Advertisement

ಸಾಮರಸ್ಯದಿಂದ ದೇವರ ಅನುಗ್ರಹ : ನಡಿಬೈಲು ತಂತ್ರಿ

01:00 AM Mar 14, 2019 | Harsha Rao |

ಪೈವಳಿಕೆ: ಜಾತಿ, ಮತ, ಭೇದ ಮರೆತು ಯಾವುದೇ ವೈಮನಸ್ಸು ಇಲ್ಲದೆ ಪರಸ್ಪರರು ಒಗ್ಗೂಡಿಕೊಂಡು ಆರಾಧನಾಲಯಗಳನ್ನು ಜೀರ್ಣೋದ್ಧಾರ ಗೊಳಿಸಿ ಪೂಜಿಸುವುದರಿಂದ ದೇವರ ಸಂಪೂರ್ಣ ಅನುಗ್ರಹ ಸಾಧ್ಯ. ಅದೆಷ್ಟೋ ಕ್ಷೇತ್ರಗಳು ಏಕತೆಗೆ ಹೆಸರುಗಳಿಸಿವೆಯೆಂದು ತಂತ್ರಿವರ್ಯರಾದ ವೇ|ಮೂ| ಶ್ರೀ ನಡಿಬೈಲು ಶಂಕರನಾರಾಯಣ ಭಟ್‌ ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು.

Advertisement

ಅವರು ಪೈವಳಿಕೆ ಕಡೆಂಕೋಡಿ ಶ್ರೀ ನಾಗ ರಕ್ತೇಶ್ವರಿ ಪರಿವಾರ ದೈವಗಳ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಪ್ರಯುಕ್ತ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಶ್ರೀ ಸಾನ್ನಿಧ್ಯಗಳಿಗೆ ಅವಶ್ಯಕತೆಯುಳ್ಳ ಅಲ್ಪ ಸ್ಥಳವನ್ನು ದಾನ ರೂಪದಲ್ಲಿ ನೀಡಿದ ಇಬ್ರಾಹಿಂ ಕಡೆಂಕೋಡಿ ಅವರನ್ನು ಸಮ್ಮಾನಿಸಿ ಆಶೀರ್ವಚನವಿತ್ತರು.

ಚಿಪ್ಪಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಐತ್ತಪ್ಪ ಶೆಟ್ಟಿಗಾರ್‌ ಅವರ ಉಪಸ್ಥಿತಿಯಲ್ಲಿ ಪೈವಳಿಕೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಭಾರತೀ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಪೈವಳಿಕೆ ಪಂಚಾಯತ್‌ ಸದಸ್ಯೆ ಸುಜಾತಾ ಬಿ. ರೈ ಅಧ್ಯಕ್ಷತೆ ವಹಿಸಿದರು. 

ಮುಖ್ಯ ಅತಿಥಿಗಳಾಗಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ  ಅಶ್ವತ್ಥ್   ಪೂಜಾರಿ ಲಾಲ್‌ಭಾಗ್‌,  ಕೊಮ್ಮಂಗಳ   ಕೊರತಿ ಗುಳಿಗ  ಕೊರಗಜ್ಜ ಸೇವಾ ಸಮಿತಿ  ಅಧ್ಯಕ್ಷ ರಘುನಾಥ ಶೆಟ್ಟಿ ಕೊಮ್ಮಂಗಳ,  ನಿವೃತ್ತ ಜಿಲ್ಲಾ   ಖಜಾನಾಧಿಕಾರಿ ಸೀತಾರಾಮ ಬೋಳಂಗಳ, ಪೈವಳಿಕೆ ಸೇವಾ  ಸಹಕಾರಿ  ಬ್ಯಾಂಕ್‌ ಮಾಜಿ ಅಧ್ಯಕ್ಷ ಗಣಪತಿ ಭಟ್‌ ಕುಂಡೇರಿ, ಜಾದೂಗಾರರಾದ ಬಾಲಸುಬ್ರಹ್ಮಣ್ಯ ಭಟ್‌ ಕಡೆಂಕೋಡಿ, ಪಂಚಾಯತ್‌ ಸದಸ್ಯ ಚನಿಯ ಕೊಮ್ಮಂಗಳ, ಕಡೆಂಕೋಡಿ   ಬನ ಆಡಳಿತ ಸಮಿತಿ ಅಧ್ಯಕ್ಷ ಮಾಧವ ಕಡೆಂಕೋಡಿ, ಕಡೆಂಕೋಡಿ ಬನ ಕಾರ್ಯದರ್ಶಿ ಗೋಪಾಲಕೃಷ್ಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸತ್ಯಶಂಕರ ಭಟ್‌ ಮಳಿವು, ಕಾರ್ಯದರ್ಶಿ ಮೋಹನ್‌ ಶೆಟ್ಟಿ ನಡುವಳಚಿಲ್‌, ಕಡೆಂಕೋಡಿ ಕರಾವಳಿ ಫ್ರೆಂಡ್ಸ್‌ ಕ್ಲಬ್‌ ಅಧ್ಯಕ್ಷ ಹರೀಶ್‌ ನಾಯ್ಕ ಕಡೆಂಕೋಡಿ, ಪ್ರಸಿದ್‌ ಡಿ’ಸೋಜಾ ಕಡೆಂಕೋಡಿ ಉಪಸ್ಥಿತರಿದ್ದು ಶುಭಹಾರೈಸಿದರು.

Advertisement

ಇಬ್ರಾಹಿಂ ಕಡೆಂಕೋಡಿ, ಡಾ| ಕೃಷ್ಣ ಕಡೆಂಕೋಡಿ, ಚಿದಾನಂದ ಲಾಲ್‌ಭಾಗ್‌, ಮಂಜಪ್ಪ ಮೂಲ್ಯ ಕಡೆಂಕೋಡಿ, ಮಾಧವ ಕಡೆಂಕೋಡಿ, ಗೋಪಾಲಕೃಷ್ಣ ಭಟ್‌ ಅಡ್ಕತಿಮಾರು, ಜಾದೂಗಾರ್ತಿ ತೇಜಸ್ವಿನಿ ಕಡೆಂಕೋಡಿ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.

ಅಶೋಕ್‌ ಸ್ವಾಗತಿಸಿದರು. ಗೋಪಾಲಕೃಷ್ಣ ಶೆಟ್ಟಿಗಾರ್‌ ಕೊಮ್ಮಂಗಳ ವಂದಿಸಿದರು. 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಧ್ವನಿ, ಮಿಮಿಕ್ರಿ, ಜಾದೂ ನೃತ್ಯ ಹಾಗೂ ಕರಾವಳಿ ಫ್ರೆಂಡ್ಸ್‌ ಕ್ಲಬ್‌ ಪ್ರಾಯೋಜಕತ್ವದಲ್ಲಿ ಶಾರದಾ ಕಲಾ ಆರ್ಟ್ಸ್ ಮಂಜೇಶ್ವರ ಅವರಿಂದ “ಇತ್ತಿನಾತ್‌ ದಿನ’ ನಾಟಕ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next