ಶಿರ್ವ: ಜೀವನದಲ್ಲಿ ಯಶಸ್ಸು ಗಳಿಸಲು ಯಾವುದೇ ಸುಲಭ ದಾರಿ ಇಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇರಿಸಿಕೊಂಡು ಕಠಿಣ ಪರಿಶ್ರಮದೊಂದಿಗೆ ಗುರಿ ಸಾಧಿಸುವ ಛಲವಿದ್ದಲ್ಲಿ ಯಶಸ್ಸು ಸಿಗುತ್ತದೆ ಎಂದು ಉಡುಪಿ ಕೆಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ರೈ|ರೆ|ಡಾ| ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಗುರುವಾರ ಡಾನ್ ಬೊಸ್ಕೊ ಸಿಬಿಎಸ್‌ಇ ಶಾಲಾ ಸಭಾಂಗಣದಲ್ಲಿ ನಡೆದ ಸಂಸ್ಥೆಯ 2019-20ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಪ್ರಾರಂಭೋತ್ಸವ ಮತ್ತು ಮಂಗಳೂರಿನ ಎಜುಕೇರ್ ಟೀಂನ ಸಂಸ್ಥೆಯ ಭೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಂಗಳೂರಿನ ಎಜುಕೇರ್ ಸಂಸ್ಥೆಯ ಪ್ರಮೋಟರ್ ಮೈಕಲ್ ಡಿ ಸೋಜಾ ಮಾತನಾಡಿ ಗ್ರಾಮೀಣ ಪರಿಸರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಯ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಿ ಎಂದು ಹೇಳಿದರು.
ಎಜುಕೇರ್ ಸಂಸ್ಥೆಯ ಪ್ರಮೋಟರ್ ಮೈಕಲ್ ಡಿ‡ ಸೋಜಾ,ಸಂಸ್ಥೆಯ ಆಧ್ಯಾತ್ಮಿಕ ಗುರು ರೆ|ಫಾ| ವಲೇರಿಯನ್ ಡಿ‡ ಸೋಜಾ, ಮಂಗಳೂರು ದಾಯ್ಜಿವರ್ಲ್ಡ್ ಸಂಸ್ಥೆಯ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮತ್ತು ಸ್ಟೀವನ್ ಪಿಂಟೋ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ಉಡುಪಿ ಕೆಥೋಲಿಕ್ ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ|ಫಾ|ಮೊ| ಬ್ಯಾಪ್ಟಿಸ್ಟ್ ಡಿ‡’ಸೋಜಾ ಸಮ್ಮಾನಿತರ ಪರಿಚಯ ಮಾಡಿದರು.
ಚರ್ಚ್‌ನ ಸಹಾಯಕ ಧರ್ಮಗುರು ರೆ|ಫಾ| ಅಶ್ವಿನ್ ಅರಾನ್ಹಾ ,ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿ‡ ಸೋಜಾ,ಶಾಲಾಡಳಿತ ಮಂಡಳಿಯ ಸದಸ್ಯರಾದ ಮೆಲ್ವಿನ್ ಅರಾನ್ಹಾ, ಜೂಲಿಯಾನ್ ರೊಡ್ರಿಗಸ್,ಮೆಲ್ವಿನ್ ಡಿ‡ ಸೋಜಾ ಮತ್ತು ಡಯಾನಾ ಸಲ್ದಾನಾ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ಐರಿನ್ ರೋಡ್ರಿಗಸ್, ಶಾಲಾ ಉಪ ಪ್ರಾಂಶುಪಾಲೆ ಐರಿನ್ ಕಾರ್ಡೋಜಾ, ಶಾಲಾ ನಾಯಕ ಬ್ರಾನೆಟ್ ನಜರೆತ್, ಉಪ ನಾಯಕ ಎಡ್ರಿನ್ ಡಿ‡ ಸೋಜಾ,ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿರ್ವ ಆರೋಗ್ಯ ಮಾತಾ ದೇವಾಲಯದ ಧರ್ಮಗುರು ಹಾಗೂ ಸಂತ ಮೇರಿ ಮತ್ತು ಡೊನ್ ಬೊಸ್ಕೊ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ|ಫಾ| ಡೆನ್ನಿಸ್ ಡೇಸಾ ಸ್ವಾಗತಿಸಿದರು. ಜೀನಲ್ ಕ್ವಾಡ್ರಸ್‌ಕಾರ್ಯಕ್ರಮ ನಿರೂಪಿಸಿ, ಶಾಲಾ ಪ್ರಾಂಶುಪಾಲ ರೆ|ಫಾ|ಮಹೇಶ್ ಡಿ ಸೋಜಾ ವಂದಿಸಿದರು.