Advertisement

“ದೈವ, ದೇವರ ಭಕ್ತಿಯಿಂದಾಗಿ ಧರ್ಮ ನೆಲೆಸಿದೆ’

03:18 PM Mar 13, 2017 | |

ಕಡಬ : ತುಳುನಾಡಿನಲ್ಲಿ ದೈವ ದೇವರಿಗೆ ಅಪಾರ ಪ್ರಾಮುಖ್ಯತೆ ಇದೆ. ದೈವ ದೇವರ ಮೇಲಿನ ಭಯ ಭಕ್ತಿಯಿಂದಾಗಿ ಇಲ್ಲಿ ಧರ್ಮ ನೆಲೆಸಿದೆ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.ಮರ್ದಾಳದ 102 ನೆಕ್ಕಿಲಾಡಿ ಗ್ರಾಮದ ನಡುಮಜಲು ಶ್ರೀ ಮಹಾವಿಷ್ಠು ದೇವಸ್ಥಾನ, ಶ್ರೀ ಹೊಸಮ್ಮ ದೇವಿ, ಕೊಡಮಣಿತ್ತಾಯ ಮತ್ತು ವಿಷ್ಣುಮೂರ್ತಿ ದೈವಸ್ಥಾನದಲ್ಲಿ  ಬ್ರಹ್ಮಕಲಶೋತ್ಸವದ ಪ್ರಯುಕ್ತ ಶನಿವಾರ ರಾತ್ರಿ ಆಯೋಜಿಸಲಾಗಿದ್ದ ಧಾರ್ಮಿಕಸಭೆಯಲ್ಲಿ ಆಶೀರ್ವಚನ ಅವರು ನೀಡಿದರು.

Advertisement

ಯಾರಿಗೂ ಕೆಡುಕನ್ನು ಬಯಸದೆ, ಸರ್ವರಿಗೂ ಒಳಿತನ್ನು ಬಯಸುವ ಮೂಲಕ ಸನ್ಮಾರ್ಗದಲ್ಲಿ ಬದುಕುವುದೇ ನಿಜವಾದ ಧರ್ಮ.  ಅನ್ಯಾಯದ ಕೆಲಸಗಳನ್ನು ಮಾಡಿ ಜನರ ಕಣ್ಣು ತಪ್ಪಿಸಿದರೂ ದೈವ ದೇವರ ಕಣ್ಣು ತಪ್ಪಿಸಲು ಸಾಧ್ಯವಿಲ್ಲಎಂದರು.

ಪುತ್ತೂರಿನ ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಶ್ರೀಶಕುಮಾರ್‌ ಎಂ.ಕೆ. ಧಾರ್ಮಿಕ ಉಪನ್ಯಾಸ ನೀಡಿದರು. ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಜಯಸೂರ್ಯ ರೈ ಮಾದೋಡಿ ಮಾತನಾಡಿದರು.

ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು, ಆರ್ಯಭಟ ಪ್ರಶಸ್ತಿ ವಿಜೇತ ಮೂಡಂಬೈಲು ರವಿ ಶೆಟ್ಟಿ, ಅಳಿಕೆ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ನಿವೃತ್ತ ಶಿಕ್ಷಕ ಕೆ. ರತ್ನಾಕರ ರೈ, ಬಂಟ್ವಾಳದ ಶ್ರೀ ಮಾತಾ ಲಕ್ಷಣಿ ಶಾಂತಿಧಾಮದ ಸಂಸ್ಥಾಪಕ ಹರೀಶ್‌ ಪೆರ್ಗಡೆ, ಹಾಸನ ಹಿರಿಯ ನ್ಯಾಯಾಧೀಶ ವಿಜಯಕುಮಾರ್‌ ರೈ ಬಡಕ್ಕೋಡಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. 

ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಾರಾಯಣ ಭಟ್‌ ಕಲ್ಪುರೆ, ದೇವಸ್ಥಾನದ ಆಡಳಿತದಾರ ಎಸ್‌. ನಾರಾಯಣ ರೈ ನಡುಮಜಲು, ಬ್ರಹ್ಮಕಲಶ ಸಮಿತಿಯ ಕಾರ್ಯಾಧ್ಯಕ್ಷ ಜನಾರ್ದನ ಗೌಡ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಕರುಣಾಕರ ರೈ ಕರ್ಮಾಯಿ ಉಪಸ್ಥಿತರಿದ್ದರು.

Advertisement

ಬ್ರಹ್ಮಕಲಶ ಸಮಿತಿಯ ಗೌರವ ಸಲಹೆಗಾರ ಪ್ರಸಾದ ಕೆದಿಲಾಯ ಸ್ವಾಗತಿಸಿ, ವ್ಯವಸ್ಥಾಪನ ಸಮಿತಿಯ ಸತ್ಯನಾರಾಯಣ ಹೆಗ್ಡೆ ವಂದಿಸಿದರು. ಯಶವಂತ ರೈ ಮರ್ದಾಳ, ಮಂಜುನಾಥ ಕೋಲಂತ್ತಾಡಿ, ದೇವಪ್ರಸಾದ್‌ ರೈ ಬಿ. ಮರ್ದಾಳ ಹಾಗೂ ಅಜಿತ್‌ಕುಮಾರ್‌ ಜೈನ್‌ ನಿರೂಪಿಸಿದರು.

ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು, ಆರ್ಯಭಟ ಪ್ರಶಸ್ತಿ ವಿಜೇತ ಮೂಡಂಬೈಲು ರವಿ ಶೆಟ್ಟಿ, ಅಳಿಕೆ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ನಿವೃತ್ತ ಶಿಕ್ಷಕ ಕೆ. ರತ್ನಾಕರ ರೈ, ಬಂಟ್ವಾಳದ ಶ್ರೀ ಮಾತಾ ಲಕ್ಷಣಿ ಶಾಂತಿಧಾಮದ ಸಂಸ್ಥಾಪಕ ಹರೀಶ್‌ ಪೆರ್ಗಡೆ, ಹಾಸನ ಹಿರಿಯ ನ್ಯಾಯಾಧೀಶ ವಿಜಯಕುಮಾರ್‌ ರೈ, ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಾರಾಯಣ ಭಟ್‌ ಕಲ್ಪುರೆ, ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಜಯಸೂರ್ಯ ರೈ ಮಾದೋಡಿ, ಕಾರ್ಯಾಧ್ಯಕ್ಷ ಜನಾರ್ದನ ಗೌಡ ಪುತ್ತಿಲ, ಜಾತ್ರೆಯ ವೇಳೆ ದೇವರ ಉತ್ಸವಮೂರ್ತಿಯನ್ನು ಹೊರುವ ಸುಬ್ರಹ್ಮಣ್ಯ ಉಪಾಧ್ಯಾಯ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ದೇವಾಲಯದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಸಹಕರಿಸಿದ ಹಲವಾರು ಮಂದಿಯನ್ನು ಗೌರವಿಸಲಾಯಿತು.

ಇಂದು ಬ್ರಹ್ಮಕಲಶಾಭಿಷೇಕ
ದೇವಾಲಯದಲ್ಲಿ ಮಾ. 13ರಂದು ಬೆಳಗ್ಗೆ ಗಂಟೆ 10.40ರ ಶುಭಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರ ಮತ್ತು ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಕುಂಭೇಶ ಕಲಶಾಭಿಷೇಕ, ನಿದ್ರಾ ಕಲಾಶಾಭಿಷೇಕ, ಜೀವ ಕಲಶಾಭಿಷೇಕ, ಪ್ರತಿಷ್ಠಾಪೂಜೆ, ಶಿಖರ ಪ್ರತಿಷ್ಠೆ ನಡೆದು ಬ್ರಹ್ಮಕಲಶಾಭಿಷೇಕ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next