Advertisement

Goa; ವಾಳಪೈ-ಬೆಳಗಾವಿ ಹೊಸ ರಸ್ತೆ ಉದ್ಘಾಟನೆ

04:35 PM Jun 29, 2023 | Team Udayavani |

ಪಣಜಿ: ಗೋವಾದ  ವಾಳಪೈ ಮಾರ್ಗವಾಗಿ  ಕರ್ನಾಟಕದ ಬೆಳಗಾವಿಯನ್ನು ಸಂಪರ್ಕಿಸುವ ಹೊಸ ರಸ್ತೆಯನ್ನು ಉದ್ಘಾಟಿಸಲಾಗಿದೆ. ಹೊಸ ಮಾರ್ಗವು ವಾಳಪೈ ಮತ್ತು ಬೆಳಗಾವಿ ನಡುವಿನ ಅಂತರವನ್ನು 30 ಕಿಲೋ ಮೀಟರ್‌ಗಳಷ್ಟು ಕಡಿಮೆಗೊಳಿಸಿದೆ ಮತ್ತು ಪ್ರಯಾಣದ ಸಮಯವನ್ನು 1.5 ಗಂಟೆಗಳವರೆಗೆ ಕಡಿಮೆ ಮಾಡಲಿದೆ ಎನ್ನಲಾಗಿದೆ.

Advertisement

ಪ್ರಾರಂಭದಲ್ಲಿ ವಾಳಪೈಯಿಂದ ಬೆಳಗಾವಿಗೆ 70 ಕಿ.ಮೀ ದೂರ ಕ್ರಮಿಸಲು ಸುಮಾರು ಮೂರು ಗಂಟೆ ತಗುಲುತ್ತಿತ್ತು. ಹೊಸ ಮಾರ್ಗದಿಂದ ಪ್ರವಾಸೋದ್ಯಮವನ್ನು ಆನಂದಿಸಲು ಸಾಧ್ಯವಾಗುತ್ತದೆ. ಈ ಹೊಸ ರಸ್ತೆಯು ಥಾಣೆ ಗ್ರಾಮದ ಪಾಲಿಯಿಂದ ಹೋಗುತ್ತದೆ. ಲಘು ವಾಹನಗಳಿಗೆ ರಸ್ತೆ ಮುಕ್ತಗೊಳಿಸಲಾಗಿದ್ದು, ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಹೊಸ ರಸ್ತೆಯಲ್ಲಿ ಭಾರೀ ವಾಹನಗಳು ಓಡಾಟಕ್ಕೆ ಅವಕಾಶ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹದಾಯಿ ವನ್ಯಜೀವಿ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಈ ರಸ್ತೆಯು ಸುರ್ಲಾ ಗ್ರಾಮದೊಂದಿಗೆ ಉತ್ತಮ ಸಂಪರ್ಕವನ್ನು ಸೃಷ್ಟಿಸಿದೆ. ಈ ಹಿಂದೆ ಪಾಳಿಯಿಂದ ಸುರ್ಲಾ ಗ್ರಾಮಕ್ಕೆ ತೆರಳಲು ಜನರು ಕೇರಿಯ ಮೂಲಕ ಸಂಚರಿಸಬೇಕಿತ್ತು. ಮತ್ತು ಈ ದೂರ ಸುಮಾರು 35 ಕಿ.ಮೀ ಆಗಿತ್ತು. ವಾಳಪೈಯಲ್ಲಿ ಹೊಸ ರಸ್ತೆಯು ಈ ಪ್ರದೇಶದ ಅಭಿವೃದ್ಧಿಗೆ ಉತ್ತೇಜನವನ್ನು ನೀಡುತ್ತದೆ, ಜೊತೆಗೆ ಸುರ್ಲಾ ಗ್ರಾಮಕ್ಕೆ ಉತ್ತಮ ಸಂಪರ್ಕವನ್ನು ಸೃಷ್ಟಿಸುತ್ತದೆ ಎಂದು ಪರ್ಯೆ ಕ್ಷೇತ್ರದ ಶಾಸಕಿ ದಿವ್ಯಾ ರಾಣೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ  ಹೊಸ ಮಾರ್ಗದಿಂದ ತೆರಳುವ ಪ್ರವಾಸಿಗರಿಗೆ ಸುರ್ಲಾ ಗ್ರಾಮದ ಸುತ್ತಮುತ್ತಲಿನ ವಿವಿಧ ಜಲಪಾತಗಳನ್ನು ವೀಕ್ಷಿಸಲು ಅವಕಾಶವಿದೆ. ಅಲ್ಲದೆ, ಹಚ್ಚ ಹಸುರಿನ  ನೈಸರ್ಗಿಕ ಸೌಂದರ್ಯವನ್ನು ಅನುಭವಿಸುವಿರಿ ಎಂದು ಅರಣ್ಯ ಸಚಿವ ವಿಶ್ವಜೀತ್ ರಾಣೆ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next