ಇಸ್ತಾಂಬುಲ್: ಭೂಕಂಪದಿಂದ ಕಟ್ಟಡಗಳ ಅವಶೇಷಗಳಡಿ ಸಿಲುಕಿ ಟರ್ಕಿ ಫುಟ್ಬಾಲ್ ತಂಡದ ಪ್ರಮುಖ ಆಟಗಾರನೊಬ್ಬ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಟರ್ಕಿಯ ಫುಟ್ಬಾಲ್ ಕ್ಲಬ್ ಯೆನಿ ಮಾಲತ್ಯಸ್ಪೋರ್ ಪರವಾಗಿ ಆಡಿದ ಗೋಲ್ ಕೀಪರ್ ಅಹ್ಮತ್ ಐಯುಪ್ ಟರ್ಕಸ್ಲಾನ್ (28) ನೆಲಸಮವಾದ ಕಟ್ಟಡಗಳಡಿ ಸಿಲುಕಿ, ಭೂಕಂಪದ ಪ್ರತಾಪಕ್ಕೆ ಬಲಿಯಾಗಿದ್ದಾರೆ.
ಆಹ್ಮತ್ ಸಾವಿನ ಸುದ್ದಿಯನ್ನು ಫುಟ್ಬಾಲ್ ಕ್ಲಬ್ ಯೆನಿ ಮಾಲತ್ಯಸ್ಪೋರ್ ತಂಡ ಟ್ವೀಟ್ ಮಾಡಿ ಅಧಿಕೃತವಾಗಿ ಹೇಳಿದ್ದು, “ನಮ್ಮ ಗೋಲ್‌ಕೀಪರ್, ಅಹ್ಮತ್ ಐಯುಪ್ ಟರ್ಕಸ್ಲಾನ್, ಭೂಕಂಪದ ಕುಸಿತದ ನಂತರ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ರೆಸ್ಟ್ ಇನ್ ಪೀಸ್, “ನಾವು ನಿಮ್ಮನ್ನು ಮರೆಯುವುದಿಲ್ಲ, ನೀವೊಬ್ಬ ಅದ್ಭುತ ವ್ಯಕ್ತಿ.” ಎಂದು ಬರೆದು ಸುದ್ದಿಯನ್ನು ತಿಳಿಸಿದೆ.
ಇದನ್ನೂ ಓದಿ: ದಳಪತಿ ವಿಜಯ್ ʼಲಿಯೋʼ ಚಿತ್ರದಿಂದ ಹೊರಬಂದ ತ್ರಿಷಾ?: ವೈರಲ್ ಸುದ್ದಿಗೆ ನಟಿ ತಾಯಿ ಸ್ಪಷ್ಟನೆ
2021 ತಂಡಕ್ಕೆ ಸೇರಿಕೊಂಡ ಅಹ್ಮತ್ 6 ಬಾರಿ ಎರಡನೇ ವಿಭಾಗದ ಕ್ಲಬ್ ಯೆನಿ ಮಲತ್ಯಸ್ಪೊ ಪರವಾಗಿ ಆಡಿದ್ದರು.
ಟರ್ಕಿ – ಸಿರಿಯಾದಲ್ಲಿ ಸಂಭವಿಸಿರುವ ಭೂಕಂಪದಿಂದ ಎರಡೂ ದೇಶಗಳ ಪ್ರದೇಶಗಳು ಶ್ಮಶಾನವಾಗಿದೆ. ಉಭಯ ದೇಶದಲ್ಲಿ 7,800 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.