Advertisement

ದೇವರ ದರ್ಶನಕ್ಕೆ ಬಂದ ಮೂವರು ಸಮುದ್ರ ಪಾಲು : ಗೋಕರ್ಣ ಕಡಲಿನಲ್ಲಿ ನಡೆದ ದುರಂತ

07:03 PM Jan 21, 2021 | Team Udayavani |

ಕಾರವಾರ : ಸಮುದ್ರದಲ್ಲಿ ಈಜಲು ತೆರಳಿದ ಓರ್ವನನ್ನು ರಕ್ಷಿಸಲು ಧಾವಿಸಿದ ನಾಲ್ವರ ಪೈಕಿ ಮೂವರು ಕಡಲ ಅಲೆಗೆ ಸಿಲುಕಿ ಸಾವನ್ನಪ್ಪಿದ್ದು. ಇಬ್ಬರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟ‌ನೆ ಗೋಕರ್ಣದಲ್ಲಿ ಗುರುವಾರ ನಡೆದಿದೆ.

Advertisement

ಮೃತರನ್ನು ಬೆಂಗಳೂರಿನ ತಿಪ್ಪೇಶ, ಸುಮಾ, ಹಾಗೂ ರವಿ ಎನ್ನಲಾಗಿದೆ.

ಬೆಂಗಳೂರಿನಿಂದ 16 ಮಂದಿ ದೇವರ ದರ್ಶನ ಪಡೆಯಲು ಗೋಕರ್ಣಕ್ಕೆ ಆಗಮಿಸಿದ್ದರು. ದೇವರ ದರ್ಶನ ಪಡೆದ ನಂತರ ಯುವಕ ತಿಪ್ಪೇಶ್ ಸಮುದ್ರಕ್ಕಿಳಿದಿದ್ದಾನೆ. ಈ ವೇಳೆ ಅಲೆಯ ಅಬ್ಬರ ಆತನನ್ನು ನೀರಿನ ಒಳಕ್ಕೆ ಸೆಳೆಯಿತು. ಇದನ್ನು ಗಮನಿಸಿದ ಸುಮಾ ಎಂಬ ಯುವತಿ ಆತನ ರಕ್ಷಣೆಗಾಗಿ ಧಾವಿಸಿದ್ದಾಳೆ ಆದರೆ ಆಕೆಯು ಕಡಲ ಸೆಳೆತಕ್ಕೆ ಸಿಲುಕಿದ್ದಾಳೆ ಇದನ್ನು ಗಮನಿಸಿದ ರವಿ, ರತ್ನಮ್ಮ ಹಾಗೂ ಪವಿತ್ರ ಸುಮಳನ್ನು ರಕ್ಷಿಸಲು ಮುಂದಾದರು. ದುರಾದೃಷ್ಟವಶಾತ್ ಸುಮಾ, ರವಿ ಕೂಡ ಸಮುದ್ರದ ಅಲೆಗೆ ಸಿಲುಕಿದರು.

ಇದನ್ನೂ ಓದಿ:  ‘ಪಠಾಣ್’ ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕರ ಮೇಲೆ ಹಲ್ಲೆ! ನಡೆದಿದ್ದೇನು?

ಈ ವೇಳೆಗೆ ಧಾವಿಸಿದ ಸ್ಥಳೀಯರು ಪವಿತ್ರ ಹಾಗೂ ರತ್ನಮ್ಮ ಎಂಬುವವರನ್ನು ರಕ್ಷಿಸಿದರು. ಸ್ಥಳೀಯ ಮೀನುಗಾರರು ರಕ್ಷಣೆಗೆ ಸಹಾಯ ಮಾಡಿದ್ದಾರೆ.

Advertisement

ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿಪ್ಪೇಶ, ಸುಮಾ, ರವಿ ಮೂವರ ಶವಗಳು ಪತ್ತೆಯಾಗಿವೆ ಎಂದು ಗೋಕರ್ಣ ಪಿಎಸ್ ಐ ನವೀನ್ ನಾಯ್ಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next