Advertisement

ಗೋವಾ ರಾಜ್ಯಾದ್ಯಂತ ಭಾರಿ ಮಳೆ ; ಜನಜೀವನ ಅಸ್ತವ್ಯಸ್ಥ

05:27 PM Jul 06, 2022 | Team Udayavani |

ಪಣಜಿ: ಕಳೆದ ನಾಲ್ಕೈದು ದಿನಗಳಿಂದ ಗೋವಾ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಗೋವಾ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು 156.2 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Advertisement

ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ಮಳೆಯು ತಡವಾಗಿ ಆರಂಭಗೊಂಡರೂ ಕೂಡ ಪ್ರಸಕ್ತ ಬಾರಿ ಸದ್ಯ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದೆ. ಪ್ರಸಕ್ತ ಬಾರಿ ವಾಡಿಕೆಗಿಂತ ಶೇ 13.2 ರಷ್ಟು ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕುಶಾವತಿ, ದೂಧಸಾಗರ, ನದಿಗಳು ತುಂಬಿ ಹರಿಯುತ್ತಿದ್ದು ಕೆಲ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಇನ್ನೂ ನಾಲ್ಕೈದು ದಿನ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು  ನದಿ ತೀರದ ಪ್ರದೇಶದಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಸಮುದ್ರದ ಅಲೆಗಳೇ ಆಕರ್ಷಣೇಯ ಕೇಂದ್ರ

ಗೋವಾದ ಪ್ರಸಿದ್ಧ ದೋನಾಪಾವುಲ್‍ನ ಸಮುದ್ರ ದಡದಲ್ಲಿ ಆಳೆತ್ತರದ ಅಲೆಗಳು ಏಳುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

Advertisement

ಪ್ರತಿ ವರ್ಷ ಮಳೆಗಾಲ ಬಂತೆಂದರೆ ದೋನಾಪಾವುಲ್ ಸಮುದ್ರ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ ಸಮುದ್ರದಲ್ಲಿ ಭಾರಿ ಅಲೆಗಳು ಏಳುವುದರಿಂದ ಇದನ್ನು ವೀಕ್ಷಿಸುವುದೇ ಒಂದು ಸುಂದರ ಅನುಭವ.

ಗೋವಾದ ಪ್ರವಾಸಿ ತಾಣಗಳಲ್ಲಿಯೇ ದೋನಾಪಾವುಲ್ ವಿಶೇಷ ಆಕರ್ಷಣೆ ಹೊಂದಿದೆ ಎಂದರೂ ತಪಾಗಲಾರದು. ಇಲ್ಲಿ ಹಲವಾರು ಪ್ರಸಿದ್ಧ ಚಲನಚಿತ್ರಗಳು ಚಿತ್ರೀಕರಣಗೊಂಡಿದೆ. ಇಲ್ಲಿ ಪ್ರವಾಸಿಗರು ಹೆಚ್ಚಾಗಿ ಸೂರ್ಯಾಸ್ತ ವೀಕ್ಷಣೆಗೆಂದೇ ಆಗಮಿಸುತ್ತಾರೆ. ಆದರೆ ಮಳೆಗಾಲದ ಸಂದರ್ಭದಲ್ಲಿ ಇಲ್ಲಿ ದಡಕ್ಕೆ ಬಂದು ಅಪ್ಪಳಿಸುವ ಆಳೆತ್ತರದ ಸಮುದ್ರದ ಅಲೆಗಳ ವೀಕ್ಷಣೆಗೆಂದೇ ಪ್ರವಾಸಿಗರು ಆಗಮಿಸುತ್ತಾರೆ. ಸದ್ಯ ಮಳೆಗಾಲವಾಗಿದ್ದರಿಂದ ಇಲ್ಲಿ ಏಳುತ್ತಿರುವ ಸಮುದ್ರದ ಅಲೆಗಳೇ ಆಕರ್ಷಣೇಯ ಕೇಂದ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next