Advertisement

Goa: ಕ್ಯಾಸಲ್‍ರಾಕ್-ಕರಂಜೋಲ್ ರೈಲು ನಿಲ್ದಾಣದ ಬಳಿ ಮಣ್ಣು ತೆರವು ಕಾರ್ಯ ಬಹುತೇಕ ಪೂರ್ಣ

04:21 PM Jul 28, 2023 | Team Udayavani |

ಪಣಜಿ: ಗೋವಾದ ಕ್ಯಾಸಲ್‍ರಾಕ್-ಕರಂಜೋಲ್ ರೈಲು ನಿಲ್ದಾಣದ ಬಳಿ ಸುರಂಗ ಮಾರ್ಗದ ಬಳಿ ರೈಲ್ವೆ ಹಳಿಗಳ ಮೇಲೆ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವುಂಟಾಗಿ ನಾಲ್ಕು ದಿನಗಳಿಂದ ಸಿಬ್ಬಂದಿಗಳು ಸತತವಾಗಿ ಮಣ್ಣು ತೆರವು ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಇದೀಗ ಮಣ್ಣು ತೆರವು ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಇನ್ನು ಹಳಿಗಳ ದುರಸ್ಥಿ ಕಾರ್ಯ ಪೂರ್ಣಗೊಂಡ ನಂತರ ಈ ಮಾರ್ಗದಲ್ಲಿ ರೈಲು ಓಡಾಟ ಪುನರಾರಂಭಗೊಳ್ಳುವ ಸಾಧ್ಯತೆಯಿದೆ ಎಂದು ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.

Advertisement

ಕಳೆದ ಸುಮಾರು ನಾಲ್ಕು ದಿಗಳಿಂದ ಈ ಮಾರ್ಗದಲ್ಲಿ ಓಡಾಟ ನಡೆಸುವ ಎಲ್ಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ. ಕ್ಯಾಸಲ್‍ರಾಕ್ ಬಳಿ ರೈಲ್ವೆ ಹಳಿಗಳ ಮೇಲೆ ಭೂಕುಸಿತದಿಂದಾಗಿ  ಕೆಲವು ನಿಲ್ದಾಣಗಳ ಮೊದಲು ಹುಬ್ಬಳ್ಳಿಯಲ್ಲಿ ರೈಲುಗಳನ್ನು ನಿಲ್ಲಿಸಲಾಗುತ್ತಿದೆ. ಹೀಗಾಗಿ ಗೋವಾಕ್ಕೆ ಬರುವ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಹಳಿಗಳ ಮೇಲೆ ಭಾರಿ ಪ್ರಮಾಣದಲ್ಲಿ ಬಿದ್ದಿದ್ದ ಮಣ್ಣು ಮತ್ತು ಮರಗಳನ್ನು ಸಿಬ್ಬಂದಿಗಳು ತೆರವುಗೊಳಿಸುತ್ತಿದ್ದು, ಅಂತಿಮ ಹಂತದಲ್ಲಿ ತೆರವು ಕಾರ್ಯ ನಡೆಯುತ್ತಿದೆ. ಇದೀಗ ರೈಲು ಹಳಿಗಳ ಜೋಡಣೆ ಹಾಗೂ ದುರಸ್ಥಿ ಕಾರ್ಯ ಪೂರ್ಣಗೊಂಡ ನಂತರ ಈ ಮಾರ್ಗದಲ್ಲಿ ಎಂದಿನಂತೆ ರೈಲು ಓಡಾಟ ಆರಂಭಗೊಳ್ಳಲಿದೆ ಎನ್ನಲಾಗಿದೆ.

ಇದನ್ನೂ ಓದಿ: Reunite; 35 ವರ್ಷಗಳ ನಂತರ ತಾಯಿ-ಮಗನನ್ನು ಒಂದುಗೂಡಿಸಿದ ಪ್ರವಾಹ ರಕ್ಷಣಾ ಕಾರ್ಯಾಚರಣೆ!

Advertisement

Udayavani is now on Telegram. Click here to join our channel and stay updated with the latest news.

Next