Advertisement

ಗೋವಾದಲ್ಲಿ ಶೀಘ್ರ ಸ್ವಂತ ವಿದ್ಯುತ್ ಉತ್ಪಾದನೆ ಆರಂಭ: ಗೋವಾ ಇಂಧನ ಸಚಿವ ಸುದಿನ್ ಧವಳಿಕರ್

05:39 PM Jun 30, 2023 | Team Udayavani |

ಪಣಜಿ:  ಪ್ರಸ್ತುತ, ಗೋವಾ ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸುತ್ತಿಲ್ಲ. ಶೀಘ್ರದಲ್ಲೇ ಗೋವಾ ರಾಜ್ಯವು ಸ್ವಂತವಾಗಿ ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸುತ್ತದೆ. 1,200 ಕೋಟಿ ವೆಚ್ಚದಲ್ಲಿ ಭೂಗತ ವಿದ್ಯುತ್ ಮಾರ್ಗಗಳನ್ನು ಹಾಕಲು ಆರಂಭಿಸಿದ್ದೇವೆ. ಇದರಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ. ಮುಖ್ಯಮಂತ್ರಿ ಡಾ.ಸಾವಂತ್ ನೇತೃತ್ವದ ಸರ್ಕಾರದ ಮೇಲೆ ಗೋವಾದ ಜನತೆ ವಿಶ್ವಾಸವಿಡಬೇಕು. ಮುಂದಿನ 25 ವರ್ಷಗಳಲ್ಲಿ ಗೋವಾದಲ್ಲಿ ವಿದ್ಯುತ್ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿದೆ ಎಂದು ಇಂಧನ ಸಚಿವ ಸುದಿನ್ ಧವಳಿಕರ್ ಭರವಸೆ ನೀಡಿದರು.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ದಕ್ಷಿಣ ಗೋವಾದಲ್ಲಿ ನೀರಿನ ಸಮಸ್ಯೆ ಬಗೆಹರಿಸಿದ್ದೇನೆ, ಇನ್ನೆರಡು ವರ್ಷಗಳಲ್ಲಿ ಗೋವಾದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸುತ್ತೇನೆ ಎಂದು ಧವಲೀಕರ್ ಹೇಳಿದರು. “ಇಂಡಸ್ಟ್ರಿಯಲ್ ಎಸ್ಟೇಟ್‍ಗೆ  ವಿದ್ಯುತ್ ಏರಿಳಿತದ ಸಮಸ್ಯೆ 65 ಎಂವಿಎ ಟ್ರಾನ್ಸ್‍ಫಾರ್ಮರ್ ಸ್ಥಾಪಿಸಿದ ನಂತರ ಬಗೆಹರಿಯಲಿದೆ. ಕುಂಕಳ್ಳಿ ಸಬ್ ಸ್ಟೇಶನ್ ಅಪ್‍ಗ್ರೇಡ್ ಮಾಡುವ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ.ಕಾಣಕೋಣ ಭಾಗದಲ್ಲಿ 200 ಕೋಟಿ ರೂ ವೆಚ್ಛದಲ್ಲಿ ಅಂಡರ್‍ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಕಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಹೆಚ್ಚು ಸಬ್ ಸ್ಟೇಶನ್ ಅಗತ್ಯವಿರುವ ಸ್ಥಳಗಳಲ್ಲಿ ಸಬ್ ಸ್ಟೇಶನ್ ಸ್ಥಾಪಿಸಲಾಗುವುದು ಎಂದು ಸಚಿವ ಧವಳೀಕರ್ ಮಾಹಿತಿ ನೀಡಿದರು.

350 ಕೋಟಿ ರೂ. ವೆಚ್ಛದಲ್ಲಿ ವೆರ್ನಾ ಸಬ್ ಸ್ಟೇಷನ್ ಗೆ ಟೆಂಡರ್ ಆಗಿದ್ದು, ಸಾಲಗಾಂವ್ ಸಬ್ ಸ್ಟೇಷನ್ ಗೆ 200 ಕೋಟಿ ರೂ.ಗೆ ಟೆಂಡರ್ ಮುಂದಿನ ತಿಂಗಳು ನಡೆಯಲಿದೆ. ಹಲವು ಸಬ್ ಸ್ಟೇಷನ್ ಗಳ ಕಾಮಗಾರಿ ನಡೆಸಲು 2 ಕೋಟಿ ರೂ.ಗಳ ಟೆಂಡರ್ ನೀಡಲಾಗಿದೆ ಎಂದು ಸಚಿವ ಧವಲೀಕರ್ ಮಾಹಿತಿ ನೀಡಿದರು.

ಇದನ್ನೂ ಓದಿಫ್ರೀ ಬಸ್ಸಲ್ಲಿ ಪಿಕ್ನಿಕ್ ಹೋದ ಹೆಂಡತಿ, ಕುಡಿದು ಬಸ್ ಚಕ್ರದ ಕೆಳಗೆ ತಲೆಯಿಟ್ಟ ಪತಿ

Advertisement

Udayavani is now on Telegram. Click here to join our channel and stay updated with the latest news.

Next