Advertisement

ವಿಕಲಚೇತನರಿಗೆ ಆಸರೆಯಾಗುವುದು ದೇವರ ಕೆಲಸ :  ಸುಧಾಕರ್‌ ಶೆಟ್ಟಿ

12:55 AM Mar 02, 2019 | Team Udayavani |

ಬಜಗೋಳಿ: ಯಾವುದೇ ಸಂಸ್ಥೆ ನಡೆಸುವಾಗ ಲಾಭ ನಿರೀಕ್ಷೆ ಮಾಡುವುದು ಸಾಮಾನ್ಯ. ಆದರೆ ಚೇತನಾ ಶಾಲೆಯಂತಹ ಕೆಲವೇ ಸಂಸ್ಥೆಗಳು ಮಾತ್ರ ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತವೆ. ಇಲ್ಲಿನ ಶಾಲೆಯ ಮಕ್ಕಳಿಗೆ ನೀಡುವ ಶಿಕ್ಷಣ, ಸ್ವಚ್ಛತೆ ಹಾಗೂ ಕಾರ್ಯಕ್ಷಮತೆ ನಿಜವಾಗಲೂ ಶ್ಲಾಘನೀಯವಾದುದು ಎಂದು ತಾ.ಪಂ. ಸದಸ್ಯರಾದ ಮುಡಾರು ನಡುತುಂಡುಮನೆ  ಸುಧಾಕರ್‌ ಶೆಟ್ಟಿ ಹೇಳಿದರು. ಅವರು ಚೇತನಾ ವಿಶೇಷ ಶಾಲೆಯಲ್ಲಿ  ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
 
ಯುವ ಉದ್ಯಮಿಗಳಾದ ನಲ್ಲೂರು ಶೆಟ್ಟಿ ಕಂಪೌಂಡ್‌ ಪ್ರಕಾಶ್‌ ಶೆಟ್ಟಿ ಪೂನಾ ಹಾಗೂ ದಿನೇಶ್‌ ಭಂಡಾರಿ ಬಜಗೋಳಿ  40 ಸಾವಿರ ರೂ. ಧನಸಹಾಯವನ್ನು ಚೇತನಾ ವಿಶೇಷ ಶಾಲೆ ಹಾಗೂ ವಿಜೇತಾ ವಿಶೇಷ ಶಾಲೆಗೆ ಕೊಡುಗೆಯಾಗಿ ನೀಡಿದರು. 

Advertisement

ಈ ಸಂದರ್ಭದಲ್ಲಿ  ಅನಿತಾ ದಿನೇಶ್‌ ಭಂಡಾರಿ, ರಾಜೇಂದ್ರ  ಮಾನೆಕ್‌ ಉಮೇಶ್‌ ದಾಮ್ಲೆ  ಪೂನಾ, ಜಯರಾಮ್‌ ಪ್ರಭು, ದೀಕ್ಷಿತ್‌ ಶೆಟ್ಟಿ,, ಶಾಲಾ ಅಡಳಿತ ಮಂಡಳಿ ಸದಸ್ಯರಾದ  ವಿಜಯ್‌ಕುಮಾರ್‌ಉಪಸ್ಥಿತರಿದ್ದರು.ಹೇಮಲತಾ ಶೆಟ್ಟಿ ಸ್ವಾಗತಿಸಿ, ರಘುನಾಥ ಶೆಟ್ಟಿ ವಂದಿಸಿದರು.    

Advertisement

Udayavani is now on Telegram. Click here to join our channel and stay updated with the latest news.

Next