Advertisement

“ಗಾಡ್‌ಫಾದರ್‌’ಉತ್ತಮ ಪ್ರದರ್ಶನ: “ಥ್ಯಾಂಕ್ಯೂ ಸಲ್ಲು ಭಾಯ್‌’ಎಂದ ಚಿರಂಜೀವಿ

09:17 PM Oct 08, 2022 | Team Udayavani |

ಮುಂಬಯಿ: ದಕ್ಷಿಣ ಭಾರತದ ನಟ ಚಿರಂಜೀವಿ ಅಭಿನಯದ “ಗಾಡ್‌ಫಾದರ್‌’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಕ್ಕೆ ನೀವೇ ಶಕ್ತಿ ಎಂದು ಚಿರಂಜೀವಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಹೇಳಿದ್ದಾರೆ.

Advertisement

“ಥ್ಯಾಂಕ್ಯೂ ಸಲ್ಮಾನ್‌ ಭಾಯ್‌. ನಿಮ್ಮಿಂದಾಗಿ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ’ ಎಂದು ಚಿರಂಜೀವಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೂ ಮೊದಲು, ಸಿನಿಮಾ ಯಶಸ್ವಿಯಾದದ್ದಕ್ಕೆ ಚಿರಂಜೀವಿಗೆ ಶುಭ ಕೋರಿ ಸಲ್ಮಾನ್‌ ವಿಡಿಯೋ ಹಂಚಿಕೊಂಡಿದ್ದರು.

ಮಲಯಾಳಂನ “ಲುಸಿಫೈಯರ್‌’ ಸಿನಿಮಾದ ರಿಮೇಕ್‌ ಆಗಿರುವ “ಗಾಡ್‌ಫಾದರ್‌’ನಲ್ಲಿ ಸಲ್ಮಾನ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next