Advertisement
ಆಗ ತಾನೆ ಪಿಯು ಮುಗಿಸಿ ಡಿಗ್ರಿಗೆ ಸೇರಿದ್ದೆ. ಹೊಸ ಜಾಗ,ಕಾಲೇಜು, ಹೊಸ ಸ್ನೇಹಿತರು. ಕಾಲೇಜು ಎಂಬ ಬಣ್ಣದ ಲೋಕ ತೆರೆದುಕೊಳ್ಳತೊಡಗಿತ್ತು. ನಿಧಾನವಾಗಿ ಒಬ್ಬೊಬ್ಬರೇ ಸ್ನೇಹಿತರಾಗ ತೊಡಗಿದ್ದರು. ಇವರೆಲ್ಲರ ಮಧ್ಯೆ ವಿಶೇಷವಾಗಿ ಕಂಡವಳು ನೀಲು. ಮೂವತ್ತು ಜನ ಹುಡುಗಿಯರ ಗುಂಪಿನಲ್ಲಿ ನೀಲು ನಮ್ಮೆಲ್ಲರಿಗಿಂತ ಭಿನ್ನ. ಅವಳ ಕೊರಳಲ್ಲಿ ತಾಳಿ, ಕಾಲಲ್ಲಿ ಕಾಲುಂಗುರ ಎದ್ದು ಕಾಣುತ್ತಿತ್ತು. ಅವುಗಳಿಂದಲೇ ಅವಳಿಗೆ ಹತ್ತಿರವಾಗಲು ನಾವೆಲ್ಲರೂ ಸ್ವಲ್ಪ ಹಿಂದೇಟು ಹಾಕುತ್ತಿ¨ªೆವು. ಮಾತನಾಡುವಾಗಲೂ ಅಷ್ಟೇ, “ನೀವು-ಹೋಗಿ-ಬನ್ನಿ’ ಎಂದು ಗೌರವ ತೋರಿಸುತ್ತಿದ್ದುದೇ ಹೆಚ್ಚು. ಅವಳು ಬಂದಳೆಂದರೆ ಸಾಕು ತರಲೆ ಮಾತುಗಳನ್ನೆಲ್ಲ ನಿಲ್ಲಿಸಿ ಗಪ್‌ಚುಪ್ ಆಗಿ ಬಿಡುತ್ತಿದ್ದೆವು. ಅವಳನ್ನು ಕಂಡರೆ ನಮಗೆ ಒಂಥರಾ ಭಯಮಿಶ್ರಿತ ಗೌರವ. ಬದುಕಿನಲ್ಲಿ ನಮಗಿಂತ ಸ್ವಲ್ಪ ಮುಂದುವರೆದಿದ್ದಾಳೆಂಬ ಭಾವನೆ.
Related Articles
Advertisement
ಆದರೆ, ಅವರ ಹಾದಿ ಅಷ್ಟು ಸುಲಭದ್ದಲ್ಲ. ಸಮಾಜದ ಕಟ್ಟುಪಾಡಿಗೆ, ಮೂದಲಿಕೆಗೆ ಬೆನ್ನು ಮಾಡಿ ಮುನ್ನುಗ್ಗಬೇಕಾಗುತ್ತದೆ. ಅವಳನ್ನು ಓದಿಸುವ ಸಮಯ, ಅದು ಅವಳೊಬ್ಬಳ ಪರೀಕ್ಷೆಯಲ್ಲ. ಒಂದಿಡೀ ಕುಟುಂಬದ ಸತ್ವ ಪರೀಕ್ಷೆ. ಅವಳಿಗೇನು ಬಂದಿದೆ ಏನೊಓದ್ತಾಳಂತೆ ಇವರು ಓದಿಸ್ತಾರಂತೆ, ಅತ್ತೆಮನೆಯವರಿಗಾದರೂ ಬುದ್ಧಿ ಬೇಡವೆ ? ಮಗನಿಗೇನಕ್ಕೆ ಮದುವೆ ಮಾಡಿ¨ªಾರೆ? ಅತ್ತೆಗೂ ವಯಸ್ಸಾಯ್ತು ರಾಮಾ-ಕೃಷ್ಣ ಅಂತ ಕುಂತು ತಿನ್ನೋ ವಯಸ್ಸಿನಲ್ಲಿ ಮಗನ ಜೊತೆಗೆ ಸೊಸೆಗೂ ಮಾಡಿ ಬಡಿಸುತ್ತಿ¨ªಾಳಂತೆ. ಮೊಮ್ಮಕ್ಕಳ ಆಡಿಸುವ ವಯಸ್ಸಿನಲ್ಲಿ ಇದೇನ್ ಕರ್ಮ. ಇಷ್ಟೇ ಅಲ್ಲಾ, ಕಾಲೇಜಿನಲ್ಲಿ ಯಾವನ್ನಾದರೂ ಕಟ್ಟಿಕೊಂಡು ಅವಳು ಓಡಿ ಹೋದರೆ ಇವರಿಗೆ ಬುದ್ಧಿ ಬರುತ್ತದೆ- ಹೀಗೆ ಕೇಳಲು ಅಸಾಧ್ಯವಾದ ಮಾತುಗಳನ್ನೂ ಎದುರಿಸಬೇಕಾಗುತ್ತದೆ.
