Advertisement

ನ.20ರಿಂದ 28: ಅಂತಾರಾಷ್ಟ್ರೀಯ ಚಿತ್ರೋತ್ಸವ; ಈ ವಿಭಾಗದ ಸಿನಿಮಾ ತಪ್ಪದೇ ವೀಕ್ಷಿಸಿ…

07:13 PM Nov 16, 2022 | Team Udayavani |

ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವವಷ್ಟೇ ಅಲ್ಲ. ಎಲ್ಲ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ತಪ್ಪದೇ ನೋಡಬೇಕಾದ ವಿಭಾಗಗಳಲ್ಲಿ ಬಹಳ ಪ್ರಮುಖವಾದುದು ಪ್ರಶಸ್ತಿ ಪಾರಿತೋಷಕಕ್ಕಾಗಿ ಸೆಣಸುವ ಚಿತ್ರಗಳ ವಿಭಾಗ ’ಅಂತಾರಾಷ್ಟ್ರೀಯ ಸಿನಿಮಾ ವಿಭಾಗ’ (ಐಸಿ).

Advertisement

ನವೆಂಬರ್‌ 20 ರಿಂದ 28 ರವರೆಗೆ ಗೋವಾದಲ್ಲಿ ನಡೆಯುವ ಇಫಿ ಚಿತ್ರೋತ್ಸವದಲ್ಲೂ ಈ ವಿಭಾಗವನ್ನು ತಪ್ಪಿಸಿಕೊಳ್ಳಬಾರದು. ಒಂದುವೇಳೆ ಯಾವುದಾದರೂ ಬೇರೆ ವಿಭಾಗದಲ್ಲಿ ಪ್ರಮುಖ ಸಿನಿಮಾಗಳು ಇದ್ದಾಗ, ಈ ವಿಭಾಗದಲ್ಲಿರುವ ಪ್ರಮುಖ ದೇಶಗಳ ಸಿನಿಮಾಗಳನ್ನು ಹೇಗಾದರೂ ಘಮೊದಲನೇ ಬಾರಿ ಆಗದಿದ್ದರೆ, ಪುನರಾವರ್ತನೆಯಾಗುವ ಸಂದರ್ಭದಲ್ಲಿ ಹೊಂದಿಸಿಕೊಂಡು ನೋಡುವುದು ಮುಖ್ಯ.

ಪ್ರತಿ ಬಾರಿ ಸುಮಾರು 15 ಸಿನಿಮಾಗಳು ಈ ವಿಭಾಗದಲ್ಲಿ ಪ್ರದರ್ಶಿತವಾಗುತ್ತವೆ. ಪ್ರಮುಖ ದೇಶಗಳ ಹಾಗೂ ವಿವಿಧ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗೆ ಸೆಣಸಿದ, ಸದ್ದು ಮಾಡಿದ ಚಲನಚಿತ್ರಗಳೂ ಇರುತ್ತವೆ. ಇವೆಲ್ಲವೂ ಇತ್ತೀಚಿನ ಘಒಂದು ವರ್ಷದೊಳಗಿನ ಚಲನಚಿತ್ರಗಳೂ ಆಗಿರುತ್ತವೆ. ಇವುಗಳನ್ನು ವೀಕ್ಷಿಸಿದರೆ ಜಗತ್ತಿನ ಸಿನಿಮಾ ಟ್ರೆಂಡ್‌ ಬಗ್ಗೆಯೂ ಮಾಹಿತಿ ಲಭ್ಯವಾಗಬಹುದು.

Advertisement

ಅದೇ ರೀತಿ 53 ನೇ ಇಫಿ ಚಿತ್ರೋತ್ಸವದಲ್ಲಿ 15 ಚಿತ್ರಗಳು ಪ್ರಶಸ್ತಿಗೆ ಸೆಣಸುತ್ತಿವೆ. ಇವುಗಳ ಪೈಕಿ ಮೂರು ಭಾರತೀಯ ಚಲನಚಿತ್ರಗಳೂ ಸೇರಿರುವುದು ವಿಶೇಷ.

