Advertisement

ಮಹದಾಯಿ ನದಿ ಉಕ್ಕಿ ಮನೆ ಕಳೆದುಕೊಂಡವರ ಅಳಲು ಕೇಳುವವರರಿಲ್ಲ?

04:06 PM Aug 29, 2021 | Team Udayavani |

ಪಣಜಿ: ಗೌರಿಗಣೇಶ ಹಬ್ಬ ಸಮೀಪಿಸುತ್ತಿದೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಮಹದಾಯಿ ನದಿ ಉಕ್ಕಿ ಉಂಟಾದ ಪ್ರವಾಹದಲ್ಲಿ ಹಲವು ಮನೆಗಳು ನೆಲಸಮವಾಗಿದೆ. ಆದರೆ ಇದುವರೆಗೂ ಗೋವಾ ಸರ್ಕಾರ ಇವರಿಗೆ ಮನೆ ನಿರ್ಮಿಸಿಕೊಡುವ ಕೆಲಸ ಮಾಡಿಲ್ಲ. ಇದರಿಂದಾಗಿ ಪ್ರಸಕ್ತ ವರ್ಷ ನಾವು ಗಣೇಶನನ್ನು ಎಲ್ಲಿ ಪೂಜಿಸುವುದು ಎಂದು ಈ ಎಲ್ಲಾ ಕುಟುಂಬಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

Advertisement

ಕಳೆದ ಕೆಲ ದಿನಗಳ ಹಿಂದೆ ಮಹದಾಯಿ ನದಿ ಉಕ್ಕಿ ಹರಿದ ಸಂದರ್ಭದಲ್ಲಿ ಗೋವಾ ರಾಜ್ಯದಲ್ಲಿ ನೂರಾರು ಮನೆಗಳಿಗೆ ಹಾನಿಯಾಗಿದೆ. ಹಲವರು ಮನೆ ಕಳೆದುಕೊಂಡು ಬೀದಿಗೆ ಬರುವಂತಾಗಿದೆ. ಆದರೆ ಸರ್ಕಾರ ಈ ನಿರಾಶ್ರಿತರಿಗೆ ಕೂಡಲೇ ಮನೆ ನಿರ್ಮಿಸಿಕೊಡುವ ಯಾವುದೇ ಪ್ರಯತ್ನ ಮಾಡಿಲ್ಲ. ಇದರಿಂದಾಗಿ ಇದೀಗ ಗೌರಿ ಗಣೇಶ ಹಬ್ಬಕ್ಕೆ ನಾವು ಗಣೇಶನನ್ನು ಎಲ್ಲಿ ಪೂಜಿಸುವುದು ಎಂದು ಪೊಂಡಾ ತಾಲೂಕಿನ ಗಾಂಜೆ ಗ್ರಾಮದ ಹಿರಿಯ ನಾಗರಿಕ ಮಹಾದೇವ ವಿಠ್ಠಲ ಫಡತೆ ರವರು ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ವಿಚ್ಛೇದನ ಹಂತಕ್ಕೆ ಬಂದು ತಲುಪಿದ ನಾಗಚೈತನ್ಯ-ಸಮಂತಾ ದಾಂಪತ್ಯ ?

ಪ್ರವಾಹದಲ್ಲಿ ಮನೆ ಕಳೆದುಕೊಂಡ ಹಲವು ಕುಟುಂಬಗಳ ಸ್ಥಿತಿ ಸದ್ಯ ಹೇಳತೀರದಂತಾಗಿದೆ, ಈಗಲಾದರೂ ಎಚ್ಚೆತ್ತು ಸರ್ಕಾರ ಈ ನಿರಾಶ್ರಿತ ಕುಟುಂಬಗಳಿಗೆ ಕೂಡಲೇ ಮನೆ ನಿರ್ಮಿಸಿಕೊಡುವ ಕೆಲಸ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next