Advertisement
ಮಳೆಯ ತೀವ್ರತೆ ಕಡಲಬ್ಬರದಿಂದಾಗಿ ಇಲ್ಲಿಯ ಪ್ರಮುಖ ಕಡಲ ತೀರವನ್ನೇ ಸಮುದ್ರ ನುಂಗಿ ಹಾಕಿದೆ. ವಿಶಾಲವಾಗಿದ್ದ ಕಡಲತೀರ ಈಗ ಸಂಪೂರ್ಣ ಅಯೋಮಯವಾಗಿದೆ.
Related Articles
Advertisement
ಇನ್ನು ಹೊರಗಡೆಯಿಂದ ಬರುವ ಭಕ್ತರಿಗೆ ಇಲ್ಲಿಯ ಸಮುದ್ರದ ಆಳ ಮತ್ತು ತೀವೃತೆಯ ಬಗ್ಗೆ ಅರಿವು ಇಲ್ಲದಿರುವುದರಿಂದ ಸಮುದ್ರದ ಅಬ್ಬರದ ನಡುವೆಯೂ ಸಮುದ್ರ ಸ್ನಾನಕ್ಕೆ ತೆರಳುತ್ತಿರುವುದನ್ನು ನೋಡಿದರೆ ನಿಜಕ್ಕೂ ಭಯ ಹುಟ್ಟಿಸುತ್ತದೆ. ಲೈಫ್‌ಗಾರ್ಡ್ ಗಳು ಭಕ್ತರಿಗೆ ಪದೇ ಪದೇ ಎಚ್ಚರಿಕೆ ನೀಡಿದರೂ ಕೂಡ ಅವರು ಕ್ಯಾರೇ ಅನ್ನುತ್ತಿಲ್ಲ. ಒಮ್ಮೆಲೆ ನೀರು ಬಂದು ವಾಪಸ್ಸಾಗುವಾಗ ಸ್ವಲ್ಪ ಕಾಲು ತಪ್ಪಿದರೂ ನೀರು ಪಾಲಾಗುವ ಸಾಧ್ಯತೆಯಿದೆ.
ಹಾಗೇ ಸಾಕಷ್ಟು ಕಡಲತೀರವನ್ನು ಕೊಚ್ಚಿಕೊಂಡು ಹೋಗಿದ್ದರೂ ಕೂಡ ಪ್ರವಾಸಿಗರು ಅದರಲ್ಲಿಯೂ ಮಹಿಳೆಯರು ನೀರಿನಲ್ಲಿ ಮೋಜು ಮಾಡುತ್ತಿರುವುದು ನೋಡಿದರೆ ನಿಜಕ್ಕೂ ಆತಂಕ ಹುಟ್ಟಿಸುತ್ತದೆ.
ಲೈಫ್‌ಗಾರ್ಡ್ ಗಳು ಎಚ್ಚರಿಕೆ ನೀಡುತ್ತಿದ್ದರೂ ಕೂಡ ಅವರು ತಲೆಗೆ ಹಾಕಿಕೊಳ್ಳದೇ ತಮ್ಮದೇ ಲೋಕದಲ್ಲಿದ್ದರು. ಇಂತಹ ಅಪಾಯದ ಸನ್ನಿವೇಶದಲ್ಲಿಯೂ ಕೂಡ ಸಮುದ್ರದಲ್ಲಿ ಮೋಜು ಮಾಡುತ್ತಿರುವುದು ನಿಜಕ್ಕೂ ಆತಂಕ ಹುಟ್ಟಿಸುತ್ತಿದೆ.
ದೂರದಿಂದ ಬರುವ ಭಕ್ತರಿಗೆ ದೇವರ ದರ್ಶನವಾದ ನಂತರ ಸಮುದ್ರದಲ್ಲಿ ಸ್ನಾನ ಮಾಡಬೇಕೆಂಬ ಸಹಜ ಬಯಕೆಯಂತೆ ತೆರಳುತ್ತಾರೆ. ಆದರೆ ಸ್ವಲ್ಪವೇ ಹೆಚ್ಚು ಕಡಿಮೆಯಾದರೂ ಪ್ರಾಣ ಹೋಗುತ್ತದೆಂಬ ಕಿಂಚಿತ್ತು ಅಳಕಿಲ್ಲದೇ ನೀರಿನಲ್ಲಿ ಮೋಜು ಮಾಡುತ್ತಿರುವುದು ಎಂತವರಿಗಾದರೂ ಹುಚ್ಚಾಟ ಅನಿಸದೇ ಇರದು.
ಸಮುದ್ರಸ್ನಾನ ಮುಗಿದ ನಂತರ ಪಕ್ಕದಲ್ಲೇ ಇರುವ ಸಿಹಿ ನೀರು ಸ್ನಾನ ಗೃಹದಲ್ಲಿ ಸ್ನಾನ ಮಾಡಿ ಬಟ್ಟೆ ಬದಲಿಸುತ್ತಾರೆ. ಇನ್ನು ಬರುವ ಪ್ರವಾಸಿಗರು ಕೂಡ ಇದೇ ಕತೆಯಾಗಿದೆ.