ವಿವೇಕ್‌ ಅಗ್ನಿಹೋತ್ರಿಯವರ ‘ದಿ ಕಾಶ್ಮೀರ್‌ ಫೈಲ್ಸ್‌’, ಕಮಲ್‌ ಕಣ್ಣನ್‌ ಅವರ ತಮಿಳು ಚಿತ್ರ ‘ಕುರಂಗು ಪೆಡಲ್‌’ಹಾಗೂ ಅನಂತ ಮಹಾದೇವನ್‌ ಅವರ ‘ದಿ ಸ್ಟೋರಿ ಟೆಲ್ಲರ್‌’ಪ್ರಶಸ್ತಿಗೆ ಸೆಣಸುತ್ತಿವೆ.

ಉಳಿದಂತೆ ಪೊಲೀಷ್‌ ಸಿನಿಮಾ ನಿರ್ದೇಶಕ ಝಾನುಸಿಯವರ (Krzysztof Zanussi) ‘ಪರ್ಫೆಕ್ಟ್‌ ನಂಬರ್‌’, ಮೆಕ್ಸಿಕಾದ ಸಿನಿಮಾ ನಿರ್ದೇಶಕ ಕರ್ಲೋಸ್‌ ರ [Carlos Eichelmann Kaiser] ‘ರೆಡ್‌ ಶೂಸ್‌’, ಇರಾನಿನ ಹೊಸ ಅಲೆ ಸಿನಿಮಾದ ಪ್ರಮುಖ ನಿರ್ದೇಶಕ ದರಿಯುಸ್‌ ಮೆಹ್ರುಜಿ [Dariush Mehrjui] ಯವರ ‘ಎ ಮೈನರ್’, ಇರಾನಿನ ಮತ್ತೊಂದು ಚಿತ್ರ ನದೀರ್‌ [Nader Saeivar] ಅವರ ‘ನೋ ಎಂಡ್‌’, ಪ್ಯಾಲೆಸ್ತೀಯನ್‌ ಇಸ್ರೇಲಿ ನಿರ್ದೇಶಕ ಹಜ್‌ ಅವರ [Maha Haj’s] ‘ಮೆಡಿಟೇರಿಯನ್‌ ಫೀವರ್‌’, ಫಿಲಿಫೀನ್ಸ್‌ ನ ನಿರ್ದೇಶಕ ಲಾವ್‌ ರ [Lav Diaz]] ‘ವೆನ್‌ ದಿ ವೇವ್ಸ್‌ ಆರ್‌ ಗಾನ್‌’, ಕೋಸ್ಟರಿಕಾದ ನಿರ್ದೇಶಕ ವ್ಯಾಲೆಂಟಿನಾರ [Valentina Maurel] ‘ಹ್ಯಾವ್‌ ಎಲೆಕ್ಟ್ರಿಕ್‌ ಡ್ರೀಮ್ಸ್‌’, ಅಜೇರ್ ಬೈಜನ್ ಸಿನಿಮಾ ನಿರ್ದೇಶಕ ಆಸಿಫ್ ರ [Asif Rustamov] ‘ಕೋಲ್ಡ್ ಆ್ಯಸ್ ಮಾರ್ಬಲ್’, ಬರ್ಲಿನ್‌ ಸಿನಿಮೋತ್ಸವದಲ್ಲಿ ಪ್ರಶಸ್ತಿಗೆ ಸೆಣಸಿದ ಉರ್ಸುಲ್‌ ಅವರ [Ursula Meier] ‘ದಿ ಲೈನ್‌’, ಕೈರೋ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡ ಅರ್ಜೆಂಟೀನಾದ ನಿರ್ದೇಶಕ ರೊಡ್ರಿಗೊ [Rodrigo Guerrero]  ಅವರ ‘ಸೆವೆನ್‌ ಡಾಗ್ಸ್‌’, ಶ್ರೀಲಂಕಾದ ನಿರ್ದೇಶಕ ಅರುಣ್‌ ಜಯವರ್ಧನೆಯವರ ‘ಮಾರಿಯಾ: ದಿ ಓಷಿಯನ್‌ ಏಂಜೆಲ್‌’ ಹಾಗೂ ಸೌದದ್‌ ಕಾದನ್‌ [Soudade Kaadan] ಅವರ ನೇಜೋಘ [Nezouh] ಚಲನಚಿತ್ರಗಳು ಪ್ರಶಸ್ತಿಗೆ ಸೆಣಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next