Advertisement
ಇದೇ ಕಾರಣದಿಂದ 1948ರಲ್ಲಿ ಇಲ್ಲಿ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಪ್ರಾರಂಭಿಸಲಾಯಿತು.ಇಲ್ಲಿ ಪ್ರಮುಖವಾಗಿ ಹತ್ತಿ, ಗೋವಿನ ಜೋಳ, ಬೆಲ್ಲ ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳ ಜೊತೆಗೆದನಗಳ ಮಾರುಕಟ್ಟೆಗೂ ಹೆಸರುವಾಸಿಯಾಗಿದೆ.116 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿರುವ ಈ ಎಪಿಎಮ್‌ಸಿಯಲ್ಲಿ ಸುಮಾರು 200ಕ್ಕೂ ಹೆಚ್ಚು ದಳ್ಳಾಳಿ ಅಂಗಡಿಗಳು ಇದ್ದವು. ಎಪಿಎಮ್‌ಸಿ ಪ್ರಾಂಗಣದಲ್ಲಿ ಸದಾ ಹತ್ತಿ ಅಂಡಿಗೆಗಳು, ಗೋವಿನಜೋಳ ತುಂಬಿದ ಚೀಲ ತುಂಬಿದ ಲಾರಿಗಳು, ಬೆಲ್ಲದ ಸವಾಲ ನಡೆಯುತ್ತಿತ್ತು. ನೂರಾರುಹಮಾಲರು ತಮ್ಮ ಹೊಟ್ಟೆ-ಬಟ್ಟೆಗೆ ಕೊರತೆಯಿಲ್ಲದಂತೆ ಜೀವನ ಸಾಗಿಸುತ್ತಿದ್ದರು.
Related Articles
Advertisement
ವಾಣಿಜ್ಯ ಮಳಿಗೆ ಆಧಾರ: ನೂತನ ಕಾಯ್ದೆಯಿಂದ ಇಲ್ಲಿಯ ಎಪಿಎಮ್‌ಸಿ ಆದಾಯಕ್ಕೆ ಹಿನ್ನಡೆಯಾದರೂ ಆಡಳಿತದ ವೆಚ್ಚಕ್ಕೆ ವಾಣಿಜ್ಯ ಮಳಿಗೆ ಹಾಗೂ ಗೋಡೌನ್ ಗಳು ಆಧಾರವಾಗಿವೆ. ಸುಮಾರು 77 ವಾಣಿಜ್ಯ ಮಳಿಗೆಗಳು ಇದ್ದು ಸರಾಸರಿ ಪ್ರತಿ ತಿಂಗಳು 2.75 ಲಕ್ಷ ರೂ. ಆದಾಯವಿದೆ. ಗೋಕಾಕದಲ್ಲಿ 6 ಗೋಡೌನ್‌ಗಳಿದ್ದು ಅದರಲ್ಲಿ 3 ಮಾತ್ರ ಸುಸ್ಥಿತಿಯಲ್ಲಿವೆ. ಮೂಡಲಗಿಯಲ್ಲಿ 1980ನೇ ಸಾಲಿನ ಎನ್‌ಜಿಆರ್‌ಜಿ ಯೋಜನೆಯಡಿ ನಿರ್ಮಿಸಿದ 2 ಗೋಡೌನ್‌ಗಳುಹಾಳಾಗಿವೆ. ಅವುಗಳು ನಿರ್ಮಾಣವಾದರೆ ಇನ್ನಷ್ಟು ಆದಾಯ ನಿರೀಕ್ಷೆ ಮಾಡಬಹುದು.
ಸಿಬ್ಬಂದಿ ಕೊರತೆ : ಇಲ್ಲಿಯ ಎಪಿಎಮ್‌ಸಿಯಲ್ಲಿ ಕಾರ್ಯನಿರ್ವಹಿಸಲು ಮಂಜೂರಾದ 26ಸಿಬ್ಬಂದಿಗಳಲ್ಲಿ ಕೇವಲ 10 ಜನ ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 16ಜನ ಸಿಬ್ಬಂದಿಯಕೊರತೆ ಇದೆ. ಈ ಮೊದಲು 13 ಜನ ಭದ್ರತಾ, ಗಣಕಯಂತ್ರ ಆಪರೇಟರಗಳು ಇದ್ದರು. ಈಗ 7 ಜನರಿಗೆ ಇಳಿಸಲಾಗಿದೆ.
