Advertisement
ಈ ಕುರಿತು ಮಾಹಿತಿ ನೀಡಿದ ಟ್ವಿಟರ್ ಮಾಲೀಕ ಎಲಾನ್ ಮಸ್ಕ್, “ತಡವಾಗಿದಕ್ಕೆ ಕ್ಷಮೆಯಿರಲಿ. ಮುಂದಿನ ಶುಕ್ರವಾರದಿಂದ ವೆರಿಫೈಡ್ ಖಾತೆಗಳ ಸೇವೆಯನ್ನು ಆರಂಭಿಸುತ್ತಿದ್ದೇವೆ. ಕಂಪನಿಗಳಿಗೆ ಗೋಲ್ಡ್ ಟಿಕ್, ಸರ್ಕಾರಗಳಿಗೆ ಗ್ರೇ ಟಿಕ್ ಮತ್ತು ವ್ಯಕ್ತಿಗಳಿಗೆ ಬ್ಲೂ ಟಿಕ್ ನೀಡಲಾಗುತ್ತದೆ. ಎಲ್ಲ ವೆರಿಫೈಡ್ ಖಾತೆಗಳನ್ನು ಚಟುವಟಿಕೆಗಳ ಮೊದಲು ದೃಢೀಕರಿಸಲಾಗುತ್ತದೆ,’ ಎಂದು ಟ್ವೀಟ್ ಮಾಡಿದ್ದಾರೆ.
ಮುಂದಿನ ವಾರದಿಂದ ಅಮಾತುಗೊಂಡ ಟ್ವಿಟರ್ ಖಾತೆಗಳನ್ನು ಸಕ್ರಿಯಗೊಳಿಸಲಾಗುವುದು ಎಂದು ಮಸ್ಕ್ ಘೋಷಿಸಿದ್ದಾರೆ. ಇದಕ್ಕೂ ಮುನ್ನ ಅವರು “ಕಾನೂನನ್ನು ಉಲ್ಲಂಘಿಸದ ಅಥವಾ ಅತಿರೇಕದ ಸ್ಲಾéಮ್‌ಗಳಲ್ಲಿ ತೊಡಗದ ಅಮಾನತುಗೊಂಡ ಖಾತೆಗಳನ್ನು ಸಕ್ರಿಯಗೊಳಿಸಬೇಕೇ, ಬೇಡವೇ’ ಎಂದು ಟ್ವಿಟರ್‌ನಲ್ಲಿ ಸಮೀಕ್ಷೆ ನಡೆಸಿದ್ದರು. ಸಕ್ರಿಯಗೊಳಿಸಬೇಕು ಎಂದು ಶೇ. 72.4ರಷ್ಟು ಬಳಕೆದಾರರು ಮತ ಹಾಕಿದರೆ, ಶೇ. 27.6ರಷ್ಟು ಜನರು ಬೇಡ ಎಂದು ವೋಟ್ ಮಾಡಿದರು. “ಜನರು ಮಾತನಾಡಿದ್ದಾರೆ. ಮುಂದಿನ ವಾರ ಕ್ಷಮಾಪಣೆ ಕಾರ್ಯ ಆರಂಭವಾಗಲಿದೆ,’ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.