Advertisement

ಇನ್ನೂ ಆರು ವೈದ್ಯ ಕಾಲೇಜು ಪ್ರಸ್ತಾವ

03:35 PM Mar 01, 2017 | Team Udayavani |

ಉಡುಪಿ: ಕಳೆದ ನಾಲ್ಕು ವರ್ಷಗಳಲ್ಲಿ ಹೊಸದಾಗಿ ಆರು ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಿದ್ದು ಇನ್ನೂ ಆರು ಕಾಲೇಜುಗಳನ್ನು ಸ್ಥಾಪಿಸುವ ಪ್ರಸ್ತಾವ ಇದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ್‌ ಪಾಟೀಲ್‌ ಹೇಳಿದರು.

Advertisement

ಮಣಿಪಾಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ, ಕೊಪ್ಪಳ, ಗದಗ, ಚಾಮರಾಜನಗರ, ಕೊಡಗು, ಕಾರವಾರಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆದಿದ್ದು ಬಾಗಲಕೋಟೆ, ಹಾವೇರಿ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ಯಾದಗೀರ್‌ನಲ್ಲಿ ತೆರೆಯುವ ಪ್ರಸ್ತಾವವಿದೆ. ಇದಕ್ಕೆ ಆರ್ಥಿಕ ಇಲಾಖೆ ಅನುಮತಿ ನಿರೀಕ್ಷಿಸುತ್ತಿದ್ದೇವೆ ಎಂದರು. 

ರಾಜ್ಯದಲ್ಲಿ ಒಟ್ಟು 17 ಸರಕಾರಿ ವೈದ್ಯಧಿಕೀಯ ಕಾಲೇಜುಗಳಿದ್ದು ಕಾಲೇಜುಗಳನ್ನು ಆರಂಭಿಸಿದ ಬಳಿಕ ಬಡವರು ಜಿಲ್ಲಾಸ್ಪತ್ರೆಗಳಿಗೆ ಬರುವುದು ಹೆಚ್ಚಳವಾಗಿದೆ. ಬಡವರಿಗೆ ಖಾಸಗಿ ಆಸ್ಪತ್ರೆಗಳ ಶುಲ್ಕ ಪಾವತಿಸುವುದು ಕಷ್ಟವಾಗುವುದರಿಂದ ಸರಕಾರ ಕ್ರಮ ವಹಿಸುತ್ತಿದೆ. ಇದೇ ವೇಳೆ ಸರಕಾರಿ ವೈದ್ಯಕೀಯ ಸೀಟುಗಳ ಸಂಖ್ಯೆಯೂ ಜಾಸ್ತಿಯಾಗಲಿದೆ ಎಂದರು.

ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ
ಸರಕಾರಿ ಸ್ವಾಮ್ಯದಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಆರಂಭಿಸಲು ಪ್ರಯತ್ನಿಸುತ್ತಿದ್ದೇವೆ. ಬಡಜನರಿಗೆ ಅನುಕೂಲವಾಗುವುದು ನಮ್ಮ ಉದ್ದೇಶ. ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆಯನ್ನು ಮೈಸೂರು, ಕಲಬುರಗಿಯಲ್ಲಿ ತೆರೆದಿದ್ದೇವೆ. ಹುಬ್ಬಳ್ಳಿ ಕಿಮ್ಸ್‌ನಲ್ಲಿ ಈ ವರ್ಷ ತೆರೆಯಲಾಗುವುದು. ಕಿದ್ವಾಯಿ ಆಸ್ಪತ್ರೆಯ ಶಾಖೆಯನ್ನು ಕಲಬುರಗಿಯಲ್ಲಿ ಒಂದು ತಿಂಗಳಲ್ಲಿ ಆರಂಭಿಸಲಾಗುವುದು. ಮಂಡ್ಯದಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ತೆರೆಯಲಿದ್ದೇವೆ ಎಂದು ಹೇಳಿದರು.

ಗ್ರಾಮಾಂತರ ಸೇವೆ: ಕೋರ್ಟ್‌ ತಡೆ
ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮಾಂತರ ಪ್ರದೇಶದಲ್ಲಿ ಸರಕಾರಿ ಸೀಟಿನ ಕೋಟಾದಿಂದ ಕಲಿತವರು ಕಡ್ಡಾಯವಾಗಿ ಸೇವೆ ಸಲ್ಲಿಸಬೇಕೆಂಬ ಕಾಯಿದೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದರು. ನೀಟ್‌ ಪರೀಕ್ಷೆಯಿಂದ ವ್ಯವಸ್ಥೆ ಪಾರದರ್ಶಕವಾಗಲಿದೆ ಎಂದರು. ಗೋಷ್ಠಿಯಲ್ಲಿ ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಉಪಸ್ಥಿತರಿದ್ದರು.

Advertisement

ಉಡುಪಿಯಲ್ಲಿ ಕಾಲೇಜು ಸದ್ಯ ಇಲ್ಲ
ಉಡುಪಿಯಲ್ಲಿ ಸದ್ಯ ವೈದ್ಯಕೀಯ ಕಾಲೇಜು ತೆರೆಯುವ ಪ್ರಸ್ತಾವವಿಲ್ಲ. ಮುಂದಿನ ಹಂತಗಳಲ್ಲಿ  ತೆರೆಯಲಿದ್ದೇವೆ ಎಂದು ಡಾ| ಪಾಟೀಲ್‌ ಹೇಳಿದರು.

ಶುಲ್ಕ ನಿಗದಿ: ಇಂದು ಸಭೆ
ವೈದ್ಯಕೀಯ ಸೀಟಿನ ಶುಲ್ಕ ನಿಗದಿಪಡಿಸಲು ಮಾ. 1ರಂದು ಸಭೆ ನಡೆಯಲಿದೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next