Advertisement

BYPOLL: ಗೋವೆಯ ಎರಡೂ ಕ್ಷೇತ್ರ ಬಿಜೆಪಿಗೆ, ದಿಲ್ಲಿ ಗೆದ್ದ ಆಪ್‌

11:48 AM Aug 28, 2017 | Team Udayavani |

ಪಣಜಿ : ಗೋವೆಯಲ್ಲಿನ ಆಡಳಿತರೂಢ ಬಿಜೆಪಿ ಕಳೆದ ಆ.23ರಂದು ರಾಜ್ಯದಲ್ಲಿನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ  ಎರಡನ್ನೂ ಜಯಿಸಿದೆ. 

Advertisement

ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಅವರು ಪಣಜಿ ಕ್ಷೇತ್ರದಿಂದಲೂ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆಅವರು ವಾಲಪೋಯಿ ಕ್ಷೇತ್ರದಿಂದಲೂ ಗೆಲವು ಸಾಧಿಸಿದ್ದಾರೆ. 

ಪರ್ರೀಕರ್‌ (9,862 ಮತ) ತಮ್ಮ ನಿಕಟ ಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಗಿರೀಶ್‌ ಛೋಡಣ್‌ಕರ್‌ (5,059 ಮತ)  ಅವರನ್ನು 4,803 ಮತಗಳಿಂದ ಸೋಲಿಸಿದ್ದಾರೆ. 

ವಾಲಪೋಯಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಅವರು ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್‌ನ ರಾಯ್‌ ನಾಯಕ್‌ ಅವರನ್ನು 10,066 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

ಮೂರನೇ ಹಾಗೂ ಅಂತಿಮ ಸುತ್ತಿನ ಮತ ಎಣಿಕೆ ಮುಗಿದಿದ್ದಾಗ ರಾಣೆ ಅವರಿಗೆ 16,167 ಮತಗಳು ಪ್ರಾಪ್ತವಾಗಿದ್ದವು. ರಾಯ್‌ ನಾಯಕ್‌ ಅವರಿಗೆ 6,101 ಮತಗಳು ಮಾತ್ರವೇ ಸಿಕ್ಕಿದ್ದವು. 

Advertisement

ಪಕ್ಷೇತರ ಅಭ್ಯರ್ಥಿ ರೋಹಿದಾಸ್‌ ಗಾಂವಕರ್‌ಗೆ 316 ಮತಗಳು ಸಿಕ್ಕಿವೆ. 454 ಮತಗಳು ನೋಟಾ ಪಾಲಾಗಿವೆ. 

ದಿಲ್ಲಿ ಗೆದ್ದ ಆಪ್‌

ದಿಲ್ಲಿಯ ಬವಾನಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಪ್‌ ಅಭ್ಯರ್ಥಿ ರಾಮ್‌ ಚಂದರ್‌ ಜಯ ಸಾಧಿಸಿದ್ದಾರೆ. ಅವರು 12ನೇ ಸುತ್ತಿನ ಮತ ಎಣಿಕೆ ಮುಗಿದಾಗ ಕಾಂಗ್ರೆಸ್‌ ಅಭ್ಯರ್ಥಿ ಸುರೇಂದರ್‌ ಕುಮಾರ್‌ ಅವರಿಗಿಂತ ಮುಂದಿದ್ದರು. 

12ನೇ ಸುತ್ತಿನ ಮತ ಎಣಿಕೆಯ ಅಂತ್ಯದಲ್ಲಿ  ಆಪ್‌ ಅಭ್ಯರ್ಥಿಗೆ 23,216 ಮತಗಳು ಸಿಕ್ಕಿವೆಯಾದರೆ ಕಾಂಗ್ರೆಸ್‌ ಅಭ್ಯರ್ಥಿ ಕುಮಾರ್‌ಗೆ 21,848 ಮತಗಳು ದೊರಕಿವೆ.

ಮೂರನೇ ಸ್ಥಾನದಲ್ಲಿರುವ ಬಿಜೆಪಿ ಅಭ್ಯರ್ಥಿ ವೇದ ಪ್ರಕಾಶ್‌ಗೆ 16,561 ಮತಗಳು ಸಿಕ್ಕಿವೆ.

Advertisement

Udayavani is now on Telegram. Click here to join our channel and stay updated with the latest news.

Next