Advertisement

ಗೋವಾ : ಲಾಕ್ ಡೌನ್ ತೆರವು ಮಾಡಿ ಕಠಿಣ ನಿಯಮಗಳನ್ನು ಮುಂದುವರೆಸಿದ ಸರ್ಕಾರ

07:33 PM May 02, 2021 | Team Udayavani |

ಪಣಜಿ: ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಗೋವಾದಲ್ಲಿ ಲಾಕ್‍ಡೌನ್ ತೆರವುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರೆ. ಆದರೆ ಕೋವಿಡ್-19 ನಿರ್ಬಂಧಗಳು ಇನ್ನೂ ಒಂದು ವಾರ ಮುಂದುವರೆಯಲಿದೆ. ಲಾಕ್‍ಡೌನ್ ಎಂದು ಹೆಸರಿಸದೆಯೇ ಗೋವಾ ಸರ್ಕಾರ ಲಾಕ್‍ಡೌನ್ ಮುಂದುವರೆಸಿದೆ.

Advertisement

ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಎಂ ಸಾವಂತ್- ರಾಜ್ಯದಲ್ಲಿ ಲಾಕ್‍ಡೌನ್ ವಿಸ್ತರಿಸುವಂತೆ ಆಗ್ರಹ ವ್ಯಕ್ತವಾಗುತ್ತಿದೆ. ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಕಠಿಣ ನಿರ್ಬಂಧವನ್ನು ಮುಂದುವರೆಸಲಾಗುವುದು. ಮೇ 3ರ ಬೆಳಿಗ್ಗೆ 6 ಗಂಟೆಗೆ ಪ್ರಸ್ತುತ ಲಾಕ್‍ಡೌನ್ ತೆರವುಗೊಳಿಸಲಾಗುವುದು. ಆದರೆ ಕಠಿಣ ನಿರ್ಬಂಧ ಮುಂದುವರೆಯಲಿದೆ. ರಾಜ್ಯದಲ್ಲಿ ರಿವರ್ ಕ್ರೂಜ್, ವಾಟರ್ ಪಾರ್ಕ್, ಎಂಟರ್‍ಟೈನ್‍ಮೆಂಟ್ ಪಾರ್ಕ್, ಜಿಮ್, ಮಸಾಜ್ ಪಾರ್ಲರ್, ಸೆಲೂನ್, ಕ್ಯಾಸಿನೊ, ಬಾರ್, ಸ್ಪೋಟ್ಸ್ ಕಾಂಪ್ಲೆಕ್ಸ್, ಆಡಿಟೋರಿಯಂ, ಕಮ್ಯುನಿಟಿ ಹಾಲ್‍ಗಳು ಮೇ 10 ರವರೆಗೂ ಬಂದ್ ಇರಲಿದೆ. ಪರೀಕ್ಷೆ ಉದ್ದೇಶವನ್ನು ಹೊರತುಪಡಿಸಿ ಎಲ್ಲ ಶಾಲಾ ಕಾಲೇಜುಗಳು ಬಂದ್ ಇರಲಿದೆ. ಸಾರ್ವಜನಿಕ ಧಾರ್ಮಿಕ ಸ್ಥಳಗಳ ಬಂದ್ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದರು.

ಇದನ್ನೂ ಓದಿ : ಇದು ನನ್ನ ಗೆಲುವಲ್ಲ, ಕಾರ್ಯಕರ್ತರ ಗೆಲುವು: ಮಂಗಳ ಅಂಗಡಿ

50 ಕ್ಕಿಂತ ಕಡಿಮೆ ಜನರೊಂದಿಗೆ ಸರ್ಕಾರದ ಅನುಮತಿಯೊಂದಿಗೆ ನಡೆಯುವ ಕಾರ್ಯಕ್ರಮಗಳನ್ನು ಹೊರತುಪಡಿಸಿ ಸಾಮಾಜಿಕ, ರಾಜಕೀಯ, ಕ್ರೀಡಾ ಮನರಂಜನೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗುವುದು. ಶವಸಂಸ್ಕಾರಕ್ಕೆ 20 ಜನರು ಭಾಗವಹಿಸಬಹುದು. ರೆಸ್ಟೊರೆಂಟ್‍ಗಳು ಶೇ 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದಾಗಿದೆ. ಮೀನು ಮಾರುಕಟ್ಟೆಗಳು, ಪುರಸಭೆ, ಪಂಚಾಯತ್ ಮಾರುಕಟ್ಟೆಗಳು ನಿರ್ಬಂಧಿತ ಸಾಮರ್ಥ್ಯ ದಂತೆಯೇ ಕಾರ್ಯ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next