Advertisement
ಕಲಂಗುಟ್‍ನ ಪಂಚಾಯತ ಅಧ್ಯಕ್ಷರು ಪ್ರತಿಮೆ ಬಳಿ ಬಂದು ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಇದೇ ವೇಳೆ ಆಕ್ರೋಶಗೊಂಡ ಪ್ರತಿಭಟನಾಕಾರರು ಪಂಚಾಯಿತಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.ಆದರೆ ಕಲಂಗುಟ್ ಪಂಚಾಯತ್ ಪ್ರತಿಮೆಯನ್ನು ತೆಗೆಯುವ ಆದೇಶವನ್ನು ಹಿಂಪಡೆದಿದೆ. ಆದರೆ, ಪಂಚಾಯತ ಅಧ್ಯಕ್ಷರು ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಲಂಗುಟ್‍ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಹತ್ತು ದಿನಗಳೊಳಗೆ ತೆರವು ಮಾಡುವಂತೆ ಕಲಂಗುಟ್ ಪಂಚಾಯತ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಸಾವಿರಾರು ಶಿವ ಪ್ರೇಮಿಗಳು ಮಂಗಳವಾರ ಕಲಂಗುಟ್ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು. ಪಂ.ಅಧ್ಯಕ್ಷರು ಬಹಿರಂಗ ಕ್ಷಮೆಯಾಚಿಸದ ಹೊರತು ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕಲಂಗುಟ್ ಪಂ.ಅಧ್ಯಕ್ಷ ಜೋಸೆಫ್ ಸಿಕ್ವೇರಾ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಶಿವಪ್ರೇಮಿಗಳ ಆಕ್ರಮಣಕಾರಿ ಪಾತ್ರದಿಂದಾಗಿ ಪ್ರತಿಮೆ ತೆರವಿಗೆ ನೀಡಿದ್ದ ನೋಟಿಸ್ ಅನ್ನು ಪಂಚಾಯತ್ ಅಧ್ಯಕ್ಷ ಜೋಸೆಫ್ ಸಿಕ್ವೇರಾ ಹಿಂಪಡೆದಿದ್ದಾರೆ.
Related Articles
Advertisement