Advertisement

Goa ಮಾನಕುರಾದ್ ಮಾವಿನ ಹಣ್ಣು ಡಜನ್‍ಗೆ 2,500 ರೂ.!!

06:38 PM Apr 09, 2023 | Team Udayavani |

ಪಣಜಿ: ಗೋವಾದ ಮಾವಿನ ಹಣ್ಣುಗಳ ರಾಜ ಮಾನಕುರಾದ್ ಮಾರುಕಟ್ಟೆಗೆ ಬಂದು ಎರಡು ತಿಂಗಳು ಕಳೆದರೂ ಬೆಲೆ ಮಾತ್ರ ಇನ್ನೂ ಇಳಿಕೆಯಾಗಿಲ್ಲ.  ಪ್ರತಿ ಡಜನ್‍ಗೆ  ಕಳೆದ ಒಂದು ತಿಂಗಳ ಹಿಂದೆ 5,000 ರೂಗಳಿತ್ತು, ಆದರೆ ಇಂದು 2,500 ರೂ. ಬಂದು ತಲುಪಿದೆ. ಸಕ್ಕರೆಯಷ್ಟೇ ಸಿಹಿಯಾದ ಮಾನಕುರಾದ್ ಮಾವಿನ ಹಣ್ಣು ಇದುವರೆಗೂ ಜನಸಾಮಾನ್ಯರ ಕೈಗೆಟುಕದಿರುವಂತಾಗಿಯೇ ಉಳಿದಿದೆ.

Advertisement

ಸದ್ಯ ಗೋವಾದ ಮಾರುಕಟ್ಟೆಗೆ ಮಾನಕುರಾದ್ ಮಾವಿನ ಹಣ್ಣಿನ ಜೊತೆಗೆ ಆಪೂರ್, ಪಾಯರಿ, ಶೆಂದೂರಿ,  ಹೀಗೆ ನಾನಾ ಬಗೆಯ ಮಾವು ಮಾರುಕಟ್ಟೆ ಪ್ರವೇಶಿಸಿದ್ದು, ಈ ಮಾವಿನ ಹಣ್ಣುಗಳು ಡಜನ್ ಗೆ ಸರಾಸರಿ ಸುಮಾರು 2000 ರೂ.ನಂತೆ ಮಾರಾಟವಾಗುತ್ತಿದೆ. ಇಷ್ಟು ಹಣ ಕೊಟ್ಟು ಮಾವಿನ ಹಣ್ಣಿನ ರುಚಿಯನ್ನು ಸಾಮಾನ್ಯ ನಾಗರಿಕರು ಸವಿಯಲಾಗದೆ ಮಾವಿನ ಹಣ್ಣಿನ ಬೆಲೆ ಕುಸಿತಕ್ಕೆ ಕಾಯುತ್ತಿರುವಂತಾಗಿದೆ.

ಮುಂದಿನ ತಿಂಗಳುಗಳಲ್ಲಿ ಮಾವು ಉತ್ಪಾದನೆ ಹೆಚ್ಚಾಗಲಿದ್ದು, ಬೆಲೆ ಎಲ್ಲರಿಗೂ ಕೈಗೆಟಕಲಿದೆ ಎನ್ನುತ್ತಾರೆ ಮಾರಾಟಗಾರರು. ರಾಜ್ಯದಲ್ಲಿ ಪ್ರಸಕ್ತ ವರ್ಷ ಮಾವಿನ ಬೆಳೆಯ ಕೊರತೆಯಿರುವ ಕಾರಣ  ಮತ್ತು ಮಾವಿನ ಹಣ್ಣಿನ ಬೆಲೆ ಕೈಗೆಟುಕದ ಕಾರಣ ಹಲವು ಗ್ರಾಹಕರು ಸೇಬು, ದ್ರಾಕ್ಷಿ , ಮೋಸಂಬಿ ಮತ್ತಿತರ ರಸಭರಿತ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಆದ್ದರಿಂದ, ಇತರ ಹಣ್ಣುಗಳಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹಣ್ಣು ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next