ಹ್ಯಾಮಿಲ್ಟನ್: ಭಾರತದ ಹಿರಿಯ ವೇಗಿ ಜೂಲನ್ ಗೋಸ್ವಾಮಿ ವನಿತಾ ವಿಶ್ವಕಪ್‌ನಲ್ಲಿ ಅತ್ಯಧಿಕ ವಿಕೆಟ್ ಉರುಳಿಸಿದ ಆಸ್ಟ್ರೇಲಿಯದ ಮಾಜಿ ಸ್ಪಿನ್ನರ್ ಲಿನ್ ಫುಲ್ ಸ್ಟನ್ ಅವರ ದಾಖಲೆಯನ್ನು ಸರಿದೂಗಿಸಿದ್ದಾರೆ.
ಇಬ್ಬರೂ 39 ವಿಕೆಟ್ ಕೆಡವಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
5ನೇ ವಿಶ್ವಕಪ್ ಆಡುತ್ತಿರುವ 39 ವರ್ಷದ ಜೂಲನ್ ಗೋಸ್ವಾಮಿ ಗುರುವಾರದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಕೀಪರ್ ಕ್ಯಾಟಿ ಮಾರ್ಟಿನ್ ಅವರನ್ನು ಔಟ್ ಮಾಡುವ ಮೂಲಕ ಫುಲ್ ಸ್ಟನ್ ಅವರಿಗೆ ಸರಿಸಮನಾಗಿ ನಿಂತರು. ಫುಲ್ ಸ್ಟನ್ 80ರ ದಶಕದಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ್ದರು. ಅವರ 39 ವಿಕೆಟ್ 20 ವಿಶ್ವಕಪ್ ಪಂದ್ಯಗಳಿಂದ ಬಂದಿತ್ತು. ಜೂಲನ್ ಪಾಲಿಗೆ ಇದು 30ನೇ ಪಂದ್ಯ. ಮುಂದಿನ ಪಂದ್ಯದಲ್ಲಿ ಜೂಲನ್ ಅವರಿಂದ ವಿಶ್ವದಾಖಲೆ ನಿರೀಕ್ಷಿಸಬಹುದು.
ವನಿತಾ ಏಕದಿನ ಪಂದ್ಯಗಳಲ್ಲಿ ಸರ್ವಾಧಿಕ 248 ವಿಕೆಟ್ ಉರುಳಿಸಿದ ವಿಶ್ವದಾಖಲೆ ಕೂಡ ಜೂಲನ್ ಗೋಸ್ವಾಮಿ ಹೆಸರಲ್ಲಿದೆ.