ಪಣಜಿ : ಇತ್ತೀಚೆಗಷ್ಟೆ ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಗೋವಾದಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನಲ್ಲಿ ಮೈಕ್ರೊ ಪ್ಲ್ಯಾಸ್ಟಿಕ್ ಅಂಶ ಪತ್ತೆಗೆ ರಾಜ್ಯ ಸರ್ಕಾರವು ವಾಟರ್ ಟ್ಯಾಪ್ ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ರಾಜ್ಯ ಲೊಕೋಪಯೋಗಿ ಸಚಿವ ದೀಪಕ್ ಪಾವುಸ್ಕರ್ ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕುಡಿಯುವ ನೀರಿನಲ್ಲಿ ಮೈಕ್ರೊ ಪ್ಲ್ಯಾಸ್ಟಿಕ್ ಅಂಶ ಇರುವಿಕೆಯನ್ನು ಕಂಡುಹಿಡಿಯಲು ರಾಜ್ಯದಲ್ಲಿ ಟ್ಯಾಪ್ ವಾಟರ್ ಪರೀಕ್ಷೆ ನಡೆಸಲು ನಾನು ಆದೇಶಿಸಿದ್ದೇನೆ. ಕುಡಿಯುವ ನೀರಿನ ಮಾದರಿಯನ್ನು ಸಂಗ್ರಹಿಸಿದ ನಂತರ ಪುಣೆ ಅಥವಾ ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ನ ಯಾರು ಬ್ರಿಟಷರ ಗುಂಡಿಗೆ ಎದೆಯೊಡ್ಡಿದ್ದರು ಎಂದು ತನಿಖೆಯಾಗಬೇಕು: ನಾರಾಯಣಸ್ವಾಮಿ
ಇಂತಹ ಮಾದರಿಯ ನೀರಿನ ಪರೀಕ್ಷಾ ಸೌಲಭ್ಯವು ರಾಜ್ಯದಲ್ಲಿ ಲಭ್ಯವಿಲ್ಲ. ಲೊಕೋಪಯೋಗಿ ಇಲಾಖೆಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.
2019 ರಲ್ಲಿ ಡಬ್ಲ್ಯುಎಚ್‍ಒ ವರದಿಯ ಪ್ರಕಾರ ಮೈಕ್ರೊಪ್ಲ್ಯಾಸ್ಟಿಕ್ ಅಂಶಗಳು ಪರಿಸರದಲ್ಲಿ ಎಲ್ಲೆಡೆ ಇರುತ್ತದೆ. ಸಮುದ್ರದಿಂದ ಹಿಡಿದು ಬಾಟಲ್ ನೀರಿನ ವರೆಗೆ ಎಲ್ಲ ರೀತಿಯ ನೀರಿನಲ್ಲಿ ಪತ್ತೆಯಾಗಿದೆ. ಪ್ರಪಂಚದಾದ್ಯಂತ ಟ್ಯಾಪ್ ವಾಟರ್‍ನಲ್ಲಿಯೂ ಕೂಡ ಅದೇ ಅಂಶ ಕಂಡುಬರುತ್ತದೆ. ರಾಜ್ಯದಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಸುರಕ್ಷಿತ ಮತ್ತು ಮಾನವನ ಬಳಕೆಗೆ ಯೋಗ್ಯವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ವಿತರಣೆಗೆ ಎಚ್ ಡಿ ಎಫ್ ಸಿ ಬ್ಯಾಂಕ್ ಗೆ ಆರ್ ಬಿ ಐ ಅನುಮತಿ..!?