Advertisement

ಗೋಕಾಕ್: ನಿಯಮ ಉಲ್ಲಂಘಿಸಿ ಮದುವೆ ನಡೆಸಿದವರಿಗೆ 20 ಸಾವಿರ ರೂ. ದಂಡ!

08:09 AM May 31, 2021 | Team Udayavani |

ಗೋಕಾಕ್: ತಾಲೂಕಿನ  ನಲ್ಲಾನಟ್ಟಿ ಗ್ರಾಮದಲ್ಲಿ ಅನುಮತಿ ಇಲ್ಲದೇ ರವಿವಾರ ಮದುವೆ ಸಮಾರಂಭ ನಡೆಸಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 20 ಸಾವಿರ ರೂ. ದಂಡ ವಿಧಿಸಲಾಗಿದೆ.

Advertisement

ನಲ್ಲಾನಟ್ಟಿ ಗ್ರಾಮದ ದಶರಥ ಯಶವಂತ ಪಾಟೀಲ ಎಂಬವರು ಮದುವೆ ಸಮಾರಂಭವನ್ನು ಆಯೋಜಿಸಿದ್ದು ತಿಳಿದು ಬಂದಿದೆ. ಕೂಡಲೇ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಮತ್ತು ಘಟಪ್ರಭಾ ಠಾಣೆಯ ಆರಕ್ಷಕ ನಿರೀಕ್ಷಕರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ದಂಡ ವಿಧಿಸಿ ಜನರನ್ನು ತೆರವುಗೊಳಿಸಿದ್ದಾರೆ.

ಇದನ್ನೂ ಓದಿ:ಭಾರತದಿಂದ ತೆರಳಿದೆ ಚಾರ್ಟರ್ಡ್‌ ಫ್ಲೈಟ್; ಚೋಕ್ಸಿ ಗಡೀಪಾರು ಖಚಿತ?

ಸರ್ಕಾರ ವಿಧಿಸಿರುವ ಕೋವಿಡ್ ನಿಯಮ ಉಲ್ಲಂಘನೆ ಆಗದಂತೆ ಸಾರ್ವಜನಿಕರು ಲಕ್ಷ್ಯ ವಹಿಸತಕ್ಕದ್ದು. ಕೋವಿಡ್ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next