ಕುಮಟಾ : ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24 ನೇಯ ಪೀಠಾಧಿಪತಿಗಳಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆರ್ ಸ್ವಾಮೀಜಿಯವರ ಗುರುಪೀಠಾರೋಹಣ ಕಾರ್ಯಕ್ರಮವು ಜೂನ್-30 ರಂದು ಶುಕ್ರವಾರ ಮಧ್ಯಾನ್ಹ 3.10 ಕ್ಕೆ ಗೋವಾದ ಕಾಣಕೋಣದಲ್ಲಿರುವ ಪರ್ತಗಾಳಿ ಜೀವೋತ್ತಮ ಮಠದಲ್ಲಿ ನೆರವೇರಿತು.
ಶ್ರೀ ಗುರು ಪೀಠಾರೋಹಣದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಬೆಳಿಗ್ಗೆ ನೈರ್ಮಾಲ್ಯ ವಿಸರ್ಜನೆ ನಡೆಯಿತು.
ಇದನ್ನೂ ಓದಿ : ಜೆಡಿಎಸ್ ಗೆ ಹೋಗಿದ್ದಾಗ ಎಲ್ಲಿತ್ತು ಹಿಂದುತ್ವ: ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ಪೂರ್ವಾಹ್ನ ಶ್ರೀ ರಾಮದೇವ ವೀರ ವಿಠ್ಠಲ ದೇವರ ಮಹಾಪೂಜೆಯಿಂದ ಕಾರ್ಯಕ್ರಮ ಆರಂಭಗೊಂಡಿತು. ನಂತರ ಶ್ರೀಗಳು ದೀಪವನ್ನು ಪ್ರಜ್ವಲಿಸುವ ಮೂಲಕ ಸಿಂಹಾಸನದಲ್ಲಿ ಆಸೀನರಾದರು. ನಂತರ ಶ್ರೀಮಠದ ಶಾಖಾ ಮಠಗಳ ಸಮಿತಿಯಿಂದ ಪೀಠಾ ರೂಢ ಗುರುಗಳಿಗೆ ಪಟ್ಟ ಕಾಣಿಕೆ ಸಲ್ಲಿಸಿ, ಫಲಮಾಲಾದಿಗಳನ್ನು ಅರ್ಪಿಸಲಾಯಿತು.
ಸರ್ಕಾರದ ಕೋವಿಡ್ ನಿಯಮದಂತೆಯೇ ಶ್ರೀ ಗುರು ಪೀಠಾರೋಹಣ ಸರಳ ಸಮಾರಂಭವನ್ನು ಆಚರಿಸಲಾಯಿತು.
ಇದನ್ನೂ ಓದಿ : ನನಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲು ಬಿಎಸ್ ವೈ ಕಾರಣ : ಯತ್ನಾಳ್