Advertisement

ಕಿಕ್‌ ಬಾಕ್ಸಿಂಗ್‌ನಲ್ಲಿ ಚಿನ್ನ: ರಾಜ್ಯದ ಪ್ರಕೃತಿ ವಿಶ್ವ ದಾಖಲೆ 

12:54 PM Jan 21, 2018 | Team Udayavani |

ಬೆಂಗಳೂರು: ಉದ್ಯಾನನಗರಿಯ ಬಾಲಕಿ 4 ವರ್ಷದ ಪ್ರಕೃತಿ ಅವರು ವಾಕೊ ಇಂಡಿಯಾ ಕಿಕ್‌ ಬಾಕ್ಸಿಂಗ್‌ ಫೆಡರೇಷನ್‌ ಕಪ್‌ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ನವದೆಹಲಿಯಲ್ಲಿ ನಡೆದ ಕೂಟದಲ್ಲಿ ಅವರು 7ರಿಂದ 9 ವರ್ಷ ವಯೋಮಿತಿಯೊಳಗಿನ ವಿಭಾಗದಲ್ಲಿ ಸ್ಪರ್ಧೆ ಮಾಡಿ ಪ್ರಾಬಲ್ಯ ಮರೆದರು.

Advertisement

ತನಗಿಂತ ದೊಡ್ಡವರೊಂದಿಗೆ ಸ್ಪರ್ಧೆ ಮಾಡಿ ಗೆದ್ದಿರುವುದು ವಿಶೇಷ. ಇಂತಹ ಸಾಧನೆ ಮಾಡಿದ ವಿಶ್ವದ ಮೊದಲ ಬಾಲಕಿ ಪ್ರಕೃತಿಯಾಗಿದ್ದಾರೆ ಎಂದು ಅವರ ಕೋಚ್‌ ಶರಣ್‌ ಉದಯವಾಣಿಗೆ ತಿಳಿಸಿದ್ದಾರೆ. 

ಕಿರಿಯರ ವಯಸ್ಸಿಗೆ ಪ್ರಕೃತಿ ಸಾಧನೆ: ಪ್ರಕೃತಿ ಎಲ್‌ಕೆಜಿ ವಿದ್ಯಾರ್ಥಿನಿ. ಬೆಂಗಳೂರಿನ ದೇವರಚಿಕ್ಕನಹಳ್ಳಿಯ ರೆಯಾನ್‌ ಕಿಡ್ಸ್‌ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯ ಮಟ್ಟದಲ್ಲಿ  3 ಚಿನ್ನದ ಪದಕ, ಎಂಎಂಎ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ, ರಾಷ್ಟ್ರೀಯ ಕೂಟದಲ್ಲಿ ಬೆಳ್ಳಿ ಹಾಗೂ 2017ರಲ್ಲಿ ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಕೂಟದಲ್ಲಿ 1 ಚಿನ್ನದ ಪದಕ ಗೆದ್ದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next