ಸೌಲಭ್ಯಗಳ ಆಗರ :
ಎಪಿಎಮ್‌ಸಿಯಲ್ಲಿ ಮೂಲಭೂತ ಸೌಲಭ್ಯಗಳಿವೆ. ದನಗಳ ಪೇಟೆಯಲ್ಲಿ ವಿಶ್ರಾಂತಿ ಗೃಹವಿದೆ. ರೈತ ಭವನವಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿದೆ. ಅಲ್ಲದೇ ರೈತರಿಗೆ ತಮ್ಮ ಉತ್ಪನ್ನಗಳನ್ನು ಒಣಗಿಸಲು ಕಟ್ಟೆಗಳಿವೆ. ಸುಮಾರು ಒಂದು ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾದ ಧಾನ್ಯಗಳಕ್ಲೀನಿಂಗ್, ಗ್ರೇಡಿಂಗ್, ಮತ್ತು ಪ್ಯಾಕಿಂಗ್‌ಗಾಗಿ ಯಂತ್ರೋಪಕರಣಗಳಿವೆ. ಹುಡ್ಕೊ ಸಾಲ ಯೋಜನೆಯಡಿ ಹಮಾಲರಿಗೆ 36 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಎಲ್ಲವೂ ಇದ್ದು ರೈತರೇ ಬರದೇ ಹೋದರೆ ಅವುಗಳು ಹಾಳಾಗುವುದರಲ್ಲಿ ಎರಡು ಮಾತಿಲ್ಲ.
ಮಾರುಕಟ್ಟೆ ಪ್ರಾಂಗಣದಲ್ಲಿಬಂದ ಉತ್ಪನ್ನಗಳ ವಹಿವಾಟಿನ ಮೇಲೆ ಮಾತ್ರ ಸೆಸ್ ವಿಧಿಸಲು ಅವಕಾಶವಿರುವುದರಿಂದ ನಮಗೆ ಆದಾಯ ಬರುತ್ತಿಲ್ಲ. ಮುಖ್ಯವಾಗಿ ಇಲ್ಲಿಯ ರಿದ್ದಿ-ಸಿದ್ದಿ ಕಾರ್ಖಾನೆಯಿಂದ ಸಾಕಷ್ಟು ಆದಾಯ ನಿರೀಕ್ಷೆ ಮಾಡಲಾಗಿತ್ತು. ಈಗ ಬಂದಿರುವ ಕಾಯ್ದೆಯಿಂದಾಗಿ ಆದಾಯ ಇಳಿಮುಖವಾಗಲಿದೆ. -ಬಿ.ಆರ್.ಜಾಲಿಬೇರಿ. ಕಾರ್ಯದರ್ಶಿ, ಎಪಿಎಂಸಿ
ಈ ಮೊದಲೇ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ಎಪಿಎಮ್‌ಸಿಗಳು ನೆರೆ ಹಾಗೂಕೋವಿಡ್-19ನಿಂದ ಮತ್ತಷ್ಟು ಬಳಲಿ ಬೆಂಡಾಗಿವೆ. ಈಗ ತಿದ್ದುಪಡಿ ಕಾಯ್ದೆಯಿಂದ ಎಪಿಎಮ್‌ಸಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ಸರ್ಕಾರ ನಿರ್ಧರಿಸಿ ಕಾರ್ಪೋರೇಟ್ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿತ್ತಿದೆ. ಇದು ರೈತ ವಿರೋಧಿ ಕಾಯ್ದೆಯಾಗಿದೆ. -ಭೀಮಶಿ ಗದಾಡಿ,. ಕಾಯದರ್ಶಿ, ರಾಜ್ಯ ರೈತ ಸಂಘ.
-ಮಲ್ಲಪ್ಪ ದಾಸಪ್ಪಗೋಳ