ಪಣಜಿ : ರಾಜ್ಯದಲ್ಲಿನ ಯಾವ ಯಾವ ಮಹಾವಿದ್ಯಾಲಯಗಳಲ್ಲಿ ಸಪ್ಟೆಂಬರ್ 1 ರಿಂದ ಭೌತಿಕ ತರಗತಿಗಳನ್ನು ಅಥವಾ ಆಫ್ ಲೈನ್ ತರಗತಿಗಳನ್ನು ಆರಂಭಿಸಲು ಸಾಧ್ಯವಿದೆಯೋ ಅಲ್ಲಿ ತರಗತಿಗಳನ್ನು ಆರಂಭಿಸಬಹುದು ಎಂದು ಸರ್ಕಾರವು ಮಹಾವಿದ್ಯಾಲಯಗಳಿಗೆ ಸೂಚನೆ ನೀಡಿದೆ.
ಇದನ್ನೂ ಓದಿ : ಗಮನಿಸಿ: LPG ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತಷ್ಟು ದುಬಾರಿ, ಎಷ್ಟು ಏರಿಕೆಯಾಗಿದೆ…
ರಾಜ್ಯದಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ಬಂದಿರುವುದರಿಂದ ಯಾವ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳನ್ನು ಕರೆಯಿಸಿ ತರಗತಿ ಆರಂಭಿಸಲು ಸಾಧ್ಯವಿದೆಯೋ ಅವರು ತರಗತಿಯನ್ನು ಆರಂಭಿಸಬಹುದು. ಯಾವ ವಿದ್ಯಾಲಯಗಳಲ್ಲಿ ತರಗತಿ ಆರಂಭಿಸಲು ಸಾಧ್ಯವಿಲ್ಲವೋ ಅವರು ಆನ್‍ಲೈನ್ ತರಗತಿ ಮುಂದುವರೆಸಬೇಕು ಎಂದು ಸರ್ಕಾರವು ಮಹಾವಿದ್ಯಾಲಯಗಳಿಗೆ ಸೂಚನೆ ನೀಡಿದೆ.
ಉಚ್ಛ ಶಿಕ್ಷಣ ಸಂಚಾಲನಾಲಯದ ಸಂಚಾಲಕ ಪ್ರಸಾದ ಲೋಲಯೇಕರ್ ಮಾಹಿತಿ ನೀಡಿ- ರಾಜ್ಯದ ಮಹಾವಿದ್ಯಾಲಯಗಳಿಗೆ ಸದ್ಯ ರಜೆಯಿದೆ. ಯುಜಿಸಿ ನಿಯಮಾನುಸಾರ ಸಪ್ಟೆಂಬರ್ 1 ರಿಂದ ಮಹಾವಿದ್ಯಾಲಯ ಆರಂಭಗೊಳ್ಳಲಿದೆ ಎಂದರು.
ಇದನ್ನೂ ಓದಿ : ಬಿಜೆಪಿ ಯೋಜನೆಗಳನ್ನು ಜನ ಸ್ವಾಗತಿಸುತ್ತಿದ್ದಾರೆ, ಕಾಂಗ್ರೆಸ್ ಬೂಟಾಡಿಕೆ ಮಾಡ್ತಿದೆ : ಕಾರಜೋಳ