Advertisement

ನಾಳೆ ಗೋವಾ ಚುನಾವಣೆ: ಬಹುಪಕ್ಷೀಯ ಸ್ಫರ್ಧೆ; 301 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

02:53 PM Feb 13, 2022 | Team Udayavani |

ಪಣಜಿ: ಗೋವಾ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭಗೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಗೋವಾ ಈ ಬಾರಿ ಬಹುಪಕ್ಷೀಯ ಸ್ಫರ್ಧೆ ಏರ್ಪಟ್ಟಿದೆ. ದೇಶದ ಅತ್ಯಂತ ಚಿಕ್ಕ ರಾಜ್ಯ ಗೋವಾದಲ್ಲಿ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ 301  ಮಂದಿ  ಅಭ್ಯರ್ಥಿಗಳ ಭವಿಷ್ಯವನ್ನು 11,64,522 ಮತದಾರರು ನಿರ್ಧರಿಸಲಿದ್ದಾರೆ.

Advertisement

ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ದೇಶದ ಮಾಜಿ ರಕ್ಷಣಾ ಸಚಿವ  ಮನೋಹರ್ ಪರ್ರಿಕರ್ ನಿಧನದ ನಂತರ ಆಡಳಿತಾರೂಢ ಬಿಜೆಪಿಗೆ ಇದು ಮೊದಲ ವಿಧಾನಸಭಾ ಚುನಾವಣೆಯಾಗಿದೆ. ಈ ಬಾರಿ ಬಿಜೆಪಿ, ಕಾಂಗ್ರೇಸ್, ಎಎಪಿ, ಟಿಎಂಸಿ, ಈ ಪ್ರಮುಖ ಪಕ್ಷಗಳ ನಡುವೆ ಪೈಪೋಟಿಯಿದೆ. ಪ್ರಸಕ್ತ ಬಾರಿ ಗೋವಾದಲ್ಲಿ  ಹೊಸ ಪಕ್ಷಗಳು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.

2017 ರಲ್ಲಿ ಪ್ರಾದೇಶಿಕ ಮಿತ್ರಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಆದರೆ ಈ ಬಾರಿ “22 ಪ್ಲಸ್ ಇನ್ 2022” ಎಂಬ ಘೋಷಣೆಯೊಂದಿಗೆ ಸ್ವಂತ ಬಲದಿಂದ ಬಹುಮತ ಪಡೆಯುವ ಗುರಿಯನ್ನು ಬಿಜೆಪಿ ಹೊಂದಿದೆ. ಕಾಂಗ್ರೆಸ್ ಪಕ್ಷವಂತೂಸರ್ಕಾರ ರಚಿಸಲಿದ್ದೇವೆ ಎಂದು ಹೇಳಿದೆ. ಆದರೆ ಇವೆಲ್ಲವೂ ಮತದಾರರ ಕೈಯ್ಯಲ್ಲಿದ್ದು ನಾಳೆ, ಫೆ. 14 ರಂದು ಗೋವಾದ ಮತದಾರರು ಯಾವ ಪಕ್ಷಕ್ಕೆ ಆಶೀರ್ವದಿಸಲಿದ್ದಾರೆ ಎಂಬುದು ಬಾರಿ ಕುತೂಹಲ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next