ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದ ಪರಿಣಾಮ ಭಾರತದಲ್ಲಿಯೂ ಹಳದಿ ಲೋಹ ಮತ್ತು ಬೆಳ್ಳಿ ಬೆಲೆಯಲ್ಲಿ ಸೋಮವಾರ(ಮಾರ್ಚ್ 22) ಮತ್ತಷ್ಟು ಕಡಿಮೆಯಾಗಿರುವುದಾಗಿ ವರದಿ ತಿಳಿಸಿದೆ.
ಹತ್ತು ಗ್ರಾಮ್ ಚಿನ್ನದ ಬೆಲೆ 44,974 ರೂಪಾಯಿಗೆ ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಕೆಜಿಗೆ 67ಸಾವಿರ ರೂಪಾಯಿಯಾಗಿದ್ದು, ಕೆಜಿ ಬೆಳ್ಳಿ ಬೆಲೆಯಲ್ಲಿ ಒಂದು ಸಾವಿರ ರೂಪಾಯಿಯಷ್ಟು ಕಡಿಮೆಯಾಗಿರುವುದಾಗಿ ವರದಿ ಹೇಳಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 42,050 ರೂಪಾಯಿ, 24 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 45,880 ರೂಪಾಯಿಯಾಗಿದ್ದು, ಇಂದು 200 ರೂಪಾಯಿ ಇಳಿಕೆಯಾಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 42,490 ರೂಪಾಯಿ, 24 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 46, 350 ರೂಪಾಯಿ.
ಮುಂಬೈನಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 43,800 ರೂಪಾಯಿ, 24 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 44,800 ರೂಪಾಯಿ. ದಿಲ್ಲಿಯಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 44,200 ರೂಪಾಯಿ ಮತ್ತು 24 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 48,220 ರೂಪಾಯಿ.
2020-21ನೇ ಸಾಲಿನಲ್ಲಿ ಚಿನ್ನದ ಆಮದು ಇಳಿಕೆ:
2020-21ನೇ ಸಾಲಿನ ಏಪ್ರಿಲ್ ಫೆಬ್ರುವರಿ ಅವಧಿಯಲ್ಲಿ 26.11 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದ್ದು, ಶೇ.3.3ರಷ್ಟು ಇಳಿಕೆಯಾಗಿರುವುದಾಗಿ ವಾಣಿಜ್ಯ ಸಚಿವಾಲಯದ ಅಂಕಿಅಂಶ ತಿಳಿಸಿದೆ. 2019-20ನೇ ಸಾಲಿನ ಏಪ್ರಿಲ್ ನಿಂದ ಫೆಬ್ರವರಿವರೆಗೆ 27 ಬಿಲಿಯನ್ ಡಾಲರ್ ಮೌಲ್ಯದ ಹಳದಿ ಲೋಹವನ್ನು ಆಮದು ಮಾಡಿಕೊಳ್ಳಲಾಗಿತ್ತು.