ಪಣಜಿ: “ಒಂದು ರಾಖಿ ಸೈನಿಕರಿಗಾಗಿ” ಈ ಕಾರ್ಯಕ್ರಮವನ್ನು ಕಳೆದ 7 ವರ್ಷಗಳಿಂದ ರಾಜ್ಯದಲ್ಲಿ ಆಯೋಜಿಸಲಾಗುತ್ತಿದೆ. ರಾಜ್ಯದ ಜನತೆಯ ಆಶೀರ್ವಾದದಿಂದಲೇ ನನಗೆ ಹಿಮಾಚಲಪ್ರದೇಶದ ರಾಜ್ಯಪಾಲರಾಗುವ ಅವಕಾಶ ಲಭ್ಯವಾಯಿತು. ಹಿಮಾಚಲಪ್ರದೇಶವು ಚೀನಾದ ಗಡಿ ಭಾಗವಾಗಿದೆ. ಈ ಗಡಿ ಭಾಗದಲ್ಲಿ ಭಾರತೀಯ ಯೋಧರು ಹಗಲಿರುಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ ಎಂದು ಹಿಮಾಚಲಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ನುಡಿದರು.
ಕಾಣಕೋಣದಲ್ಲಿ ಆಯೋಜಿಸಿದ್ದ ಒಂದು ರಾಖಿ ಸೈನಿಕರಿಗಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.
ಇದನ್ನೂ ಓದಿ:ಸೆ.5 ರಂದು ರೈತರ ಮಕ್ಕಳ ಶಿಷ್ಯವೇತನ ಬಿಡುಗಡೆಗೆ ಚಾಲನೆ: ಸಿಎಂ ಬೊಮ್ಮಾಯಿ
ಆಗಸ್ಟ್ 22 ರಂದು ನಾನು ಶಿಮ್ಲಾಕ್ಕೆ ವಾಪಸ್ಸಾಗಲಿದ್ದೇನೆ. ಆಗಸ್ಟ್ 26 ಅಥವಾ 27 ರಂದು ಹಿಮಾಚಲಪ್ರದೇಶದ ಚೀನಾ ಗಡಿ ಭಾಗದಲ್ಲಿರುವ ಭಾರತೀಯ ಸೈನಿಕರಿಗೆ ಗೋವಾದ ಕಾಣಕೋಣದಲ್ಲಿ “ಒಂದು ರಾಖಿ ಸೈನಿಕರಿಗಾಗಿ” ಕಾರ್ಯಕ್ರಮದಲ್ಲಿ ನೀಡಿರುವ ರಾಖಿಯನ್ನು ಪ್ರತಿಯೊಬ್ಬ ಸೈನಿಕರ ಕೈಗೆ ಕಟ್ಟುತ್ತೇನೆ ಎಂದು ಹಿಮಾಚಲಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ನುಡಿದರು.
ಈ ಸಂದರ್ಭದಲ್ಲಿ ನಿವೃತ್ತ ಸೈನ್ಯಾಧಿಕಾರಿ ಅನಂತ ಜೋಶಿ, ಮಾಜಿ ಸಚಿವ ರಮೇಶ್ ತವಡಕರ್, ಮತ್ತಿತರರು ಉಪಸ್ಥಿತರಿದ್ದರು.