Advertisement

ಗೋಡ್ಜಿಲ್ಲಾ ನಟ ಅಕೀರಾ ನಿಧನ

09:27 PM Mar 18, 2022 | Team Udayavani |

ಟೋಕಿಯೋ: ಜಪಾನ್‌ನ ಪ್ರಸಿದ್ಧ ಸಿನಿಮಾ ಸರಣಿಯಾದ ಗೋಡಿjಲ್ಲಾದಲ್ಲಿ ನಟಿಸಿರುವ ನಟ ಅಕೀರಾ ತಕರಾದಾ ಅವರು ನಿಧನರಾಗಿದ್ದಾರೆ ಎಂದು ಜಪಾನ್‌ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

Advertisement

ಕಳೆದ ತಿಂಗಳು ಸಿನಿಮಾ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

1954ರಲ್ಲಿ ತೆರೆ ಕಂಡ ಮೊದಲ ಗೋಡ್ಜಿಲ್ಲಾ ಸರಣಿಯಲ್ಲಿ ಅಕೀರಾ ಅವರು ಶಿಪ್‌ ಕ್ಯಾಪ್ಟನ್‌ ಪಾತ್ರದಲ್ಲಿ ಕಾಣಿಸಿಕೊಂಡು ಸಿನಿ ಪ್ರಿಯರ ಮನಸ್ಸು ಗೆದ್ದಿದ್ದರು. 1961ರಲ್ಲಿ ತೆರೆಕಂಡ “ದಿ ಎಂಡ್‌ ಆಫ್ ಸಮ್ಮರ್‌’ ಸಿನಿಮಾದಲ್ಲೂ ಸಣ್ಣದೊಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next