ಕುಂದಾಪುರ: ಮಂಗಳೂರಿನ ಮಂಗಳ ಸ್ಟೇಡಿಯಂ ಬಳಿಯ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಭವನದಲ್ಲಿ ನಡೆಯುತ್ತಿರುವ 44ನೇ ಪುರುಷರ ಹಾಗೂ 36ನೇ ಮಹಿಳಾ ರಾಜ್ಯ ಮಟ್ಟದ ಸೀನಿಯರ್ ಆ್ಯಂಡ್ ಮಾಸ್ಟರ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಕುಂದಾಪುರ ಮೂಲದ ವಿಶ್ವನಾಥ ಗಾಣಿಗ ಅವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಕುಂದಾಪುರದ ಕಟ್‌ಬೆಳೂ¤ರಿನ ವಿಶ್ವನಾಥ ಗಾಣಿಗ ಅವರು ಶನಿವಾರ ನಡೆದ ಪಂದ್ಯಾವಳಿಯಲ್ಲಿ ಒಟ್ಟು 720 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಪವರ್ ಲಿಫ್ಟಿಂಗ್‌ನಲ್ಲಿ 3 ವಿಭಾಗ ಗಳಿದ್ದು, ಸ್ಕ್ವಾಟ್‌ನಲ್ಲಿ 260 ಕೆ.ಜಿ., ಬೆಂಚ್ ಪ್ರಸ್‌ನಲ್ಲಿ 155 ಕೆಜಿ ಹಾಗೂ ಡೆಡ್‌ಲಿಫ್ಟ್‌ನಲ್ಲಿ 305 ಕೆಜಿ ಒಟ್ಟು 720 ಕೆಜಿ ಭಾರ ಎತ್ತುವುದರೊಂದಿಗೆ ಸ್ವರ್ಣ ಪದಕ ಒಲಿದು ಬಂದಿದೆ. ಡೆಡ್‌ಲಿಫ್ಟ್‌ನಲ್ಲಿ 305 ಕೆಜಿ ಭಾರಎತ್ತಿರುವುದು ಸೀನಿಯರ್ ವಿಭಾಗದ ನೂತನ ದಾಖಲೆಯಾಗಿದ್ದು, ಇದಕ್ಕೂ ಮುನ್ನ ವಿಶ್ವನಾಥ ಅವರ ಹೆಸರಲ್ಲೇ ಈ ದಾಖಲೆಯಿದ್ದು, 302 ಕೆಜಿ ಭಾರವೆತ್ತಿದ್ದರು.
ಒಟ್ಟು 6 ಅಂತಾರಾಷ್ಟಿÅàಯ,17 ರಾಷ್ಟ್ರೀಯ, 15ಕ್ಕೂ ಮಿಕ್ಕಿ ರಾಜ್ಯ ಮಟ್ಟದ ಲ್ಲಿ ಚಿನ್ನದ ಪದಕ, 3 ವೈಯಕ್ತಿಕ ರಾಷ್ಟ್ರೀಯ ದಾಖಲೆಗಳು ಅವರ ಹೆಸರಲ್ಲಿವೆ.
ಅಪಘಾತದ ಬಳಿಕ ಮೊದಲ ಚಿನ್ನ
ಕಳೆದ ಮಾರ್ಚ್‌ನಲ್ಲಿ ಬೆಂಗಳೂರಿನಿಂದ ಊರಿಗೆ ತೆರಳುತ್ತಿದ್ದಾಗ ಮಂಗಳೂರಿನಲ್ಲಿ ಬಸ್‌ಗೆ ಟ್ರಕ್ ಢಿಕ್ಕಿಯಾದ ಪರಿಣಾಮ ಗಾಯಗೊಂಡಿದ್ದ ವಿಶ್ವನಾಥ ಅವರು ಚೇತರಿಸಿಕೊಂಡ ಬಳಿಕ ಆಡುತ್ತಿರುವ ಮೊದಲ ಟೂರ್ನಮೆಂಟ್ ಇದಾಗಿದೆ. ಈ ವೇಳೆಯಲ್ಲಿ ಏಶ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದರೂ, ಗಾಯದಿಂದಾಗಿ ಆಡಲು ಸಾಧ್ಯವಾಗಿರಲಿಲ್ಲ.