Advertisement
ಗೋವಾದಲ್ಲಿ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರೇ ಮುಖ್ಯಮಂತ್ರಿಯಾಗುವುದು ಖಚಿತವಾಗಿದ್ದು, ಈಗಾಗಲೇ ರಾಜ್ಯಪಾಲರ ನಿವಾಸಕ್ಕೆ ಹೋಗಿ, ಸರ್ಕಾರ ರಚನೆಯ ಹಕ್ಕನ್ನೂ ಮಂಡಿಸಿದ್ದಾರೆ.
Related Articles
Advertisement
ಇದಾದ ಬಳಿಕ ಗಡ್ಕರಿ ಮತ್ತು ಪರ್ರಿಕರ್ ಅವರು, ರಾಜ್ಯಪಾಲರ ನಿವಾಸಕ್ಕೆ ತೆರಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ತಮ್ಮ ಬಳಿ ಬಹುಮತಕ್ಕೆ ಬೇಕಾದ ಸಂಖ್ಯೆ ಇವೆ. ಹೀಗಾಗಿ ಅವಕಾಶ ನೀಡುವಂತೆ ಕೋರಿಕೊಂಡರು. ಎಲ್ಲವೂ ಅಂದುಕೊಂಡಾಂತಾದರೆ ಮಂಗಳವಾರವೇ ಗೋವಾದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಂಭವವಿದೆ.
ಬಿಜೆಪಿ ಮೈತ್ರಿಕೂಟ: 22
ಬಿಜೆಪಿ 13, ಎಂಜಿಪಿ 3, ಜಿಎಫ್ಬಿ 3,ಎನ್‌ಸಿಪಿ1, ಇತರೆ 218 ಕಾಂಗ್ರೆಸ್ ಇತರೆ 1 (ಇನ್ನೂ ನಿರ್ಧಾರ ಆಗಿಲ್ಲ) ಮಣಿಪುರದಲ್ಲೂ ಕೇಸರಿ ಕಹಳೆ
ಇಂಫಾಲ್: ಅಸ್ಸಾಂ, ಅರುಣಾಚಲ ಪ್ರದೇಶದ ನಂತರ, ಮಣಿಪುರ ಕೂಡ ಬಿಜೆಪಿ ಮಡಿಲಿಗೆ ಬೀಳುವುದು ನಿಶ್ಚಿತವಾಗಿದೆ. ಕಾಂಗ್ರೆಸ್‌ನ ಒಬ್ಬ ಹಾಗೂ ಟಿಎಂಸಿಯ ಏಕೈಕ ಶಾಸಕ ಬಿಜೆಪಿ ಸೇರಲಿದ್ದು, ಸರ್ಕಾರ ರಚನೆಯ ಹಾದಿ ಸುಗಮವಾಗಿದೆ. ಬಿಜೆಪಿಯೇ ಸರ್ಕಾರ ರಚಿಸುವ ಬಗ್ಗೆ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಈಶಾನ್ಯ ರಾಜ್ಯಗಳ ಉಸ್ತುವಾರಿ ರಾಮ್ ಮಾಧವ್ ಅವರೇ ದೃಢಪಡಿಸಿದ್ದಾರೆ. ಈಗಾಗಲೇ ಬಿಜೆಪಿಗೆ 30 ಸದಸ್ಯರ ಬೆಂಬಲ ಸಿಕ್ಕಿದ್ದು, ಇನ್ನೊಬ್ಬರ ಬೆಂಬಲ ಅಗತ್ಯವಿದೆ. ಈ ಒಂದು ಸ್ಥಾನದ ಬೆಂಬಲವೂ ನಮಗೇ ದೊರೆತಿದ್ದು, ಬಹುಮತ ಸಾಬೀತು ಪಡಿಸುವ ವೇಳೆ ಪ್ರಕಟ ಮಾಡಲಿದ್ದೇವೆ. ಹೀಗಾಗಿ ಬಿಜೆಪಿಯೇ ಸರ್ಕಾರ ರಚಿಸಲಿದೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ಆದರೆ ಭಾನುವಾರ ರಾತ್ರಿ ವೇಳೆಗೆ ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದಿದ್ದ ಟಿ ಶ್ಯಾಮ್ ಕುಮಾರ್ ಅವರು ಬಿಜೆಪಿ ಸೇರುವುದಾಗಿ ಘೋಷಿಸಿದ್ದು, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ. ಹೀಗಾಗಿ 60 ಸದಸ್ಯ ಬಲದ ವಿಧಾನಸಭೆ 59ಕ್ಕೆ ಕುಸಿಯಲಿದೆ. ಜತೆಗೆ ಟಿಎಂಸಿಯ ಏಕೈಕ ಶಾಸಕ ಕೂಡ ಬಿಜೆಪಿಗೆ ಸೇರಲಿದ್ದಾರೆ. ಈ ಮೂಲಕ ಬಿಜೆಪಿಯ ಬಲ 32ಕ್ಕೆ ಏರಿಕೆಯಾಗಿದ್ದು, ಸರ್ಕಾರ ರಚನೆ ಪಕ್ಕಾ ಆಗಿದೆ. ಶನಿವಾರದ ಫಲಿತಾಂಶದ ಪ್ರಕಾರ, ಬಿಜೆಪಿ, ಎನ್‌ಪಿಪಿ ಮತ್ತು ಎಲ್‌ಜೆಪಿ ಮೈತ್ರಿಕೂಟಕ್ಕೆ 26 ಸ್ಥಾನಗಳು ದೊರೆತಿವೆ. ಕಾಂಗ್ರೆಸ್ 28ರಲ್ಲಿ ಗೆದ್ದಿದ್ದು, ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿರುವ ಎನ್‌ಪಿಎಫ್ ಬಿಜೆಪಿಗೇ ಬೆಂಬಲ ನೀಡಲಿದ್ದು, ಈ ಬಗ್ಗೆ ಈಗಾಗಲೇ ರಾಜ್ಯಪಾಲರಿಗೆ ಪತ್ರವನ್ನೂ ರವಾನಿಸಿದೆ. ಹೀಗಾಗಿ ಬಿಜೆಪಿಗೆ 30 ಸದಸ್ಯರ ಬಲ ಸಿಕ್ಕಿದ್ದು, ಇನ್ನೊಬ್ಬರ ಬೆಂಬಲ ಮಾತ್ರ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿರುವ ಬಿಜೆಪಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಆದರೆ 28 ಸ್ಥಾನ ಗಳಿಸಿರುವ ಕಾಂಗ್ರೆಸ್‌ಗೆ ತೃಣಮೂಲ ಕಾಂಗ್ರೆಸ್‌ನ ಶಾಸಕ ಬೆಂಬಲ ಘೋಷಿಸಿದ್ದಾರೆ. ಹೀಗಾಗಿ ಅವರ ಬೆಂಬಲ 29ಕ್ಕೇರಿದೆ. ಬಹುಮತಕ್ಕೆ ಇನ್ನೂ ಇಬ್ಬರ ಬೆಂಬಲ ಬೇಕಾಗಿದೆ. ಈ ಹಿನ್ನೆಲೆಯಲ್ಲಿಯೇ ಮುಖ್ಯಮಂತ್ರಿ ಒಕ್ರಮ್ ಇಬೋಬಿ ಸಿಂಗ್ ಅವರು ಶನಿವಾರ ರಾತ್ರಿಯೇ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪಕ್ಷೇತರಗೆ ಭಾರಿ ಬೇಡಿಕೆ
ಮಣಿಪುರದ ಜಿರಿಬಮ್ ಕ್ಷೇತ್ರದಿಂದ ಪಕ್ಷೇತರನಾಗಿ ಗೆದ್ದಿರುವ ಅಶಬ್ ಉದ್ದೀನ್ ಅವರು ಇನ್ನೂ ಯಾವ ಪಕ್ಷಕ್ಕೂ ಬೆಂಬಲ ಘೋಷಿಸಿಲ್ಲ. ಆದರೆ ಇದುವರೆಗೂ ಅವರು ಯಾರ ಕೈಗೂ ಸಿಕ್ಕಿಲ್ಲ. ಈ ಬಗ್ಗೆ ಭಾನುವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇìವಾಲ, ಬಿಜೆಪಿ ಇವರನ್ನು ಅಪಹರಿಸಿದೆ ಎಂದು ಆರೋಪಿಸಿದ್ದರು. ಆದರೆ ಇದನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಯಾದವ್ ತಳ್ಳಿಹಾಕಿದ್ದಾರೆ.
ಬಿಜೆಪಿ ಮೈತ್ರಿ ಕೂಟ – 32
ಬಿಜೆಪಿ- 21, ಟಿಎಂಸಿ-1, ಎನ್‌ಪಿಎಫ್-4,ಎಲ್‌ಜೆಪಿ-1, ಎನ್‌ಪಿಪಿ-4, ಕಾಂಗ್ರೆಸ್ -1
ಕಾಂಗ್ರೆಸ್-28 (-1)
ಇತರೆ 1(ಯಾರಿಗೂ ಬೆಂಬಲವಿಲ್ಲ) ಸಾರಥಿ ಪರ್ರಿಕರ್ ಗೋವಾ ವಾಪ್ಸಿ