Advertisement

ಗೋವಾ ಸರ್ಕಾರ ಕಾಂಗ್ರೆಸ್‌ ಮಾತು ಕೇಳುತ್ತಾ : ಜಾರ್ಜ್‌

06:35 AM Dec 30, 2017 | Team Udayavani |

ಬೆಂಗಳೂರು: ಮಹದಾಯಿ ನೀರಿನ ವಿವಾದ ಬಗೆ ಹರಿಸಲು ಗೋವಾ ಕಾಂಗ್ರೆಸ್‌ ಪಾತ್ರ ಏನಿದೆ. ಅಲ್ಲಿನ ಸರ್ಕಾರ ಪ್ರತಿಪಕ್ಷದ ಮಾತು ಕೇಳಿ ಸರ್ಕಾರ ನಡೆಸುತ್ತಾ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಪ್ರಶ್ನಿಸಿದ್ದಾರೆ. 

Advertisement

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗೋವಾ ಮುಖ್ಯಮಂತ್ರಿ ಕರ್ನಾಟಕಕ್ಕೆ ಕುಡಿಯಲು ನೀರು ಬಿಡುವುದಾಗಿ ಯಡಿಯೂರಪ್ಪಗೆ ಪತ್ರ ಬರೆದಿದ್ದರೆ ಅದರಂತೆ ನೀರು ಬಿಡಲಿ, ನಮಗೆ ನೀರು ಮುಖ್ಯ.

ಆದರೆ, ಗೋವಾ ಜಲ ಸಂಪನ್ಮೂಲ ಸಚಿವರು ಹನಿ ನೀರೂ ಬಿಡುವುದಿಲ್ಲ ಎಂದು ಹೇಳಿದ್ಧಾರೆ. ಮುಖ್ಯಮಂತ್ರಿಯ ತೀರ್ಮಾನ ಅಲ್ಲಿನ ಸಂಪುಟದ ಸಚಿವರಿಗೆ ತಿಳಿದಿಲ್ಲವೇ ಎಂದು ಜಾರ್ಜ್‌ ಪ್ರಶ್ನಿಸಿದ್ದಾರೆ. ಗೋವಾದಲ್ಲಿರುವ ಸೋನಿಯಾ ಗಾಂಧಿ ಅಲ್ಲಿನ ಕಾಂಗ್ರೆಸ್‌ ಮುಖಂಡರನ್ನು ಒಪ್ಪಿಸಲಿ ಎಂಬ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಜಾರ್ಜ್‌, ಸೋನಿಯಾ ಗಾಂಧಿ ಏನು ಪ್ರಧಾನಿಯೇ ? ಯಡಿಯೂರಪ್ಪ ಪ್ರಧಾನಿಯನ್ನು ಒಪ್ಪಿಸಲಿ. ಗೋವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ. ಯಡಿಯೂರಪ್ಪ ಮೇಲೆ ನಂಬಿಕೆ ಇದ್ದರೆ, ಅವರನ್ನು ನಂಬಿಯಾದರೂ ರಾಜ್ಯಕ್ಕೆ ನೀರು ಕೊಡಲಿ ಎಂದು ಜಾರ್ಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next