ಇವೆಲ್ಲದರ ಮಧ್ಯೆ ಎಲ್ಲವನ್ನೂ ಎದುರಿಸಿ ಹೆಣ್ಣೊಬ್ಬಳ ಆಸೆಗೆ, ಕನಸಿಗೆ ನೀರೆರೆಯುವ ಬಹಳಷ್ಟು ಮಂದಿ ನಮ್ಮ ಮಧ್ಯೆಯೇ ಇ¨ªಾರೆ. ಅಂತವರು ಅವಳ ದೃಷ್ಟಿಯಲ್ಲಿ ವಿಶೇಷ ಸ್ಥಾನವನ್ನು ಅಲಂಕರಿಸಿಬಿಡುತ್ತಾರೆ. ನಾಲ್ಕು ದಿನ ನಾಲ್ಕುನೂರು ಮಾತನಾಡಿದ ಸಮಾಜವೇ ಅವರನ್ನು ಮುಂದೊಂದು ದಿನ ಹೊಗಳಲು ಪ್ರಾರಂಭಿಸುತ್ತದೆ. ಇದೆಲ್ಲದಕ್ಕೂ ತಾಳ್ಮೆ ಇರಬೇಕು ಅವಳಲ್ಲಿಯೂ, ಗಂಡನಲ್ಲಿಯೂ ಮತ್ತು ಅವನ ಮನೆಯವರಲ್ಲಿಯೂ. ಈ ತಾಳ್ಮೆ ಸಹನೆ ಬೇರೆ ಯಾರೋ ಹೇಳಿ ಬರುವಂತಹುದಲ್ಲ. ಸೊಸೆಯೂ ನಮ್ಮ ಮಗಳಿದ್ದಂತೆಯೇ ಎನ್ನುವ ಭಾವನೆ ಅತ್ತೆಮನೆಯವರಲ್ಲಿ, ಹಾಗೆಯೇ ಹೆಂಡತಿಯೂ ನನ್ನಂತೆಯೇ ಒಂದು ಮಹಾತ್ವಾಕಾಂಕ್ಷೆಯನ್ನುಹೊತ್ತ ಜೀವ ಎಂದು ಗಂಡನಿಗೆ ಅನ್ನಿಸಬೇಕು. ಅದು ಸಾಧ್ಯವಾದರೆ ಮಾತ್ರ ಹೆಣ್ಣೊಬ್ಬಳ ಏಳಿಗೆಯಾಗುತ್ತದೆ.
