Advertisement
ಕಳೆದ ವರ್ಷದ ಮಧ್ಯಾಂತರದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗಳಿಗೆ 56 ಸಾವಿರ ರೂ. ದಾಟಿ 57 ಸಾವಿರ ರೂ. ಸನಿಹಕ್ಕೆ ಹೋಗಿತ್ತು. ಅನಂತರ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿ ಈಗ 47 ಸಾವಿರ ರೂ.ಗಳ ಹತ್ತಿರಕ್ಕೆ ಬಂದಿದೆ. ಬೆಂಗಳೂರಿನಲ್ಲಿ ಭಾರೀ ಇಳಿಕೆಯಾಗಿದ್ದು, 24 ಕ್ಯಾರೆಟ್ ಬಂಗಾರಕ್ಕೆ 10 ಗ್ರಾಂಗಳಿಗೆ 47,730 ರೂ.ಗೆ ಇಳಿದಿದೆ. 22 ಕ್ಯಾರೆಟ್ ಚಿನ್ನದ ಬೆಲೆ 43,750 ರೂ. ಆಗಿದೆ.
2020ರ ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ಬಂಗಾರದ ಬೆಲೆ ದಾಖಲೆ ಪ್ರಮಾಣದಲ್ಲಿತ್ತು. ಆಗ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗಳಿಗೆ 52,800 ರೂ. ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 57,600 ರೂ.ಗಳಿಗೆ ಏರಿಕೆಯಾಗಿತ್ತು.
Related Articles
ಬಜೆಟ್ನಲ್ಲಿ ಬಂಗಾರದ ಆಮದು ಸುಂಕವನ್ನು ಇಳಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೆಲೆ ಇಳಿಯುತ್ತಿದೆ. ಇದರಿಂದ ಭಾರತದಲ್ಲೂ ಬೆಲೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. 1 ಕೆ.ಜಿ. ಬೆಳ್ಳಿ ಬೆಲೆ ಮಂಗಳವಾರ 69,513 ರೂ. ಇದ್ದದ್ದು 68,239 ರೂ.ಗಳಿಗೆ ಇಳಿದಿದೆ.
Advertisement