Advertisement

ಕೋವಿಡ್ ನಿಯಂತ್ರಣಕ್ಕೆ ಗೋಕಾಕ ನಗರಸಭೆ ದಿಟ್ಟ ಹೆಜ್ಜೆ

07:49 PM May 28, 2021 | Team Udayavani |

ವರದಿ : ­ಬಸವರಾಜ ಭರಮಣ್ಣವರ

Advertisement

ಗೋಕಾಕ: ಕೊರೊನಾ ಎರಡನೇ ಅಲೆ ಆರಂಭವಾದಾಗಿನಿಂದ ಸರ್ಕಾರದ ಮಾರ್ಗಸೂಚಿ ಗಳನ್ವಯ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ನಗರಸಭೆ ಅಧಿಕಾರಿಗಳು ಕೊರೊನಾ ನಿಯಂತ್ರಣಕ್ಕೆ ಹಲವಾರು ದಿಟ್ಟ ಕ್ರಮ ಕೈಗೊಂಡಿದ್ದಾರೆ.

ಗೋಕಾಕ ನಗರಸಭೆಯಲ್ಲಿ 31 ವಾರ್ಡುಗಳಿದ್ದು, ಒಟ್ಟು 31 ಚುನಾಯಿತ ಸದಸ್ಯರಿದ್ದಾರೆ. ಆಯಾ ವಾರ್ಡು ಸದಸ್ಯರ ನೇತೃತ್ವದಲ್ಲಿ ಕೋವಿಡ್‌ -19 ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಕ್ರಮ ಕೈಗೊಳ್ಳಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಧ್ವನಿವರ್ಧಕ, ಕರಪತ್ರಗಳ ಮೂಲಕ ಕೊರೊನಾ ಜಾಗೃತಿ ಮಾಡಲಾಗಿದೆ. ವಾರ್ಡುಮಟ್ಟದ ಸಮಿತಿ ಹಾಗೂ ಬೂತ್‌ಮಟ್ಟದ ಸಮಿತಿಗಳಿಂದ ಕೋವಿಡ್‌-19 ನಿಯಂತ್ರಣ ಕುರಿತು ಜನಜಾಗೃತಿ ಹಮ್ಮಿಕೊಳ್ಳಲಾಗಿದೆ. ನಗರಸಭೆ ಅಧಿಕಾರಿ, ಸಿಬ್ಬಂದಿಗಳ ನಾಲ್ಕು ತಂಡ ರಚಿಸಿ ನಗರದಲ್ಲಿ ಮಾಸ್ಕ್ ಧರಿಸದೇ ಇರುವ, ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಪಾಡದೇ ಇರುವ ವ್ಯಾಪಾರಸ್ಥರಿಗೆ ದಂಡ ವಿಧಿಸಲಾಗುತ್ತಿದೆ. ಅನಗತ್ಯ ಸೇವೆಗಳನ್ನು ಬಂದ್‌ ಮಾಡಿ ಅಗತ್ಯ ಸೇವೆಗಳನ್ನು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ನಗರಸಭೆ ಸಿಬ್ಬಂದಿಯಿಂದ 15 ಜನರ ಕೋವಿಡ್‌ ಮಾರ್ಷಲ್‌ ಪಡೆ ರಚಿಸಲಾಗಿದೆ.

ವಾಣಿಜ್ಯ ಪ್ರದೇಶಗಳು, ಜನನಿಬಿಡ ಪ್ರದೇಶಗಳಲ್ಲಿ ಅಗ್ನಿಶಾಮಕ ವಾಹನ, ಜೆಟ್ಟಿಂಗ್‌ ಮಷಿನ್‌ ವಾಹನಗಳಿಂದ ಸ್ಯಾನಿಟೈಜರ್‌ ಸಿಂಪಡಿಸಲಾಗುತ್ತಿದೆ. ಕೊಳಚೆ, ಇನ್ನಿತರೆ ಪ್ರದೇಶಗಳಲ್ಲಿ ಹ್ಯಾಂಡ್‌ ಸ್ಪ್ರೆàಯರ್‌ ಮೂಲಕ ಸ್ಯಾನಿಟೈಜರ್‌, ಅಟೋಮೌಂಟೆಡ್‌ ಫಾಗಿಂಗ್‌ ಹ್ಯಾಂಡ್‌ ಫಾಗಿಂಗ್‌ ಮೂಲಕ ಸೊಳ್ಳೆಗಳ ನಿಯಂತ್ರಿಸಲಾಗುತ್ತಿದೆ. ಎಲ್ಲ 31 ವಾರ್ಡುಗಳಲ್ಲಿ ಕೀಟನಾಶಕ ಸಿಂಪಡಣೆ ಮಾಡಲಾಗುತ್ತಿದೆ. 106 ಪೌರಕಾರ್ಮಿಕರಿಗೆ ಎಲ್ಲ ಸುರಕ್ಷತಾ ಸಾಮಗ್ರಿ ಹಾಗೂ ಸ್ಯಾನಿಟೈಜರ್‌, ಮೂರು ಪದರದ ಮಾಸ್ಕ್ ವಿತರಿಸಲಾಗಿದೆ.

ಪೌರ ಕಾರ್ಮಿಕರಿಗೆ ಪ್ರತಿದಿನ ಬೆಳಿಗ್ಗೆ ಹಾಜರಾತಿ ಸಮಯದಲ್ಲಿ ಥರ್ಮಲ್‌ ಸ್ಕ್ಯಾನರ್‌ ಮೂಲಕ ಆರೋಗ್ಯ ತಪಾಸಿಸಲಾಗುತ್ತಿದೆ. ಪೌರಕಾರ್ಮಿಕರು, ವಾಹನ ಚಾಲಕರು ಮತ್ತು ಕಚೇರಿ ಸಿಬ್ಬಂದಿಗೆ ಎರಡು ಹಂತದಲ್ಲಿ ಕೋವಿಡ್‌ ಲಸಿಕೆ ಹಾಕಲಾಗಿದೆ. ಪ್ರತಿನಿತ್ಯ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ನಗರಸಭೆಯ ಕಂದಾಯ ಅಧಿಕಾರಿ, ಸಿಬ್ಬಂದಿ ಹಾಗೂ ಶಿಕ್ಷಕರ ತಂಡವನ್ನೊಳಗೊಂಡು ತಂಡ ಪ್ರತಿದಿನ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ಸೋಂಕಿತರು, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ ವ್ಯಕ್ತಿಗಳ ಮನೆಗಳಿಗೆ ಹೋಗಿ ಕ್ವಾರಂಟೈನ್‌ ವಿಸಿಟ್‌ ಆ್ಯಪ್‌ನಲ್ಲಿ ಮಾಹಿತಿ ಕಾಲೋಚಿತ ಗೊಳಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next