ಏಕೆಂದರೆ, ಕೆಲವೊಮ್ಮೆ ಅದರಲ್ಲೂ ಹಳ್ಳಿ ಕಡೆ, ತವರು ಮನೆಯಲ್ಲಿ ಹೆಣ್ಣಿಗೆ ಪ್ರೋತ್ಸಾಹ ಸಿಗುವುದು ತುಂಬಾ ಕಡಿಮೆ. ಒಂದು ಹೋಗಿ ಮತ್ತೂಂದಾದರೆ ಮಗಳನ್ನು ಮದುವೆಯಾಗುವವರಾರು? ಚಿಕ್ಕವಯಸ್ಸಿನಲ್ಲೇ ಮದುವೆ ಮಾಡಿದರೆ ಸರಿ, ವಯಸ್ಸಾದ ಮೇಲೆ ಹುಡುಗ ಸಿಗುವುದು ಕಷ್ಟ ಎನ್ನುವ ಭಾವನೆ ಅವರದು. ಇಂತಹ ಸಂದರ್ಭದಲ್ಲಿ ಗಂಡನ ಮನೆಯ ಪ್ರೋತ್ಸಾಹ ಅವಳಿಗೆ ಬೇಕಾಗುತ್ತದೆ. ಅದಲ್ಲದೆ ಇವಳು ಕಾಲೇಜಿಗೆ ಹೋದರೆ ಮನೆಯ ಕೆಲಸಗಳಲ್ಲಿ ಕೈಜೋಡಿಸಲು ಸಾಧ್ಯವಾಗದೆ ಕೆಲವೊಮ್ಮೆ ಅತ್ತೆ-ಸೊಸೆಯ ಮಧ್ಯೆ, ಗಂಡ- ಹೆಂಡತಿಯ ಮಧ್ಯೆ ಶೀತಲ ಸಮರದ ಸಂದರ್ಭಗಳು ಎದುರಾಗುತ್ತವೆ. ಅದೆಲ್ಲವನ್ನೂ ನಿಭಾಯಿಸಿಕೊಂಡು ಸಾಗುವ ಜೀವಗಳು ಜೀವನದ ಇನ್ನೊಂದು ಮಜಲನ್ನು ಹತ್ತುತ್ತವೆ. ಇಲ್ಲಿ ಮೆಟ್ಟಿಲು ಹತ್ತಿದವರಿಗೆ ಮಾತ್ರವಲ್ಲ, ಅವಳಿಗೆ ಸಾಥ್ ನೀಡಿದ ಪ್ರತಿಯೊಬ್ಬರಿಗೂ ಅವಳ ಗೆಲುವಿನ ಹಿರಿಮೆ ಸಲ್ಲುತ್ತದೆ.
ನಮ್ಮಜ್ಜಿ ಕಾಲದಿಂದಲೇ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ ಎಂಬ ಮಾತು ಚಾಲ್ತಿಯಲ್ಲಿದೆ. ಈ ಕಾಲಕ್ಕೆ ಅದನ್ನು ಅನ್ವಯಗೊಳಿಸಬೇಕಾದರೆ, ಪ್ರತಿಯೊಬ್ಬ ಹೆಣ್ಣಿನ ಏಳಿಗೆಯ ಹಿಂದೆ ಒಬ್ಬ ಗಂಡಿರುತ್ತಾನೆ ಎಂದು ಹೇಳಬೇಕು. ಜೊತೆಗೆ ಆಕೆಗೆ ಅವರಿಗೆ ಆಸರೆಯಾಗಿ ನಿಂತ ಹಲವಾರು ಜೀವಗಳಿರುತ್ತವೆ. ಅವರ ಪ್ರೀತಿ, ಹೆಗಲು, ಬೆಂಬಲ, ಧೈರ್ಯ ಅವಳನ್ನು ಸಮಾಜದಲ್ಲಿ ಎತ್ತಿ ಹಿಡಿಯುತ್ತದೆ. ಅವಳ ಯಶಸ್ಸಿಗೆ ಅವರು ತಮ್ಮನ್ನು ಧಾರೆ ಎರೆದಿರುತ್ತಾರೆ. ಇಂತಹುದೇ ಅದೆಷ್ಟೋ ಸಂಬಂಧಗಳು, ಗಂಡ, ಅತ್ತೆ-ಮಾವ ನಮ್ಮೆಲ್ಲರ ಮಧ್ಯೆಯೇ ಇದ್ದಾರೆ ಮತ್ತು ಹೆಣ್ಣುಮಕ್ಕಳ ಏಳಿಗೆಗೆ ದಾರಿದೀಪಗಳಾಗುತ್ತಿದ್ದಾರೆ.
ಜಮುನಾರಾಣಿ ಎಚ್. ಎಸ್.