ಪಣಜಿ: ಗೋವಾಕ್ಕೆ ಆಗಮಿಸಿದ್ದ ಪುಣೆಯ ಪ್ರವಾಸಿಯೋರ್ವರ ವಿವಿಧ ವಸ್ತುಗಳನ್ನು ಕಳ್ಳತನ ನಡೆಸಿದ್ದ ಆರೋಪಿಯನ್ನು ಗೋವಾದ ಹಣಜುಣ ಪೋಲಿಸರು ಕಾರ್ಯಾಚರಣೆ ನಡೆಸಿ ಒಂದು ತಿಂಗಳ ನಂತರ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಳ್ಳತನ ಜುಲೈ 20 ರಂದು ನಡೆದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ- ಪ್ರತಿಕ ಧರ್ಮೇಶ್ ಪಾಂಡೆ ಎಂಬ ಪುಣೆಯ ಪ್ರವಾಸಿಯೋರ್ವರು ಗೋವಾಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರ ಲ್ಯಾಪ್‍ಟಾಪ್ ಸೇರಿದಂತೆ ವಿವಿಧ ವಸ್ತುಗಳು ಸೇರಿ ಸುಮಾರು ಒಂದೂವರೆ ಲಕ್ಷ ರೂ ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿದ್ದರು.
ಇದನ್ನೂ ಓದಿ:ಕಲಬುರಗಿ: ಪಕ್ಷೇತರ ಅಭ್ಯರ್ಥಿ ಅಷ್ಟಗಿ ಪರ ಜಗದ್ಗುರುಗಳ ಪ್ರಚಾರ
ಈ ಘಟನೆಗೆ ಸಂಬಂಧಿಸಿದಂತೆ ಸಾಳಗಾಂವನ ರೋಹಿತ್ ಸಾಳಗಾಂವಕರ್ ಮತ್ತು ಸಮಿಧ ಸಾಳಗಾಂವಕರ್ ಎಂಬ ಇಬ್ಬರು ಶಂಕಿತರನ್ನು ಪೋಲಿಸರು ಬಂಧಿಸಿದ್ದು ಅವರಿಂದ ವಿವಿಧ ಕಳ್ಳತನದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ನಿರೀಕ್ಷಕ ಸೂರಜ್ ಗಾವಸ್ ಮಾಹಿತಿ ನೀಡಿದ್ದಾರೆ.