ನವದೆಹಲಿ: ಸತತ ಬೆಲೆ ಏರಿಕೆ ಕಂಡಿದ್ದ ಹಳದಿ ಲೋಹ ಇದೀಗ ಅಲ್ಪ ಇಳಿಕೆ ಕಂಡಿದೆ. ದೆಹಲಿಯಲ್ಲಿ ಶನಿವಾರ(ಜೂನ್ 05) 10 ಗ್ರಾಮ್ ಚಿನ್ನದ ಬೆಲೆ 48,950 ರೂಪಾಯಿ ಆಗಿದ್ದು, ಬೆಳ್ಳಿ ಬೆಲೆಯಲ್ಲಿ 800 ರೂಪಾಯಿ ಹೆಚ್ಚಳವಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 71,600 ರೂಪಾಯಿಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಇಂಗ್ಲೆಂಡ್ ನಲ್ಲಿ ಆಡುವಾಗ ಈ ರೀತಿ ಮಾಡಲೇಬೇಡಿ: ಟೀಂ ಇಂಡಿಯಾ ಆಟಗಾರರಿಗೆ ವೆಂಗಸರ್ಕಾರ್ ಸಲಹೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಮ್ ಚಿನ್ನದ ಬೆಲೆ 47,950 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆ ಶುಕ್ರವಾರ (ಜೂನ್ 04) 50,400 ರೂ. ಇದ್ದು, ಇಂದು 760 ರೂಪಾಯಿ ಇಳಿಕೆಯಾಗುವ ಮೂಲಕ 49,640 ರೂಪಾಯಿಯಾಗಿದೆ.
22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆ ಬೆಂಗಳೂರಿನಲ್ಲಿ 46,200 ರೂಪಾಯಿಗೆ ಇಳಿಕೆಯಾಗಿದೆ. ಸುಮಾರು ಎರಡು ವಾರಗಳ ಬಳಿಕ ಚಿನ್ನದ ಬೆಲೆ ಕುಸಿತ ಕಂಡಿದೆ. ಆದರೆ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಮದುರೈ, ಜೈಪುರ, ಅಹಮದಾಬಾದ್ ನಲ್ಲಿ 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆ 50 ಸಾವಿರ ರೂಪಾಯಿ ದಾಟಿದೆ.
ಮುಂಬಯಿಯಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆ 47,950 ರೂಪಾಯಿ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆ 48,950 ರೂಪಾಯಿ. ಚೆನ್ನೈನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆ 46,150 ರೂಪಾಯಿ, 24 ಕ್ಯಾರೆಟ್ ನ 10ಗ್ರಾಮ್ ಚಿನ್ನದ ಬೆಲೆ 50,350 ರೂಪಾಯಿ.