Advertisement

Goa: ರಾಜ್ಯವು ದೇಶದ ಅಪಘಾತ ರಾಜಧಾನಿಯಾಗುತ್ತಿದೆ- ಆರೋಗ್ಯ ಸಚಿವ ವಿಶ್ವಜಿತ್ ರಾಣೆ

05:21 PM Dec 14, 2023 | Pranav MS |

ಪಣಜಿ: ಗೋವಾ ರಾಜ್ಯವು ದೇಶದ ಅಪಘಾತ ರಾಜಧಾನಿಯಾಗುತ್ತಿದೆ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪಘಾತಗಳ ಪ್ರಮಾಣ ಕಡಿಮೆಯಾಗಬೇಕು. ರಸ್ತೆ ಅಪಘಾತಗಳ ಆತಂಕಕಾರಿ ಹೆಚ್ಚಳವು ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತಿದೆ. ಅಮೂಲ್ಯ ಜೀವಗಳನ್ನು ಉಳಿಸಲು ರಾಜ್ಯಕ್ಕೆ ಕನಿಷ್ಠ 25 ಹೊಸ ಆಂಬ್ಯುಲೆನ್ಸ್‌ಗಳ ಅಗತ್ಯವಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದರು.

Advertisement

ಪಣಜಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ರಾಜ್ಯದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ಗೋವಾ ರಾಜ್ಯವು ದೇಶದ ಅಪಘಾತಗಳ ರಾಜಧಾನಿಯಾಗುತ್ತಿದೆ. ಅನೇಕ ಯುವಕರು ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ ಮತ್ತು ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರದಿಂದಿರಬೇಕು, ಮಕ್ಕಳಿಗೆ ಎಚ್ಚರಿಕೆಯಿಂದ ವಾಹನ ಚಲಾಯಿಸಲು ಸಲಹೆ ನೀಡಬೇಕು ಎಂದು ಆರೋಗ್ಯ ಸಚಿವ ರಾಣೆ ಹೇಳಿದರು.

ಈ ಬಗ್ಗೆ ಸಾಮಾಜಿಕ ಜಾಗೃತಿ ಮೂಡಬೇಕು ಮತ್ತು ಪೋಷಕರೂ ಜವಾಬ್ದಾರಿಯಿಂದ ವರ್ತಿಸಬೇಕು. ಅಪಘಾತ ಘಟನೆಗಳ ಆತಂಕಕಾರಿ ಏರಿಕೆಯಿಂದಾಗಿ ಬಾಂಬೋಲಿಯಲ್ಲಿರುವ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ರೋಗಿಗಳ ಒತ್ತಡದಲ್ಲಿದೆ. ಆದರೆ ನಾವು ಅದನ್ನು ಎದುರಿಸಬೇಕಾಗಿದೆ. ಪ್ರಮಾಣದ ದೃಷ್ಟಿಯಿಂದ ಗೋವಾ ದೇಶದ ಅಪಘಾತ ರಾಜಧಾನಿಯಾಗಿದೆ. ಈ ದರವನ್ನು ಕಡಿಮೆ ಮಾಡಿ ರಸ್ತೆ ಅಪಘಾತಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಸರಕಾರದ ಕರ್ತವ್ಯ ಮಾತ್ರವಲ್ಲ ಸಮಾಜವೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಸಚಿವ ರಾಣೆ ಹೇಳಿದರು.

ರಾಜ್ಯಕ್ಕೆ ಕನಿಷ್ಠ 25 ಹೊಸ ಆಂಬ್ಯುಲೆನ್ಸ್‍ಗಳ ಅಗತ್ಯವಿದೆ. ಆಂಬ್ಯುಲೆನ್ಸ್‌ಗಳು ಹೆಚ್ಚಿನ ಒತ್ತಡದಲ್ಲಿವೆ. ಅಪಘಾತವಾದ ಏಳು ನಿಮಿಷಗಳಲ್ಲಿ ತಲುಪಬೇಕಾಗಿರುವುದರಿಂದ ಕೆಲವೊಮ್ಮೆ ಸಮಸ್ಯೆಗಳು ಎದುರಾಗುತ್ತವೆ. ಇತರ ರಾಜ್ಯಗಳಿಗೆ ಹೋಲಿಸಿದರೆ, ಗೋವಾದಲ್ಲಿ ಆಂಬ್ಯುಲೆನ್ಸ್‍ಗಳು ಅಪಘಾತದ ಸ್ಥಳವನ್ನು ತಲುಪಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ, ಆದರೆ ಸುಧಾರಣೆಯ ಅವಶ್ಯಕತೆಯಿದೆ. ಸುಧಾರಿತ ಜೀವನ ಬೆಂಬಲ ವ್ಯವಸ್ಥೆಯನ್ನು ಪರಿಚಯಿಸಿದ ಏಕೈಕ ರಾಜ್ಯ ಗೋವಾ. ಆಂಬ್ಯುಲೆನ್ಸ್ ಅಗತ್ಯವಿರುವ ಪ್ರದೇಶಗಳ ನಕ್ಷೆಗಾಗಿ ನಾವು ಸಮಿತಿಯನ್ನು ರಚಿಸಿದ್ದೇವೆ. ಖಾಸಗಿ ವ್ಯಾನ್‍ಗಳು ಜನರ ಸೇವೆಯನ್ನು ಮುಂದುವರೆಸುತ್ತವೆ ಮತ್ತು ಅಗತ್ಯವಿದ್ದರೆ ಖಾಸಗಿ ವ್ಯಾನ್‍ಗಳನ್ನು ಸೇವೆಗೆ ತರಲಾಗುವುದು ಎಂದು ರಾಣೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next