ಪಣಜಿ : ಗೋವಾ ರಾಜ್ಯದಲ್ಲಿ ಕರ್ಫ್ಯೂ ಕಾಲಾವಧಿಯನ್ನು ಸೋಮವಾರದವರೆಗೆ (ಜುಲೈ 19 ರ ವರೆಗೆ) ವಿಸ್ತರಣೆ ಮಾಡಲಾಗಿದ್ದು, ಹಲವು ರಿಯಾಯತಿ ನೀಡಲಾಗಿದೆ.
ರಾಜ್ಯದಲ್ಲಿ ಸದ್ಯ ಆರಂಭದಲ್ಲಿರುವ ಕಫ್ರ್ಯೂ ಜುಲೈ 12 ರಂದು ಬೆಳಿಗ್ಗೆ 7 ಗಂಟೆಗೆ ಮುಕ್ತಾಯಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯದಲ್ಲಿ ಕರ್ಫ್ಯೂ ಕಾಲಾವಧಿಯನ್ನು ಜುಲೈ 19 ರವರೆಗೆ ವಿಸ್ತರಣೆ ಮಾಡಲಾಗಿದೆ.
ಇದನ್ನೂ ಓದಿ : ಅಧಿಕಾರಕ್ಕೆ ಬಂದರೇ,ಕೋವಿಡ್ ನಿರ್ವಹಣೆಯ ಬಗ್ಗೆ ಲೆಕ್ಕ ಪರಿಶೋಧನೆ ಮಾಡ್ತೇವೆ: ಯಾದವ್ ವ್ಯಂಗ್ಯ
ಕರ್ಫ್ಯೂ ಕಾಲಾವಧಿ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಸರ್ಕಾರ ಕೆಲ ರಿಯಾಯತಿಯನ್ನು ನೀಡಿದೆ. ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಶೇ 50 ರಷ್ಟು ಸಾಮರ್ಥ್ಯದಲ್ಲಿ ಜಿಮ್ ತೆರೆಯಲು ಅವಕಾಶ ನೀಡಲಾಗಿದೆ.
ಸಭೆ ಸಮಾರಂಭಗಳನ್ನು 100 ಜನರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ಮಾನ್ಯತೆ ಪಡೆದು ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ. ಧಾರ್ಮಿಕ ಸ್ಥಳಗಳನ್ನು 15 ಜನರ ಉಪಸ್ಥಿತಿಯಲ್ಲಿ ನಡೆಸಲು ಅನುಮತಿ ನೀಡಲಾಗಿದೆ.
ಇದನ್ನೂ ಓದಿ : ಕೋವಿಡ್ ವಾರಿಯರ್ ಗಳನ್ನು ಗುರುತಿಸಿ ಗೌರವಿಸಿ: ಸುಪ್ರೀತ್ ಕೌರ್