ಪಣಜಿ : ಗೋವಾ ರಾಜ್ಯದಲ್ಲಿ ಇದುವರೆಗೂ ಕೋವಿಡ್ ಸೋಂಕಿನ ಡೆಲ್ಟಾ ರೂಪಾಂತರಿ 173 ಹೊಸ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ (ಭಾನುವಾರ, ಆಗಸ್ಟ್ 8) ಕೂಡ 69 ಸೊಂಕಿನ ಹೊಸ ಪ್ರಕರಣಗಳು ವರದಿಯಾಗಿದ್ದು ಆ ಪೈಕಿ 64 ಡೆಲ್ಟಾ ರೂಪಾಂತರಿ ಎಂದು ವರದಿಯಾಗಿದೆ.
ಆದರೆ ಗೋವಾದಲ್ಲಿ ಇದುವರೆಗೂ ಡೆಲ್ಟಾ ಪ್ಲಸ್ ಕರೋನಾ ರೂಪಾಂತರಿ ಪತ್ತೆಯಾಗಿಲ್ಲ. ಗೋವಾದಲ್ಲಿ ಡೆಲ್ಟಾ ರೂಪಾಂತರಿ ಸೋಂಕಿತರ ಪೈಕಿ ಬಹುತೇಕ ಮಂದಿ ಈಗಾಗಲೇ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ : ಫೈಟರ್ ಸಾವಿಗೆ ಬೇಜವಾಬ್ದಾರಿಯೇ ಕಾರಣ; ಚಿತ್ರತಂಡದ ವಿರುದ್ಧ ಕಿಡಿಕಾರಿದ ನಟ ಅಜಯ್ ರಾವ್
ಗೋವಾದಿಂದ ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಡೆಲ್ಟಾ ರೂಪಾಂತರಿ ಸೋಂಕಿನ ತಪಾಸಣೆಗಾಗಿ ಇದುವರೆಗೂ ಒಟ್ಟೂ 184 ಸೋಂಕಿನ ಪ್ರಕರಣಗಳನ್ನು ಕಳುಹಿಸಲಾಗಿತ್ತು. ಈ ಪೈಕಿ 115 ಜನರ ವರದಿ ಎರಡು ಹಂತಗಳಲ್ಲಿ ಲಭ್ಯವಾಗಿತ್ತು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು, ಗೋವಾ ರಾಜ್ಯದಲ್ಲಿ ಆಗಸ್ಟ್ 7 ರವರೆಗೆ 13,58,675 ಜನರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಈ ಪೈಕಿ 10,65,696 ಜನರು ಕೋವಿಡ್ ಮೊದಲ ಡೋಸ್ ಪಡೆದುಕೊಂಡಿದ್ದು, 2,92,808 ಜನರು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ : ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 51.19 ಲಕ್ಷ ರೈತರಿಗೆ 1023 ಕೋಟಿ ರೂ. ಬಿಡುಗಡೆ