಮೇಶ್‌ ಹಾಗೂ ಅವರ ಮನೆಯವರುಕಿರುಚುಕೊಂಡಿದ್ದಾರೆ ಆದರೂ ಅಕ್ಕಪಕ್ಕದಮನೆಯವರು ಬರುವಷ್ಟರಲ್ಲಿ ಅವರು ತಾವುಬಂದಿದ್ದ ಕಾರ್‌ನಲ್ಲಿ ಪರಾರಿಯಾಗಿದ್ದಾರೆ.

ಸಿಸಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆ: ಬಳಿಕ ರಮೇಶ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಎಸ್ಪಿ ದೇವರಾಜು ಸ್ಥಳಕ್ಕೆ ನಗರ ಠಾಣಾ ಪೊಲೀಸರಿಗೆ ಮೊದಲೇ ಸ್ಥಳಕ್ಕೆ ಬಂದುಮನೆಯವರಿಂದ ಮಾಹಿತಿ ಕಲೆ ಹಾಕಿದ್ದರು.ಅಲ್ಲದೆ ಇಡೀ ಬಡಾವಣೆಯನ್ನೆಲ್ಲಾ ಸುತ್ತಾಡಿಆರೋಪಿಗಳ ಸುಳಿವಿಗಾಗಿ ಹಡುಕಾಡಿದ್ದಾರೆ, ಆರೋಪಿಗಳು ಕೃತ್ಯ ಎಸಗುವ ಮುನ್ನ ಬಡಾವಣೆಯಲ್ಲಿ ಫೈಲ್‌? ಹಿಡಿದುಕೊಂಡು ಓಡಾಡಿರುವ ದೃಶ್ಯಗಳು ಬಡಾವಣೆಯ ಬೇರೆಬೇರೆ ಮನೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಜೊತೆಗೆ ಅಲ್ಲಿ ಬಂದಿದ್ದ ಅಷ್ಟೂ ಜನ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರೆಂದುಹೇಳಲಾಗುತ್ತಿದ್ದು, ಆರೋಪಿಗಳ ಬಗ್ಗೆ ಸಾಕಷ್ಟು ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದಾರೆ.ಶ್ರೀಮಂತರ ಬಡಾವಣೆ, ಸುರಕ್ಷಿತ ಬಡಾವಣೆ, ಸಾಕಷ್ಟು ಸೌಲಭ್ಯಗಳಿವೆ ಎಂದುಕೊಂಡಿದ್ದಬೈರೇಗೌಡ ಬಡಾವಣೆಯಲ್ಲಿ ದೊಡ್ಡಇಲಾಖೆಗಳ ಹೆಸರೇಳಿಕೊಂಡು ಬಂದಿರುವಖದೀಮ ಕಳ್ಳರು ಲಕ್ಷಾಂತರ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ.

Advertisement

ಆರೋಪಿಗಳು ಮನೆಗೆ ಬಂದಾಗಲೇ ಮಾಹಿತಿ ನೀಡುವ ಅವಕಾಶಗಳಿದ್ದರೆ, ಮಾಹಿತಿ ರವಾನಿಸಬಹುದಿತ್ತು. ಪ್ರಸ್ತುತ ಆರೋಪಿಗಳನ್ನು ಬೇಟೆಯಾಡಲು ಈಗಾಗಲೇ ನಾಲ್ವರು ಇನ್ಸ್ ಪೆಕ್ಟರ್ ಹಾಗೂ ಒಬ್ಬರು ಡಿವೈಎಸ್ಪಿಸಿಬ್ಬಂದಿಗಳ ತಂಡ ರಚನೆ ಮಾಡಿದ್ದುಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ,ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು.ದೇವರಾಜ್‌, ಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next