ಪಣಜಿ: ಗೋವಾ ರಾಜ್ಯವು ಒಂದು ಕೇಂದ್ರ ಸ್ಥಳವಾಗಿರುವುದರಿಂದ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಉತ್ತಮ ಲಾಜಿಸ್ಟಿಕ್ ಹಬ್ ಆಗುವ ಸಾಮರ್ಥ್ಯ ಹೊಂದಿದೆ.ಗೋವಾದಲ್ಲಿ ಲಾಜಿಸ್ಟಿಕ್ ಹಬ್ ಘೋಷಣೆಯನ್ನು ಕೆಲವರು ಟೀಕಿಸಿದ್ದರು. ಆದರೆ, ಈಗ ವಿಮಾನ ನಿಲ್ದಾಣ ಆರಂಭಗೊಂಡಿದ್ದು, ಸರಕು ಸಾಗಣೆ ಕೇಂದ್ರವಾಗಿ ಮಾರ್ಪಟ್ಟಿದ್ದು, ಮತ್ತಷ್ಟು ಸುಧಾರಣೆಗಳನ್ನು ಮಾಡಬಹುದಾಗಿದೆ. ಗೋವಾದಲ್ಲಿ ರೈತರು ಮತ್ತು ತೋಟಗಾರಿಕಾ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಮುಖ್ಯ ಉದ್ದೇಶದಿಂದ ಲಾಜಿಸ್ಟಿಕ್ ಹಬ್ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಸುರೇಶ್ ಪ್ರಭು ನುಡಿದರು.
ಗೋವಾದ ಬಾಣಾವಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾನು ಗೋವಾ ವಿಮಾನ ನಿಲ್ದಾಣಕ್ಕೆ ಹೋದಾಗ ಕೇಳಿದೆ. ಆ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಕೆಲಸ ಮಾಡಬಹುದು. ಲಾಜಿಸ್ಟಿಕ್ಸ್ ಹಬ್ ಕೇವಲ ಉದ್ಯಮಿಗಳಿಗೆ ಮಾತ್ರವಲ್ಲದೆ ರೈತರು ಮತ್ತು ತೋಟಗಾರಿಕಾ ತಜ್ಞರಿಗೂ ಪ್ರಯೋಜನವನ್ನು ನೀಡುತ್ತದೆ.
ಗೋವಾದಲ್ಲಿ ಗೋಡಂಬಿ, ಮಾವು, ತೆಂಗು, ಅಡಿಕೆ ಮತ್ತು ಬಾಳೆ ಬೆಳೆಯಲಾಗುತ್ತದೆ. ಈ ಎಲ್ಲಾ ವಸ್ತುಗಳನ್ನು ಗೋವಾದಿಂದ ರಫ್ತು ಮಾಡಬಹುದು. ಅಲ್ಲದೆ, ಗೋವಾದಿಂದ ಹಾಲು ಮತ್ತು ಮಾಂಸವನ್ನು ರಫ್ತು ಮಾಡಲು ಲಾಜಿಸ್ಟಿಕ್ಸ್ ಹಬ್ ಅನ್ನು ಬಳಸಬಹುದು ಎಂದು ಸುರೇಶ್ ಪ್ರಭು ನುಡಿದರು.
ಗೋವಾದಲ್ಲಿಯೇ ಸಾಕಷ್ಟು ಪ್ರಮಾಣದಲ್ಲಿ ಗೋಡಂಬಿ ಬೆಳೆಯಲಾಗುತ್ತದೆ. ಹೀಗಿರುವಾಗ ಗೋವಾಕ್ಕೆ ಹೊರ ರಾಜ್ಯದಿಂದ ಏಕೆ ಗೋಡಂಬಿಯನ್ನು ತರಿಸಿಕೊಳ್ಳಲಾಗುತ್ತಿದೆ. ಗೋವಾದಲ್ಲಿ ಯಥೇಚ್ಛವಾಗಿ ಗೋಡಂಬಿ ಲಭ್ಯವಿದ್ದು, ಹೊರ ರಾಜ್ಯದಿಂದ ಗೋಡಂಬಿ ತರಿಸಿಕೊಳ್ಳುವ ಅಗತ್ಯವಿಲ್ಲ ಎಂದರು.