Advertisement

ಕರ್ನಾಟಕದ 11 ಜನ ಮೀನುಗಾರರನ್ನು ವಶಕ್ಕೆ ಪಡೆದ ಗೋವಾ ಪೋಲಿಸರು

03:39 PM Oct 12, 2021 | Team Udayavani |

ಪಣಜಿ: ದಕ್ಷಿಣ ಗೋವಾದ ಬಾಣಾವಲಿ ಸಮುದ್ರದಲ್ಲಿ ಕರ್ನಾಟಕದ ಮೀನುಗಾರರು ಅನಧೀಕೃತವಾಗಿ ಒಳ ನುಸುಳಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಗೋವಾದ ಸ್ಥಳೀಯ ಮೀನುಗಾರರ ಸಹಕಾರದಿಂದ ಮತ್ಸ್ಯೋದ್ಯೋಗ ವಿಭಾಗ ಹಾಗೂ ಕಿನಾರಿ ಸುರಕ್ಷಾ ಪೋಲಿಸರು ಕರ್ನಾಟಕದಿಂದ ಗೋವಾ ಸಮುದ್ರದಲ್ಲಿ ಬಂದು ಮೀನುಗಾರಿಕೆ ನಡೆಸುತ್ತಿದ್ದ ಎರಡು ಬೋಟ್ ಜಫ್ತಿ ಮಾಡಿದ್ದಾರೆ. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಕರ್ನಾಟಕದ ಈ ಮೀನುಗಾರಿಕಾ ಬೋಟ್‍ನಲ್ಲಿದ್ದ 11 ಜನ ಮೀನುಗಾರರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

Advertisement

ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ಗೋವಾದ ಬಾಣಾವಲಿ ಮೀನುಗಾರರು ಸೋಮವಾರ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳಿದ್ದರು. ಆದರೆ ಹೊರ ರಾಜ್ಯದ ಮೀನುಗಾರರು ಗೋವಾ ಸಮುದ್ರ ಸರಹದ್ದಿನಲ್ಲಿ ಬಂದು ಮೀನುಗಾರಿಕೆ ನಡೆಸುತ್ತಿರುವುದು ಗೋವಾ ಮೀನುಗಾರರಿಗೆ ಕಂಡುಬಂತು. ಕೂಡಲೆ ಗೋವಾ ಮೀನುಗಾರರು ಕಿನಾರಿ ಸುರಕ್ಷಾ ಪೊಲೀಸ್ ಹಾಗೂ ಮತ್ಸ್ಯೋದ್ಯೋಗ ವಿಭಾಗಕ್ಕೆ ಮಾಹಿತಿ ನೀಡಿದರು. ಕೂಡಲೆ ಆಗಮಿಸಿದ ಪೋಲಿಸರು ಸ್ಥಳೀಯ ಮೀನುಗಾರರ ಸಹಕಾರದಿಂದ ಕರ್ನಾಟಕದಿಂದ ಬಂದಿದ್ದ 2 ಮೀನುಗಾರಿಕಾ ಬೋಟ್ ಜಪ್ತಿ ಮಾಡಿ ಎಲ್ಲ ಮೀನುಗಾರರನ್ನು ವಷಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ವಚನಗಳಿಗೆ ಬೀಗ ಹಾಕಿ ಮಠಾಧಿಪತಿಗಳ ರಾಜಕೀಯ

ಗೋವಾದ ಸಮುದ್ರದ ಸರಹದ್ದಿನಲ್ಲಿ ಒಳನುಸುಳಿ  ಮೀನುಗಾರಿಕೆ ನಡೆಸುವ ಹೊರ ರಾಜ್ಯದ ಮೀನುಗಾರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸ್ಥಳೀಯ ಮೀನುಗಾರ ಪೆಲೆ ಫರ್ನಾಂಡೀಸ್ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next