Advertisement

10 ಗ್ರಾಂ ಚಿನ್ನಕ್ಕೆ 1, 395ರೂ.ಏರಿಕೆ

09:58 AM Mar 21, 2020 | Team Udayavani |

ನವದೆಹಲಿ: ಚಿನ್ನದ ದರ ಶುಕ್ರವಾರ 1,395 ರೂ.ಗಳಷ್ಟು ಜಿಗಿದಿದೆ. ಹೀಗಾಗಿ ನವದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ದರ 41,705 ರೂ.ಗಳಿಗೆ ಏರಿಕೆಯಾದಂತಾಗಿದೆ.

Advertisement

ಗುರುವಾರದ ಮುಕ್ತಾಯಕ್ಕೆ 40,310 ರೂ. ಆಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಹೆಚ್ಚಾದ ಕಾರಣ ಈ ಬೆಳವಣಿಗೆ ಉಂಟಾಗಿದೆ ಎಂದು ಎಚ್‌ಡಿಎಫ್ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ತಪನ್‌ ಪಟೇಲ್‌ ತಿಳಿಸಿದ್ದಾರೆ.

ಬೆಳ್ಳಿಯ ಬೆಲೆಯಲ್ಲಿಯೂ ವೃದ್ಧಿಸಿದ್ದು, ಬೆಲೆ 2,889 ರೂ. ಆಗಿದೆ.ಹೀಗಾಗಿ, ಪ್ರತಿ ಕೆಜಿ ಬೆಳ್ಳಿಗೆ 35,211 ರೂ. ಆಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next